ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತರ ಜೊತೆ ಇಂದು ಕಾಂಗ್ರೆಸ್ ಬೀದಿಗಿಳಿದಿದೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪೊಲೀಸರು ತಡೆದರೆ ನೀವು ಅಲ್ಲಿಯೇ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.
ಈ ಸಂಬಂಧ ವೀಡಿಯೋ ಬಿಡುಗಡೆ ಮಾಡಿರುವ ಡಿಕೆಶಿ, ಪ್ರತಿಭಟನೆಗೆ ಬೆಂಗಳೂರಿಗೆ ಬರುತ್ತಿರುವ ರೈತರನ್ನ ಬೆಂಗಳೂರು ಹೊರ ವಲಯದಲ್ಲಿ ತಡೆಯಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಇದೇ ವೇಳೆ ಎಲ್ಲೆಲ್ಲಿ ತಡೆಯಲಾಗಿದೆಯೋ ಅಲ್ಲೇ ರಸ್ತೆಗಿಳಿದು ಪ್ರತಿಭಟಿಸುವ ಮೂಲಕ ರೈತರಿಗೆ ಬೆಂಬಲ ಸೂಚಿಸುವಂತೆ ಡಿಕೆಶಿ ಕರೆ ನೀಡಿದರು.
Advertisement
I got several phone calls that farmers coming to Bengaluru from other districts are being stopped by Police & are not being allowed to come to Bengaluru. I urge farmers to stop wherever they are, block highways, roads & protest in support of farmers: Karnataka Congress chief pic.twitter.com/V0NV09z6GQ
— ANI (@ANI) January 20, 2021
Advertisement
ಪೊಲೀಸರು ಬೆಂಗಳೂರಿಗೆ ಬರಲು ಬಿಡುತ್ತಿಲ್ಲ. ವಾಹನಗಳನ್ನು ತಡೆಯುತ್ತಿದ್ದಾರೆ ಎಂದು ಸಾಕಷ್ಟು ಬೆಂಬಲಿಗರು ಹಾಗೂ ರೈತರು ನನಗೆ ಕರೆ ಮಾಡುತ್ತಿದ್ದಾರೆ. ಅಂತವಹವರು ಇದ್ದಲ್ಲಿಂದಲೇ ಹೆದ್ದಾರಿ ಹಾಗೂ ರಸ್ತೆಗಳನ್ನು ತಡೆಹಿಡಿದು ರೈತರ ಪರ ಪ್ರತಿಭಟನೆ ನಡೆಸಬೇಕು ಎಂದು ಹೇಳಿದರು.
Advertisement
ರೈತಪರ ಹೋರಾಟ ನಡೆಸಲು ಬೆಂಗಳೂರಿಗೆ ಆಗಮಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೈತರನ್ನು ಪೊಲೀಸರು ಹೆದ್ದಾರಿಯಲ್ಲೇ ತಡೆಯುತ್ತಿರುವುದು ಖಂಡನೀಯ.
ನಮ್ಮ ಹೋರಾಟದ ಹಕ್ಕು ಕಸಿಯುವ ಅಧಿಕಾರ ಯಾರಿಗೂ ಇಲ್ಲ. ಹೀಗಾಗಿ ಪೊಲೀಸರು ತಡೆದ ಕಡೆಯೇ ರಸ್ತೆಯಲ್ಲಿ ಪ್ರತಿಭಟನೆ ಮಾಡಿ, ರಸ್ತೆ ಬಂದ್ ಮಾಡಿ ಎಂದು ಕಾರ್ಯಕರ್ತರು ಹಾಗೂ ರೈತರಲ್ಲಿ ಮನವಿ. pic.twitter.com/WBi37JREX4
— DK Shivakumar (@DKShivakumar) January 20, 2021
Advertisement
ಬಿಜೆಪಿ ಸರ್ಕಾರವು ಪ್ರತಿಭಟನೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳದಂತೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತದೆ ಎಂಬುದು ನಮಗೆ ಗೊತ್ತಿದೆ. ಸಾಧ್ಯವಾದಷ್ಟು ಜನರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಬಂದು ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
I know BJP govt is trying to stop farmers at any cost and not letting them participate in the protest. I request protesters to come to Sangolli Rayanna statue and participate in the massive protest rally: DK Shivakumar, Karnataka Congress chief https://t.co/R9nfm4AYOp
— ANI (@ANI) January 20, 2021