ಬೆಂಗಳೂರು: ಪ್ರತಿ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶದ ವೇಳೆ ಶ್ರೇಯಾಂಕ ನೀಡುವ ಮೂಲಕ ಜಿಲ್ಲಾವಾರು ಸ್ಥಾನಗಳನ್ನು ಹಂಚಿಕೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಜಿಲ್ಲಾವಾರು ಸ್ಥಾನಗಳನ್ನು ಗ್ರೇಡ್ ನೀಡುವ ಮೂಲಕ ಹಂಚಿಕೆ ಮಾಡಲಾಗಿದೆ.
ಗ್ರೇಡ್ ಹಂಚಿಕೆ ಮಾಡಿದ್ದು ಯಾಕೆ ಎಂದು ಕೇಳಲಾದ ಪ್ರಶ್ನೆಗೆ ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕಿ ಸುಮಂಗಲ, ಪ್ರತಿ ವರ್ಷ ನಮ್ಮ ಜಿಲ್ಲೆ ಮೊದಲು ನಮ್ಮ ಜಿಲ್ಲೆ ಮೊದಲು ಎಂದು ಜಿಲ್ಲೆಗಳ ಮಧ್ಯೆ ಸ್ಪರ್ಧೆ ನಡೆಯುತ್ತಿತ್ತು. ಈ ಕಾರಣಕ್ಕೆ ಈ ಬಾರಿ ಪ್ರತೀ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಪಾಸಾಗಿರುವವರು ಮತ್ತು ಟಾಪರ್ಗಳ ಸಂಖ್ಯೆಯನ್ನು ಸೇರಿಸಿಕೊಂಡು ಗ್ರೇಡ್ ನೀಡಲಾಗಿದೆ ಎಂದು ಉತ್ತರಿಸಿದರು.
Advertisement
Advertisement
Advertisement
ಯಾವ ಜಿಲ್ಲೆಗೆ ಯಾವ ಗ್ರೇಡ್?
ಎ ಗ್ರೇಡ್: ಒಟ್ಟು 10 ಜಿಲ್ಲೆಗಳಿಗೆ ಎ ಗ್ರೇಡ್ ಸಿಕ್ಕಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಧುಗಿರಿ, ಮಂಡ್ಯ, ಚಿತ್ರದುರ್ಗ, ಕೋಲಾರ, ಉಡುಪಿ, ರಾಮನಗರ, ಹಾಸನ, ಉತ್ತರ ಕನ್ನಡ
Advertisement
ಬಿ ಗ್ರೇಡ್: 20 ಜಿಲ್ಲೆಗಳಿಗೆ ಬಿ ಗ್ರೇಡ್ ಸಿಕ್ಕಿದೆ. ಚಾಮರಾಜನಗರ, ಮಂಗಳೂರು, ಬಳ್ಳಾರಿ, ತುಮಕೂರು, ಶಿರಸಿ, ಬೆಂಗಳೂರು ಉತ್ತರ, ದಾವಣಗೆರೆ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಕಲಬುರಗಿ, ಕೊಪ್ಪಳ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ರಾಯಚೂರು, ಬೆಂಗಳೂರು ದಕ್ಷಿಣ, ಚಿಕ್ಕೋಡಿ.
ಸಿ ಗ್ರೇಡ್: ಮೂರು ಜಿಲ್ಲೆಗಳಿಗೆ ಸಿಕ್ಕಿದೆ. ಗದಗ್, ಹಾವೇರಿ, ಯಾದಗಿರಿ.
ಪರೀಕ್ಷೆ ಬರೆದ ಒಟ್ಟು 8,11,050 ವಿದ್ಯಾರ್ಥಿಗಳ ಪೈಕಿ 5,82,316 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.71.80 ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ ಶೇ.73.70 ಫಲಿತಾಂಶ ದಾಖಲಾಗಿತ್ತು. ಈ ಬಾರಿ 2,24,734 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ.
ಪೂರಕ ಪರೀಕ್ಷೆ ಯಾವಾಗ?
ಉತ್ತರ ಪತ್ರಿಕೆ ಸ್ಕ್ಯಾನ್ ಪಡೆಯಲು ಅರ್ಜಿ ಸಲ್ಲಿಕೆ ಆಗಸ್ಟ್ 20 ಕೊನೆಯ ದಿನಾಂಕವಾಗಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆಗೆ ಆಗಸ್ಟ್ 24 ಕೊನೆ ದಿನವಾಗಿದೆ. ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿ ಪಡೆಯಲು 405 ರೂ., ಮರು ಮೌಲ್ಯಮಾಪನ ಅರ್ಜಿ ಸಲ್ಲಿಕೆಗೆ ಪ್ರತಿ ವಿಷಯಕ್ಕೆ 805 ರೂ. ದರ ನಿಗದಿಯಾಗಿದೆ. ಸೆಪ್ಟೆಂಬರ್ನಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಎರಡು ದಿನಗಳಲ್ಲಿ ಪೂರಕ ಪರೀಕ್ಷೆ ದಿನಾಂಕ ಪ್ರಕಟವಾಗಲಿದೆ.
ಬಾಲಕರು 2,82,461(ಶೇ.66.41), ಬಾಲಕಿಯರು 2,99,855(ಶೇ.77.74) ತೇರ್ಗಡೆಯಾಗಿದ್ದಾರೆ. ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ 3,20,377 (ಶೇ.77.18%), ನಗರ ಪ್ರದೇಶದಲ್ಲಿ 2,37,402(ಶೇ.73.41) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಯಾವ ಗ್ರೇಡ್ನಲ್ಲಿ ಎಷ್ಟು ಮಂದಿ ತೇರ್ಗಡೆ
ಎ+ – 37,457
ಎ – 1,05,345
ಬಿ+ – 1,47,801
ಬಿ – 1,53,860
ಸಿ+ – 98,704
ಸಿ – 14,612
ಶೇ.100 ಫಲಿತಾಂಶ ದಾಖಲಿಸಿದ ಶಾಲೆಗಳು
ಸರ್ಕಾರಿ – 501
ಅನುದಾನಿತ – 139
ಖಾಸಗಿ – 910
ಒಟ್ಟು – 1550
ಶೂನ್ಯ ಫಲಿತಾಂಶ ದಾಖಲಿಸಿದ ಶಾಲೆಗಳು
ಸರ್ಕಾರಿ- 4
ಅನುದಾನ – 11
ಖಾಸಗಿ – 47
ಒಟ್ಟು – 62
223 ಮೌಲ್ಯಮಾಪನ ಕೇಂದ್ರದಲ್ಲಿ 52,219 ಮೌಲ್ಯಮಾಪಕರು ಮೌಲ್ಯಮಾಪನ ಮಾಡಿದ್ದಾರೆ. 19,086 ಮಂದಿ ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯದಿದ್ದರೆ, 8,067 ಕೊರೊನಾ ಇನ್ನಿತರ ಕಾರಣದಿಂದ ಗೈರು ಹಾಜರಿ ಆಗಿದ್ದಾರೆ.