– ಲಾಕ್ಡೌನ್ ಸುಳಿವು ನೀಡಿದ್ರಾ ಸಚಿವರು?
ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ನಂತರ ಗಟ್ಟಿ ನಿರ್ಧಾರ ಕೈಗೊಳ್ಳುವ ಮೂಲಕ ಬೆಂಗಳೂರು ಹಾಗೂ ರಾಜ್ಯದಲ್ಲಿ ಕೊರೊನಾ ನಿಯಂತ್ರಿಸುತ್ತೇವೆ ಎಂದು ಹೇಳುವ ಮೂಲಕ ಕಂದಾಯ ಸಚಿವ ಆರ್.ಅಶೋಕ್ ಮತ್ತೆ ಲಾಕ್ಡೌನ್ ಮಾಡುವ ಕುರಿತು ಸುಳಿವು ನೀಡಿದ್ದಾರೆ.
ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಎಸ್ಎಲ್ಸಿ ಪರೀಕ್ಷೆ ಮುಗಿಯುವುದನ್ನು ಕಾಯುತ್ತಿದ್ದೇವೆ. ಪರೀಕ್ಷೆ ಮುಗಿಯುತ್ತಿದ್ದಂತೆ ಗಟ್ಟಿ ನಿರ್ಧಾರ ಕೈಗೊಳ್ಳುತ್ತೇವೆ. ಆದರೆ ಲಾಕ್ಡೌನ್ ಮಾಡುವುದಿಲ್ಲ ಕುರಿತು ಚಿಂತನೆ ನಡೆಸಿಲ್ಲ. ಇಂದು ಸಹ ಮೂರು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದೇವೆ ಈ ಕುರಿತು ಸಿಎಂ ಪತ್ರಿಕಾ ಪ್ರಕಟಣೆ ಹೊರಡಿಸಲಿದ್ದಾರೆ. ಅಂತರಾಜ್ಯ ಪ್ರಯಾಣ ನಿರ್ಬಂಧದ ಕುರಿತು ಸಹ ಸಿಎಂ ತಿಳಿಸುತ್ತಾರೆ ಎಂದರು.
Advertisement
Advertisement
ಕೊರೊನಾ ರೋಗಿಗಳಿಗೆ ತಾಜ್ ಹಾಗೂ 5 ಸ್ಟಾರ್ ಹೋಟೆಲ್ಗಳಿಂದ ಊಟ ನೀಡಲಾಗುತ್ತಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ಸಂಜೆ ತಿಂಡಿ ಹಾಗೂ ರಾತ್ರಿ ಊಟ ನೀಡಲಾಗುತ್ತಿದೆ. ಅಲ್ಲದೆ ಮಧ್ಯೆ ಬಾದಾಮಿ ಹಾಲು ಹಾಗೂ ಜ್ಯೂಸ್ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ದರ ನಿಗದಿಯ ಗೊಂದಲದ ಕುರಿತು ಸೋಮವಾರ ಖಾಸಗಿ ಆಸ್ಪತ್ರೆಗಳ ಸಭೆ ಕರೆಯಲಾಗಿದೆ. ನಂತರ ಖಾಸಗಿ ಕಾಲೇಜುಗಳ ಸಭೆ ನಡೆಸಿ, ನಂತರ ಕ್ರಮ ಕೈಗೊಳ್ಳುತ್ತೇವೆ.
Advertisement
ಖಾಸಗಿ ಆಸ್ಪತ್ರೆಗಳು ದರ ಕಡಿಮೆಯಾಗುತ್ತದೆ ಎಂದು ವಿರೋಧ ವ್ಯಕ್ತಪಡಿಸಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ವಿಪತ್ತಿನ ಸಂದರ್ಭದಲ್ಲಿ ಸರ್ಕಾರದ ಆದೇಶದಂತೆ ಎಲ್ಲ ಖಾಸಗಿ ಆಸ್ಪತ್ರೆಗಳು ನಡೆದುಕೊಳ್ಳಬೇಕು. ಆದರೆ ನಾವು ಇದರ ದುರುಪಯೋಗ ಪಡೆಯುವುದಿಲ್ಲ. ಖಾಸಗಿ ಆಸ್ಪತ್ರೆಯವರೊಂದಿಗೆ ಚರ್ಚೆ ನಡೆಸಿ ಮನವೊಲಿಸುತ್ತೇವೆ. ತಪ್ಪು ಮಾಡಿದರೆ 1 ವರ್ಷ ಶಿಕ್ಷೆಯಾಗುತ್ತದೆ. ಸೋಮವಾರ ಖಾಸಗಿ ಆಸ್ಪತ್ರೆಯವರೊಂದಿಗೆ ಸಭೆ ನಡೆಸಿ, ನಂತರ ಮಾಹಿತಿ ನೀಡುತ್ತೇನೆ ಎಂದು ಆರ್. ಅಶೋಕ್ ತಿಳಿಸಿದರು.
Advertisement
ಕಂಠೀರವ ಕ್ರೀಡಾಂಗಣದಿಂದ ಬೆಡ್ ತಗೆಸಿರುವುದು ತಪ್ಪು. ಈ ರೀತಿ ಮಾಡದಂತೆ ಗೋವಿಂದರಾಜ್ ಅವರಿಗೆ ತಿಳಿಸಿದ್ದೇನೆ. ಅಲ್ಲದೆ ಸದ್ಯಕ್ಕೆ ಕಂಠೀರವ ಸ್ಟೇಡಿಯಂಗೆ ಹೋಗುವ ಪರಿಸ್ಥಿತಿ ಇಲ್ಲ. ಇಂದು ಕಾಲೇಜುಗಳು, ಹಾಸ್ಟೆಲ್ಗಳಲ್ಲಿ 900 ಬೆಡ್ ಸಿಕ್ಕಿವೆ. ಕೃಷಿ ವಿವಿ ಹಾಸ್ಟೆಲ್ನಲ್ಲಿ ಬೆಡ್ ಸಿಕ್ಕಿವೆ ಎಂದು ಮಾಹಿತಿ ನೀಡಿದರು.