ಹಾವೇರಿ: ಮೊದಲ ಡೋಸ್ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಿ, ಕೇವಲ ಎರಡನೇ ಡೋಸ್ ಪಡೆಯುತ್ತಿರುವವರಿಗೆ ನೀಡುತ್ತಿದ್ದರೂ ಲಸಿಕೆ ಕೊರತೆ ಕಾಡುತ್ತಿದೆ. ಕೋವ್ಯಾಕ್ಸಿನ್ ಲಸಿಕೆ ಸ್ಟಾಕ್ ಇಲ್ಲದಕ್ಕೆ 2ನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಬಂದವರು ವಾಪಾಸಾಗುತ್ತಿದ್ದಾರೆ.
Advertisement
ಜಿಲ್ಲೆಯಲ್ಲಿ ಬಹುತೇಕ ವಾಕ್ಸಿನ್ ಸೆಂಟರ್ ಗಳಲ್ಲಿ ಕೋವಾಕ್ಸಿನ್ ಲಸಿಕೆ ಇಲ್ಲ ಎಂಬ ಬೋರ್ಡ್ ಹಾಕಿದ್ದಾರೆ. ಆದರೆ ಆರಂಭದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್ ಲಸಿಕೆಯನ್ನೇ ನೀಡಲಾಗಿದೆ. ಇದೀಗ 2ನೇ ಡೋಸ್ಗೆ ಕೋವ್ಯಾಕ್ಸಿನ್ ಲಭ್ಯವಾಗುತ್ತಿಲ್ಲ. ಹೀಗಾಗಿ ವ್ಯಾಕ್ಸಿನ್ ಕೊರತೆ ಕಾಡುತ್ತಿದ್ದು, ಜನ ಲಸಿಕೆ ಹಾಕಿಸಿಕೊಳ್ಳದೆ ಮನೆಗೆ ಹಿಂದಿರುಗುತ್ತಿದ್ದಾರೆ.
Advertisement
Advertisement
45 ವರ್ಷ ಮೇಲ್ಪಟ್ಟವರಿಗೆ ಕೋವಿಶಿಲ್ಡ್ ಲಸಿಕೆಯನ್ನು ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ನೀಡಲಾಗುತ್ತಿದೆ. ಮೊದಲ ಡೋಸ್ ಕೋವಿಶಿಲ್ಡ್ ಪಡೆದವರಿಗೆ ಎರಡನೇ ಡೋಸ್ ಕೋವಿಶಿಲ್ಡ್ ಲಸಿಕೆ ಲಭ್ಯವಾಗುತ್ತಿದೆ. ಆದರೆ ಎರಡನೇ ಡೋಸ್ ಪಡೆಯಲು ಕೋವ್ಯಾಕ್ಸಿನ್ ಸಿಗುತ್ತಿಲ್ಲ. ಹೀಗಾಗಿ ಜನ ಆತಂಕದಿಂದಲೇ ತೆರಳುತ್ತಿದ್ದಾರೆ.