ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿರೋ ದಾಳಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಭ್ರಷ್ಟ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಂಜನಪ್ಪ ಬಲೆಗೆ ಬಿದ್ದಿದ್ದಾನೆ.
Advertisement
ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಹಾಗೂ ನಗದು ಪತ್ತೆಯಾಗಿದೆ. ಬರೋಬ್ಬರಿ 1.2 ಕೆ.ಜಿ ಚಿನ್ನ, 9 ಕೆ.ಜಿ ಬೆಳ್ಳಿ, 5.80 ಲಕ್ಷ ಮೌಲ್ಯದ ಗೃಹ ಉಪಯೋಗಿ ವಸ್ತುಗಳು ಹಾಗೂ ಭಾರೀ ಮೌಲ್ಯದ ವಾಹನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Advertisement
Advertisement
ಬೆಂಗಳೂರಿನ ಮನೆಯಲ್ಲಿ 42 ಲಕ್ಷ ಮೌಲ್ಯದ ವಸ್ತುಗಳು ಪತ್ತೆ ಆಗಿವೆ. ಲೋಕಿಕೆರೆ ಗ್ರಾಮದ ಮನೆಯಲ್ಲಿ 2 ಕೋಟಿ 26 ಲಕ್ಷದ 39 ಸಾವಿರ ಮೌಲ್ಯದ ಆಸ್ತಿ ಪತ್ರ, 8 ಕೆ.ಜಿ ಬೆಳ್ಳಿ 5 ಗ್ರಾಂ ಚಿನ್ನ, ಚನ್ನಗಿರಿಯಲ್ಲಿ ಆಸ್ತಿ ಪಾತ್ರಗಳು ಪತ್ತೆ ಆಗಿವೆ.
Advertisement