– ಕೂದಲು ಹಿಡಿದು ಮನಬಂದಂತೆ ಹಲ್ಲೆಗೈದ
ಬಾಗಲಕೋಟೆ: ಮೊದಲ ಪತ್ನಿ ಇದ್ದರೂ ಎರಡನೇ ಮದುವೆಯಾಗಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ ಮೊದಲ ಪತ್ನಿಯ ಮೇಲೆ ಪಾಪಿ ಪತಿಯೋರ್ವ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆಯ ಬಾದಾಮಿ ತಾಲೂಕಿನಲ್ಲಿ ನಡೆದಿದೆ.
ಬಾದಮಿಯ ಚಿಂಚಲಕಟ್ಟಿ ತಾಂಡಾದ ನಿವಾಸಿ ಶಂಕರ್ ಪಮ್ಮಾರ ಹಲ್ಲೆ ಮಾಡಿದ ಪತಿ ಎಂದು ಗುರುತಿಸಲಾಗಿದೆ. ಮೊದಲ ಪತ್ನಿ ಭಾರತಿ ಪಮ್ಮಾರಳನ್ನು ಮನಬಂದಂತೆ ಎಳೆದಾಡಿ ಥಳಿಸಿದ್ದಾನೆ. ಇದರ ಜೊತೆಗೆ ಪತ್ನಿ ಜೊತೆಗೆ ಇದ್ದ 15 ವರ್ಷದ ಮಗಳು ಸುಪ್ರೀತಾ ಮೇಲೂ ಹಲ್ಲೆ ಮಾಡಿದ್ದಾನೆ.
Advertisement
Advertisement
ಕುರಿ ವ್ಯಾಪಾರಿಯಾಗಿರುವ ಶಂಕರ್, ಭಾರತಿಯವರನ್ನು 20 ವರ್ಷದ ಹಿಂದೆ ಮದುವೆಯಾಗಿದ್ದ. ಮದುವೆಯಾಗಿ ಮಕ್ಕಳಿದ್ದರೂ ವಿಚ್ಛೇದನ ನೀಡದೆ ಮೂರು ತಿಂಗಳ ಹಿಂದೆ ಶಾರದಾ ಎಂಬವಳ ಜೊತೆ ಶಂಕರ್ ಮದುವೆಯಾಗಿದ್ದಾನೆ. ಈಗ ಆಕೆಯನ್ನು ಮನೆಗೆ ಕರೆತಂದಿದ್ದಾನೆ. ಇದರಿಂದ ಕೋಪಗೊಂಡ ಭಾರತಿ, ಶಂಕರ್ ಅನ್ನು ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ಕೋಪಗೊಂಡ ಶಂಕರ್ ಕೂದಲು ಹಿಡಿದು ಎಳೆದಾಡಿ ಮನಬಂದಂತೆ ಹಲ್ಲೆ ಮಾಡಿದ್ದಾನೆ.
Advertisement
Advertisement
ಈ ವಿಚಾರವಾಗಿ ಮೂರು ವರ್ಷದಿಂದ ಶಂಕರ್ ಮತ್ತು ಭಾರತಿ ನಡುವೆ ಜಗಳ ನಡೆಯುತ್ತಿತ್ತು. ಆದರೆ ಇಂದು ಈ ಜಗಳ ವಿಕೋಪಕ್ಕೆ ತಿರುಗಿ ಶಂಕರ್, ಭಾರತಿ ಕುತ್ತಿಗೆ, ನಡು, ಕೈಗೆ ಗಾಯವಾಗುವಂತೆ ಥಳಿಸಿದ್ದಾನೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಆಕೆಯನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.