– ವ್ಯಾಕ್ಸಿನ್ ಬಂದ ಕೂಡಲೇ ಪ್ರತಿಯೊಬ್ಬ ಭಾರತೀಯನಿಗೆ ಲಸಿಕೆ
ನವದೆಹಲಿ: ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ಸಂತಸದ ವಿಷಯವನ್ನ ಹಂಚಿಕೊಂಡರು. ಇಂದು ಮಧ್ಯಾಹ್ನ ಟ್ವೀಟ್ ಮೂಲಕ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡುವ ಕುರಿತು ಪ್ರಧಾನಿಗಳು ಮಾಹಿತಿ ನೀಡಿದ್ದರು. ಲಾಕ್ಡೌನ್ ಬಳಿಕ ಪ್ರಧಾನಿಗಳ ಏಳನೇ ಭಾಷಣ ಇದಾಗಿತ್ತು.
The fatality rate in India is 83 out of every 10 Lakh population in India, whereas it is more than 600 in countries like the US, Brazil, Spain, Britain: Prime Minister Narendra Modi addresses the nation #COVID19 https://t.co/lmsFoFmunI
— ANI (@ANI) October 20, 2020
Advertisement
ಜನತಾ ಕರ್ಫ್ಯೂ ಬಳಿಕ ಇಂದಿನವರೆಗೆ ಹಲವು ಸಂಕಷ್ಟಗಳನ್ನು ಎದುರಿಸಿದ್ದೇವೆ. ಕೊರೊನಾ ನಡುವೆ ಜೀವನ ನಿರ್ವಹಣೆಗಾಗಿ ಜನರು ಮನೆಯಿಂದ ಹೊರ ಬರುತ್ತಿದ್ದಾರೆ. ಲಾಕ್ಡೌನ್ ತೆರವು ಆಗಿರಬಹುದ್ರೆ ಆದ್ರೆ ವೈರಸ್ ಹೋಗಿಲ್ಲ. ಕಳೆದ ಎಂಟು ದಿನಗಳಿಂದ ಕಾಪಾಡಿಕೊಂಡ ಸ್ಥಿತಿಯನ್ನ ಮುಂದೆ ಹಾಳು ಮಾಡಿಕೊಳ್ಳಬಾರದು. ಭಾರತದಲ್ಲಿ ಕೊರೊನಾ ಗುಣಮುಖ ಪ್ರಮಾಣ ಶೇ.83ರಷ್ಟಿದೆ. ಅಭಿವೃದ್ಧಿ ರಾಷ್ಟ್ರಗಳಲ್ಲಿ ಕೊರೊನಾ ಮರಣ ಪ್ರಮಾಣ ಹೆಚ್ಚಿದ್ದು, ನಮ್ಮಲ್ಲಿ ಕಡಿಮೆ ಇದೆ.
Advertisement
Advertisement
ದೇಶದ 2 ಸಾವಿರ ಲ್ಯಾಬ್ ಗಳಲ್ಲಿ ಕೊರೊನಾ ಟೆಸ್ಟ್ ಮಾಡಲಾಗ್ತಿದೆ. 90 ಲಕ್ಷದಷ್ಟು ಬೆಡ್ ಗಳ ವ್ಯವಸ್ಥೆ ದೇಶದಲ್ಲಿದೆ. ಭಾರತದಲ್ಲಿ ನಾಗರೀಕರ ಜೀವ ಉಳಿಸುವಲ್ಲಿ ಸರ್ಕಾರ ಸಫಲವಾಗಿದೆ. ಇಂತಹ ಸಂದರ್ಭದಲ್ಲಿ ಜನರು ಬೇಜಾವಾಬ್ದಾರಿತನ ತೋರಿಸಬಾರದು. ನಿರ್ಲಕ್ಷ್ಯ ನಿಮ್ಮನ್ನು ಅಪಾಯಕ್ಕೆ ದೂಡಬಹುದು. ಭಾರತದಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಲಾಗ್ತಿದೆ.
Advertisement
India has a facility of more than 90 lakh beds for #COVID19 patients. There are 12,000 quarantine centres, around 2000 Corona testing labs. Number of tests will cross 10 Crores soon. In our fight against COVID, rise in the number of tests has been our strength: PM Narendra Modi. pic.twitter.com/t59McoYnQ6
— ANI (@ANI) October 20, 2020
ಪೂರ್ಣ ಪ್ರಮಾಣದಲ್ಲಿ ಸಫಲತೆ ಸಿಗದೇ ಖುಷಿ ಪಡೋದು ಸರಿಯಲ್ಲ. ಕೆಲಸ ಪೂರ್ಣವಾಗದೇ ಸಂತೋಷಪಡೋದು ಒಳ್ಳೆಯದಲ್ಲ. ಕೊರೊನಾಗೆ ವ್ಯಾಕ್ಸಿನ್ ಸಿಗೋವರೆಗೂ ಎಲ್ಲ ನಿಯಮಗಳನ್ನ ಪಾಲಿಸಬೇಕು. ವಿದೇಶಗಳು ಸೇರಿದಂತೆ ದೇಶದಲ್ಲಿ ಕೊರೊನಾ ವ್ಯಾಕ್ಸಿನ್ ಗಾಗಿ ಸಂಶೋಧನೆಗಳು ನಡೆಯುತ್ತಿವೆ. ವ್ಯಾಕ್ಸಿನ್ ಸಿದ್ಧವಾದ ಕೂಡಲೇ ಅದನ್ನ ಪ್ರತಿ ದೇಶವಾಸಿಗೆ ಹೇಗೆ ತಲುಪಿಸಬೇಕು ಎಂಬುದರ ಬಗ್ಗೆ ಸರ್ಕಾರ ಕೆಲಸ ಮಾಡುತ್ತಿದೆ.
Recently, we saw many photos & videos where it is clearly seen that people are not careful anymore. This isn’t right. If you step out without mask, you put your families at risk. We must remember – whether it is America or Europe, cases declined & then there was sudden spike: PM pic.twitter.com/RrrjjpwvUO
— ANI (@ANI) October 20, 2020
ಸದ್ಯ ಸಾಲು ಸಾಲು ಹಬ್ಬಗಳು ಬಂದಿದೆ. ಈ ಸಮಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಹಬ್ಬಗಳನ್ನು ಆಚರಿಸಿ. ಈ ಹಬ್ಬಗಳು ನಿಮ್ಮಲ್ಲಿ ಉತ್ಸಾಹ ಮತ್ತು ಸಂತೋಷವನ್ನ ತರಲಿ ಎಂದು ಆಶಿಸುತ್ತೇನೆ. ಹಾಗಾಗಿ ಮಾಸ್ಕ್ ಧರಿಸುವಿಕೆ ಸೇರಿದಂತೆ ಎಲ್ಲ ಕೊರೊನಾ ನಿಯಮಗಳನ್ನ ಪಾಲಿಸಿ ಎಂದು ಆಗ್ರಹಿಸುತ್ತೇನೆ. ಕೊರೊನಾ ತಡೆಯುವಲ್ಲಿ ಸರ್ಕಾರ ನಡೆಸುತ್ತಿರುವ ಶ್ರಮಕ್ಕೆ ಎಲ್ಲರೂ ಸಾಥ್ ನೀಡಬೇಕು.
ಇದೇ ವೇಳೆ ದೇಶದ ಜನತೆಗೆ ದಸರಾ, ನವರಾತ್ರಿ, ಈದ್, ಗುರುನಾನಕ, ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ನಿಯಮಗಳನ್ನು ಪಾಲಿಸುವಂತೆ ಜನತೆಗೆ ಸಲಹೆ ನೀಡಿದರು.