-10ನೇ ತರಗತಿ ಪರೀಕ್ಷೆ ಬರೆದ ಎಲ್ಲರೂ ಪಾಸ್
ಚೆನ್ನೈ: ತಮಿಳುನಾಡಿನಲ್ಲಿ ಇಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2020ರಲ್ಲಿ ತಮಿಳುನಾಡು ಶೇ.100 ರಷ್ಟು ಫಲಿತಾಂಶ ದಾಖಲಿಸುವ ಮೂಲಕ ದಾಖಲೆ ಬರೆದಿದೆ.
ಈ ವರ್ಷ ನಡೆದ ಪರೀಕ್ಷೆಗೆ 9 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 4,68,070 ವಿದ್ಯಾರ್ಥಿನಿಯರು, 4,71,7589 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಬಾರಿ ಪರೀಕ್ಷೆ ಬರೆದ 6,235 ದಿವ್ಯಾಂಗ ವಿದ್ಯಾರ್ಥಿಗಳು ಸಹ ಪಾಸ್ ಆಗಿದ್ದಾರೆ.
Advertisement
Advertisement
ಮಾರ್ಚ್ 27ರಿಂದ ಏಪ್ರಿಲ್ 13ರವರೆಗೆ 10ನೇ ಕ್ಲಾಸ್ ಪರೀಕ್ಷೆಗಳು ನಡೆದಿದ್ದವು. ಕೊರೊನಾದಿಂದಾಗಿ ಫಲಿತಾಂಶ ತಡವಾಗಿ ಪ್ರಕಟಗೊಂಡಿದೆ. ಶೇ.80 ರಷ್ಟು ಅಂಕಗಳು ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಪಡೆದಿರುತ್ತಾರೆ. ಇನ್ನುಳಿದ ಶೇ.20 ಅಂಕಗಳು ವಿದ್ಯಾರ್ಥಿಗಳ ಹಾಜರಾತಿಗೆ ನೀಡಲಾಗಿರುತ್ತದೆ.
Advertisement
Advertisement
ಇಂದು ಮಧ್ಯಾಹ್ನ ಮೂರು ಗಂಟೆಗೆ ನಮ್ಮ ರಾಜ್ಯದ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ. ಜುಲೈ 3ರಂದು ಎಸ್ಎಸ್ಎಲ್ಸಿ ಪರೀಕ್ಷೆ ಮುಗಿದಿದ್ದು, ಕೊರೊನಾ ಮಧ್ಯೆ ಯಶಸ್ವಿಯಾಗಿ ನಡೆದಿದ್ದ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಮುಗಿಯುತ್ತಿದ್ದಂತೆ ಮೌಲ್ಯಮಾಪನವನ್ನು ಸಹ ಅಷ್ಟೇ ವೇಗವಾಗಿ ಮುಗಿಸಲಾಗಿದೆ. ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಫಲಿತಾಂಶ ಲಭ್ಯವಾಗೋ ವೆಬ್ ಸೈಟ್ ವಿವರ www.kseeb.kar.nic.in ಹಾಗೂ www.karresults.nic.in ವೆಬ್ಸೈಟ್ಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಫಲಿತಾಂಶ ನೋಡಬಹುದಾಗಿದೆ. ಅಲ್ಲದೆ ಪೋಷಕರ ಮೊಬೈಲ್ಗೆ ಫಲಿತಾಂಶದ ಎಸ್ಎಂಎಸ್ ಸಹ ಬರಲಿದೆ.