ಪಾಟ್ನಾ: ಬಿಹಾರದಲ್ಲಿ ಲೋಕ ಜನಶಕ್ತಿ ಪಕ್ಷ(ಎಲ್ಜೆಪಿ) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ‘7 ನಿಶ್ಚಿಯ’ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಲಾಗುವುದು. ಅಲ್ಲದೆ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಸಿಎಂ ನಿತೀಶ್ ಕುಮಾರ್ ವಿರುದ್ಧ ಚಿರಾಗ್ ಪಾಸ್ವಾನ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
I said that if they're guilty, they'll be sent to jail after probe. How can it be possible that CM doesn't know about large scale scams & corruption? He's involved too. If not, it'll be clear in a probe. But people & I believe that he's involved, he is corrupt: Chirag Paswan, LJP https://t.co/1eV1IZLE5s pic.twitter.com/Eju0O3lq1o
— ANI (@ANI) October 26, 2020
Advertisement
ಬಕ್ಸಾರ್ನ ಡುಮ್ರಾನ್ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ದೊಡ್ಡ ಪ್ರಮಾಣದ ಹಗರಣ ಮತ್ತು ಭ್ರಷ್ಟಾಚಾರದ ಬಗ್ಗೆ ಸಿಎಂಗೆ ತಿಳಿದಿಲ್ಲ ಎಂದು ಹೇಳಲು ಹೇಗೆ ಸಾಧ್ಯ?. ಸಿಎಂ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಅವರು ತಪ್ಪಿತಸ್ಥರಾಗಿದ್ದರೆ, ತನಿಖೆಯ ನಂತರ ಅವರನ್ನು ಜೈಲಿಗೆ ಕಳುಹಿಸಲಾಗುತ್ತೆ ಎಂದರು.
Advertisement
Why is liquor ban not being reviewed? Is liquor smuggling not going on? Everyone is getting it. Govt & admn are colluding. There is not one minister in Bihar govt who doesn't know about it. If you don't want to review it, it means you yourself are involved: Chirag Paswan, LJP pic.twitter.com/kre6CIAK4B
— ANI (@ANI) October 26, 2020
Advertisement
ಮದ್ಯ ನಿಷೇಧವನ್ನು ಆದೇಶವನ್ನು ಏಕೆ ಪರಿಶೀಲಿಸಲಾಗುತ್ತಿಲ್ಲ, ರಾಜ್ಯದಲ್ಲಿ ಮದ್ಯ ಕಳ್ಳಸಾಗಣೆ ನಡೆಯುತ್ತಿಲ್ಲವೇ?. ಪ್ರತಿಯೊಬ್ಬರೂ ರಾಜ್ಯದಲ್ಲಿ ಮದ್ಯವನ್ನು ಪಡೆಯುತ್ತಿದ್ದಾರೆ. ಸರ್ಕಾರ ಮತ್ತು ಅಧಿಕಾರಿಗಳು ಒಟ್ಟಾಗಿ ಈ ಅವ್ಯವಹಾರ ಮಾಡುತ್ತಿದ್ದಾರೆ. ಬಿಹಾರ ಸರ್ಕಾರದಲ್ಲಿ ಒಬ್ಬ ಮಂತ್ರಿ ಕೂಡ ಇಲ್ಲಿ ಭಾಗಿಯಾಗಿಲ್ಲ ಎಂದಾದರೇ ಸರ್ಕಾರ ಈ ಬಗ್ಗೆ ಪರಿಶೀಲಿಸಬೇಕು. ಅವರು ಪರಿಶೀಲಿಸಲು ಬಯಸದಿದ್ದರೆ ಸರ್ಕಾರವೇ ಇಲ್ಲಿ ಭಾಗಿಯಾಗಿದೆ ಎಂದರ್ಥ ಎಂದು ಆರೋಪಿಸಿದರು.
Advertisement
Everyone knows where the money is going, CM has to contest election & do a lot of things. All of this is a matter of investigation. It'll be investigated by our govt – that where is all the money of liquor smuggling, '7 Nischay' scheme & funds by centre going: Chirag Paswan, LJP https://t.co/jkOF7Dapux
— ANI (@ANI) October 26, 2020
ಮದ್ಯ ಕಳ್ಳ ಸಾಗಾಣಿಕೆ ಹಣ, 7 ನಿಶ್ವಯ ಯೋಜನೆಯ ಅಕ್ರಮ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಇವೆಲ್ಲವೂ ತನಿಖೆಯ ವಿಷಯವಾಗಿದೆ. ಇದನ್ನು ನಮ್ಮ ಸರ್ಕಾರದಿಂದ ತನಿಖೆ ಮಾಡಲಾಗುವುದು ಎಂದು ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ಜನರಿಗೆ ಭರವಸೆ ನೀಡಿದರು.