– ರ್ಯಾಪಿಡ್ ಟೆಸ್ಟಿನಲ್ಲಿ ಪಾಸಿಟಿವ್, ಆರ್ಟಿಪಿಸಿಆರ್ ಟೆಸ್ಟಿನಲ್ಲಿ ನೆಗೆಟಿವ್
– 300 ರೂ. ಕಿಟ್ನ, 2500 ರೂ.ಗೆ ಮಾರುತ್ತಾರೆ
ಬೆಂಗಳೂರು: ಎಲ್ಲರಿಗೂ ಹಬ್ಬಿಸಿ ಬಂದ ಮೇಲೆ ಕೊರೊನಾ ರಿಪೋರ್ಟ್ ಕೊಡುತ್ತಾರೆ ಎಂದು ಶಾಸಕ ಶಿವಲಿಂಗೇಗೌಡ ವಿಧಾನಸಭೆಯಲ್ಲಿ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.
ಇಂದು ಸದನದಲ್ಲಿ ಗುಡುಗಿದ ಶಿವಲಿಂಗೇಗೌಡರು, ಖಾಸಗಿ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆಗೆ ಮೂರೂವರೆ ಲಕ್ಷ ವಸೂಲಿ ಮಾಡುತ್ತಾರೆ. ಸಚಿವರು ಆಸ್ಪತ್ರೆಗಳನ್ನು ಹೊಗಳಿಕೊಂಡಿದ್ದೇ ಹೊಗಳಿಕೊಂಡಿದ್ದು, ಏನ್ ಕಡಿದು ಕಟ್ಟೆ ಹಾಕಿದ್ರು ಅಂತ ಹೊಗಳಿದ್ದೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
Advertisement
Advertisement
300 ರೂ.ಗೆ ಕಿಟ್ ಸಿಗುತ್ತೆ, ಅದನ್ನು 2500 ರೂ.ಗೆ ಮಾರುತ್ತಾರೆ. ಯಾವ್ಯಾವ ಕಂಪನಿಯಿಂದ ನೀವು ಮೆಡಿಕಲ್ ಕಿಟ್ ಪಡೆದಿದ್ದೀರಾ? ಅದನ್ನು ಎಲ್ಲೆಲ್ಲಿಂದ ತಂದು ಕೊಡುತ್ತಾರೆ ನಿಮಗೆ ಗೊತ್ತಾ? ಆಕ್ಸಿಜನ್ ಹಾಕಿದರೆ ಮಧ್ಯಾಹ್ನಕ್ಕೆ ಮುಗಿಯುತ್ತೆ. ರಾತ್ರಿಹೊತ್ತಿಗೆ ಪೇಶೆಂಟ್ ಹೋಗಿಬಿಡುತ್ತಾನೆ. ಇದರಲ್ಲಿ ಏನೇನಾಗಿದೆ ದೇವರೇ ನೋಡಿಕೊಳ್ಳುತ್ತಾನೆ. ಅಂತವರಿಗೆ ದೊಡ್ಡ ರೋಗ ಬರುತ್ತೆ ಎಂದು ಶಿವಲಿಂಗೇಗೌಡ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.
Advertisement
Advertisement
ರ್ಯಾಪಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ ಆರ್.ಟಿ.ಪಿ.ಸಿ.ಆರ್ ನಲ್ಲಿ ನೆಗೆಟಿವ್ ಬರುತ್ತೆ. ರಿಪೋರ್ಟ್ ಬರೋದು ಮೂರ್ನಾಲ್ಕು ದಿನ ಆಗುತ್ತೆ. ಅಲ್ಲಿ ತನಕ ಟೆಸ್ಟ್ ಮಾಡಿಸಿದವನು ಎಲ್ಲ ಕಡೆ ಸುತ್ತಾಡಿಕೊಂಡು ಎಲ್ಲರಿಗೂ ಸೋಂಕು ಅಂಟಿಸಿ ಹೋಗುತ್ತಾನೆ. ಇದೇನಾ ವ್ಯವಸ್ಥೆ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.