ಪ್ರೇಗ್ ಮೃಗಾಲಯದ ಆನೆಯೊಂದರ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ವೀಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ರಮೇಶ್ ಪಾಂಡೆ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ವೀಡಿಯೋಗೆ ಒಂದು ಚಿಕ್ಕ ಕಥೆಯ ರೂಪದಲ್ಲಿ ಕ್ಯಾಪ್ಷನ್ ಕೂಡ ಹಾಕಿದ್ದಾರೆ.
ಆನೆಯ ಮರಿ ದಿನವಿಡೀ ಸಂತೋಷದಿಂದ ಆಟವಾಡಿ ಮೃಗಾಲಯದಲ್ಲಿ ಚಿಕ್ಕ ನಿದ್ರೆಗೆ ಜಾರಿತು. ಕೊಂಚ ಸಮಯದ ಬಳಿಕ ಆನೆ ಮರಿ ಮಲಗಿದ್ದನ್ನು ಕಂಡು ಅದರ ತಾಯಿ ಎಚ್ಚರಿಸಿಲು ಪ್ರಯತ್ನಿಸಿದೆ. ಆದರೆ ಗಾಢ ನಿದ್ರೆಗೆ ಜಾರಿದ್ದ ಆನೆಮರಿ ಎದ್ದೇಳಲೇ ಇಲ್ಲ. ಇದರಿಂದ ಆತಂಕಗೊಂಡ ಆನೆ ಮೃಗಾಲಯದ ಸಿಬ್ಬಂದಿ ಸಹಾಯ ಪಡೆದಿದೆ.
Advertisement
Advertisement
ಮೃಗಾಲಯದ ಸಿಬ್ಬಂದಿ ಆನೆ ಮರಿ ಬಳಿ ಬಂದು ಎಚ್ಚರಗೊಳಿಸಿದ್ದಾರೆ. ಆಗ ಎಚ್ಚರಗೊಂಡ ಆನೆ ಕಣ್ಣು ಬಿಟ್ಟು ಎದ್ದು ಓಡಿ ಹೋಗಿ ತನ್ನ ತಾಯಿಯನ್ನು ತಬ್ಬಿಕೊಳ್ಳುತ್ತದೆ ಎಂದು ರಮೇಶ್ ಪಾಂಡೇ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
Advertisement
After running and frolicking, an elephant calf went into a slumber. Worried mother sought help of zoo keepers to wake him up. Elephants are intelligent and social animals and interesting to observe. An old video from Prague Zoo. pic.twitter.com/EFNnYe0FNc
— Ramesh Pandey (@rameshpandeyifs) March 5, 2021
Advertisement
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದುಮಾಡುತ್ತಿದ್ದು, ಈವರೆಗೂ ಸುಮಾರು 2 ಲಕ್ಷ ವಿವ್ಸ್ ಪಡೆದುಕೊಂಡಿದೆ. ಅಲ್ಲದೆ ಆನೆಯ ಬುದ್ದಿವಂತಿಕೆ ಮತ್ತು ಸಾಮಾಜಿಕ ಪ್ರಜ್ಞೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.