ಕೊಪ್ಪಳ: ಎರಡನೇ ಅಲೆಯಲ್ಲಿ ಹೆಚ್ಚು ಜನರು ಸಾಯಲು ಯಡಿಯೂರಪ್ಪ ಸರ್ಕಾರ ಕಾರಣ, ಎರಡನೇ ಅಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯನವರು ಹೇಳಿದ್ದಾರೆ.
Advertisement
ಕರ್ನಾಟಕದಲ್ಲಿ ಕೊರೊನಾ ಬಂದು ಒಂದು ವರ್ಷ ಮೂರು ತಿಂಗಳು ಆಗಿದೆ. ಈಗ ನಾವು ಎರಡನೇ ಅಲೆಯಲ್ಲಿದ್ದೇವೆ. ಅಕ್ಟೋಬರ್ ನಲ್ಲಿ ಮೂರನೇ ಅಲೆ ಬರುವ ಸಾಧ್ಯತೆ ಇದೆ. ಮೊದಲನೇ ಅಲೆಯಲ್ಲಿ ಬಹಳ ಜನ ಸಾಯಲಿಲ್ಲ, ಎರಡನೇ ಅಲೆಯಲ್ಲಿ ಹೆಚ್ಚು ಜನ ಸತ್ತರು, ಇದಕ್ಕೆ ಕಾರಣ ಯಡಿಯೂರಪ್ಪ ಸರ್ಕಾರ. ಎರಡನೇ ಅಲೆಯನ್ನು ತಡೆಯಲು ಮುನ್ನಚ್ಚೆರಿಕೆ ಕ್ರಮಗಳನ್ನು ಮಾಡಿಕೊಂಡಿದ್ದರೆ, ಇಷ್ಟೊಂದು ಜನ ಸಾಯುತ್ತಿರಲಿಲ್ಲ. ರೋಗ ಬಂದವರಿಗೆ ಬೆಡ್ ಸಿಗಲಿಲ್ಲ, ಆಕ್ಸಿಜನ್ ಬೆಡ್ ಸಿಗಲಿಲ್ಲ, ರೆಮಡಿಸಿವರ್, ಐಸಿಯು, ಅಂಬ್ಯುಲೆನ್ಸ್, ವೆಂಟಿಲೇಟರ್ ಸಿಗಲಿಲ್ಲ. ಇದರಿಂದಾಗಿ ಬಹಳ ಜನ ಸತ್ತರು ಎಂದರು.
Advertisement
Advertisement
ಚಾಮರಾಜನಗರದಲ್ಲಿ ಆಕ್ಸಿಜನ್ ಆಗದೇ 36 ಜನ ಸಾವನ್ನಪ್ಪಿದರು, ಆಕ್ಸಿಜನ್ ನೀಡಿದರೆ 36 ಜನ ಸಾಯುತ್ತಿರಲಿಲ್ಲ, ಮಿಸ್ಟರ್ ಯಡಿಯೂರಪ್ಪ, 36 ಜನ ಸತ್ತರೆ ಆರೋಗ್ಯ ಸಚಿವ ಸುಧಾಕರ 3 ಜನ ಸತ್ತರು ಎಂದು ಹೇಳುತ್ತಾರೆ. ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಾರೆ. ಸುರೇಶ್ ಕುಮಾರ್, ಸುಧಾಕರ್ ರಾಜೀನಾಮೆಗೆ ನಾನು ಒತ್ತಾಯ ಮಾಡಿದೆ. ನ್ಯಾಯಾಂಗ ತನಿಖೆ ಮಾಡಲು ಒತ್ತಾಯ ಮಾಡಿದೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದೆ ಎಂದರು.
Advertisement
ಲಾಕ್ಡೌನ್ ಮಾಡಿದರೆ ಉದ್ಯೋಗ ಸಿಗುವುದಿಲ್ಲ, ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಸಾವಿರ, 10 ಕೆಜಿ ಅಕ್ಕಿ ಕೊಡಲು ಹೇಳಿದೆ ಜಪ್ಪಯ್ಯ ಎನ್ನಲಿಲ್ಲ, ಎರಡು, ಮೂರು ಸಾವಿರ ಕೊಡುತ್ತೀನಿ ಅಂದರು, ಅದನ್ನು ಸರಿಯಾಗಿ ಕೊಟ್ಟಿಲ್ಲ, 7 ಕೆಜಿ ಅಕ್ಕಿ ಕೊಟ್ಟಿದ್ದರೆ, ಇವರ ಅಪ್ಪನ ಮನೆ ಗಂಟು ಹೋಗುತ್ತಿತ್ತಾ ಎಂದು ಪ್ರಶ್ನಿಸಿದರು.
ನಾನು ಸಿಎಂ ಆಗಿದ್ದರೆ 10 ಕೆಜಿ ಅಕ್ಕಿ ಕೊಡುತ್ತಿದ್ದೆ, ನಾನು ನಮ್ಮ ಅಪ್ಪನ ಮನೆಯಿಂದ ತಂದು ಕೊಡುತ್ತಿರಲಿಲ್ಲ. ನಿಮ್ಮ ದುಡ್ಡಿನಿಂದ ನಿಮಗೆ ಕೊಡುತ್ತಿದೆ. ಅಲ್ಲದೇ ಎರಡನೇ ಅಲೆ ಮುನ್ನೆಚ್ಚರಿಕೆ ಕೈಗೊಂಡಿದ್ದರೆ, ಸಾವಿರಾರು ಜನರ ಪ್ರಾಣ ಉಳಿಸಬಹುದಿತ್ತು, ಕರ್ನಾಟಕದಲ್ಲಿ ಸ್ವರ್ಗನಾ, ನರಕನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಸರ್ಕಾರ ಬರೀ ದುಡ್ಡು ಹೊಡೆಯುವ ಸರ್ಕಾರ, ಇದು ನಾನು ಹೇಳಿದ್ದಲ್ಲ, ಇದನ್ನು ಯತ್ನಾಳ್, ಬೆಲ್ಲದ್, ಯೋಗಿಶ್ವರ್ ಹೇಳಿದ್ದು, ಇವರು ಯಾರು ಬಿಜೆಪಿಯವರು ಅಲ್ವಾ? ಪೆಟ್ರೋಲ್,ಡಿಸೇಲ್, ಸೇರಿದಂತೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ, ನಮ್ಮ ಸರ್ಕಾರದ ಯೋಜನೆಗಳನ್ನು ಇವರು ಮಾಡುತ್ತಿದ್ದಾರೆ. ಹೊಸದಾಗಿ ಯಡಿಯೂರಪ್ಪ ಸರ್ಕಾರ ಒಂದು ರೂಪಾಯಿ ಕೊಟ್ಟಿಲ್ಲ. ಯಡಿಯೂರಪ್ಪನವರನ್ನು ಕೇಳಿದರೆ ಕೊರೊನಾ ಎಂದು ಹೇಳುತ್ತಾರೆ.
ಕೊರೊನಾಗೆ 4,000 ಕೋಟಿ ಖರ್ಚು ಮಾಡಿರಬಹುದು. ಇದೊಂದು ಕೆಟ್ಟ ಸರ್ಕಾರ, ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು ಜನರ ಸಂಕಷ್ಟದಲ್ಲಿ ಸ್ಪಂದಿಸಬೇಕು. ನಾನು ಸಿಎಂ ಆಗಿದ್ದರೆ, ಇವತ್ತು ಈ ರೋಗ ವೇಗವಾಗಿ ಹರಡಲು, ಸಾಯಲು ಅವಕಾಶ ಮಾಡಿಕೊಡುತ್ತಿರಲಿಲ್ಲ. ಕಾಂಗ್ರೆಸ್ ಬಡವರ ಪರವಾಗಿ ಇರುವ ಪಕ್ಷ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್ ಪಕ್ಷ ಎಂದರು. ಇದನ್ನೂ ಓದಿ:ಮೈಸೂರು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿಗೆ ಸಂಕಷ್ಟ