ಬೆಂಗಳೂರು: ವಿಕಲಚೇತನ ಕೋಟಾದಲ್ಲಿ ಬಿಬಿಎಂಪಿಯಲ್ಲಿ ಉನ್ನತ ಸ್ಥಾನ ಗಿಟ್ಟಿಸಿಕೊಂಡಿದ್ದ ಅಧಿಕಾರಿಯೋರ್ವರ ಮನೆ ಮೇಲೆ ಎಸಿಬಿ ದಾಳಿ ಮಾಡಿದಾಗ ಅಲ್ಲಿದ್ದ ಮಿನಿ ಬಾರ್ ಕಂಡು ಎಸಿಬಿ ಅಧಿಕಾರಿಗಲೇ ದಂಗಾಗಿದ್ದಾರೆ.
Advertisement
ಬೊಮ್ಮನಹಳ್ಳಿ ವಲಯದ ಬಿಬಿಎಂಪಿಯ ಯೋಜನಾ ವಿಭಾಗದ ಸಹಾಯ ನಿರ್ದೇಶಕ ದೇವೇಂದ್ರಪ್ಪ ವಿಕಲಚೇತನ ಕೋಟಾದಲ್ಲಿ ಬಿಬಿಎಂಪಿಯಲ್ಲಿ ಅಧಿಕಾರಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಹೀಗಿರೋವಾಗ ಕಟ್ಟಡವೊಂದಕ್ಕೆ ಓಸಿ ನೀಡಲು ದೇವೇಂದ್ರಪ್ಪ ಬರೋಬ್ಬರಿ 40 ಲಕ್ಷ ಹಣ ಕೇಳಿದ್ದರಂತೆ. ಅದರ ಅಡ್ವಾನ್ಸ್ ಹಣವಾಗಿ 20 ಲಕ್ಷ ಹಣ ತೆಗೆದುಕೊಳ್ಳೊವಾಗ ಎಸಿಬಿ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
Advertisement
Advertisement
ನಂತರ ವಿಚಾರಣೆಗೆ ಒಳಪಡಿಸಿದಾಗ ಬಿಬಿಎಂಪಿ ಕಚೇರಿಯಲ್ಲೇ ಒಂದಷ್ಟು ನಗದು, ಕಾರಿನಲ್ಲಿ ಏಳುವರೇ ಲಕ್ಷ ಹಣ ಎಲ್ಲವೂ ಸಿಕ್ಕಿತ್ತು. ನಂತರ ಮನೆಯಲ್ಲಿ ಹುಡುಕಾಡಿದಾಗ ಎಸಿಬಿ ಅಧಿಕಾರಿಗಳಿಗೆ ಶಾಕ್ ಕಾದಿತ್ತು ಯಾಕೆಂದರೆ ಮನೆಯಲ್ಲಿ ಮಿನಿ ಬಾರ್ ಒಂದು ತೆರೆದುಕೊಂಡಿತ್ತು. ಇಲ್ಲಿ ವಿದೇಶಿ ಸೇರಿದಂತೆ 120 ಲೀಟರ್ ವಿವಿಧ ಬ್ರ್ಯಾಂಡ್ ನ ಎಣ್ಣೆ ಬಾಟಲ್ಗಳು ಪತ್ತೆಯಾಗಿವೆ. ಜೊತೆಗೆ ಬಿಬಿಎಂಪಿ ಕಚೇರಿಯಲ್ಲಿ ಇರಬೇಕಾದ ಬರೋಬ್ಬರಿ 480 ಫೈಲ್ಗಳು, ಹಿರಿಯ ಅಧಿಕಾರಿಗಳ ಹೆಸರಿನ ನಕಲಿ ಸೀಲು, ಸೈನ್ಗಳು, ವಿವಿಧ ಬ್ಯಾಂಕ್ಗಳ ಬೇನಾಮಿ ಅಕೌಂಟ್ಗಳು, ಆಸ್ತಿ ಪತ್ರಗಳು ದೊರೆತಿದೆ.
Advertisement
ಬಿಬಿಎಂಪಿ ಕಚೇರಿಯಲ್ಲಿ ಇರಬೇಕಾದ 480 ಫೈಲ್ಗಳು ದೇವೇಂದ್ರಪ್ಪನ ಮನೆಗೆ ಹೇಗೆ ಬಂತು? ಹಿರಿಯ ಅಧಿಕಾರಿಗಳ ಹೆಸರಿನ ಸೀಲ್ ಗಳನ್ನು ಬಳಸಿಕೊಂಡು ಏನೂ ಮಾಡುತ್ತಿದ್ದರು ಎಂಬುದರ ಕುರಿತು ಎಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.