ಬೆಳಗಾವಿ: ಕೋವಿಡ್ ಲಸಿಕೆ ಪಡೆದಿರುವ 113 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಬೆಳಗಾವಿ ಡಿಸಿಪಿ ವಿಕ್ರಂ ಆಮ್ಟೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಡಿಸಿಪಿ, ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯ 66 ಪೊಲೀಸ್ ಸಿಬ್ಬಂದಿ, ಅಧಿಕಾರಿಗಳಿಗೆ ಕೊರೊನಾ ವೈರಸ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಎಲ್ಲರೂ ಐಸೊಲೇಷನ್ನಲ್ಲಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Vega company has sponsored1000 N95 masks, 2500 Vega masks & 300 PPE Kit. Which will be used by our officers & staff who are enforcing lockdown norms. 66 of our staff & officers who were enforcing are COVID Positive. All are isolated and responding for treatment ???? pic.twitter.com/H4criztIB5
— DCP L&O Belagavi city (@DCP_LO_Belagavi) May 14, 2021
Advertisement
ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯ 66 ಪೊಲೀಸ್ ಸಿಬ್ಬಂದಿ, ಬೆಳಗಾವಿ ಜಿಲ್ಲೆಯ 33 ಹಾಗೂ ಕೆಎಸ್ಆರ್ಪಿಯ 11 ಸಿಬ್ಬಂದಿಗೆ ಕೊರೊನಾ ಇರುವುದು ಗೊತ್ತಾಗಿದೆ. ಎಲ್ಲರೂ ಎರಡು ಡೋಸ್ ಲಸಿಕೆ ಪಡೆದ ಹಿನ್ನೆಲೆ ಪ್ರಾಣಾಪಾಯವಿಲ್ಲ. ಇದರಲ್ಲಿ ಬೆರಳೆಣಿಕೆಯಷ್ಟು ಪೊಲೀಸ್ ಸಿಬ್ಬಂದಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹೋಮ್ ಐಸೊಲೇಷನ್ನಲ್ಲಿದ್ದಾರೆ. ಸಂಕಷ್ಟದ ಸಮಯದಲ್ಲಿ ಪ್ರಾಣದ ಹಂಗು ತೊರೆದು ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದರು.
Advertisement