– ಆತ್ಮಹತ್ಯೆ ಮಾಡ್ಕೋಳ್ತೀನೆಂದು ಬೆದರಿಕೆ
ಅಹ್ಮದಾಬಾದ್: ಸಾಮಾಜಿಕ ಜಾಲತಾಣಗಳಲ್ಲಿ ಯಾವ ರೀತಿಯ ಮೋಸ ನಡಿಯುತ್ತೆ ಎನ್ನುವುದಕ್ಕೆ ಈ ಪ್ರಕರಣ ಉದಾಹರಣೆಯಾಗಿದ್ದು, ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವತಿಗೆ ಭಾವನಾತ್ಮಕವಾಗಿ ಬ್ಲ್ಯಾಕ್ಮೇಲ್ ಮಾಡಿ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ.
Advertisement
ಮಧ್ಯಪ್ರದೇಶದ ಉಜ್ಜಯಿನಿಯ 22 ವರ್ಷದ ಯುವತಿಯ ಮೇಲೆ 20 ವರ್ಷದ ಯುವಕ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ. ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇನ್ಸ್ಟಾಗ್ರಾಮ್ನಲ್ಲಿ ಸ್ನೇಹ ಬೆಳೆಸಿದ ಬಳಿಕ ಯುವಕ ಕೃತ್ಯ ಎಸಗಿದ್ದಾನೆ. ಆರೋಪಿಯ ನಿಜವಾದ ಹೆಸರು ನನಗೆ ತಿಳಿದಿರಲಿಲ್ಲ. ‘ಜಿದ್ದಿ ಲಡ್ಕಾ’ ಎಂಬ ಬಳಕೆದಾರನ ಹೆಸರಿನ ಮೂಲಕ ಇನ್ಸ್ಟಾಗ್ರಾಮ್ನಲ್ಲಿ ಖಾತೆ ತೆರೆಯಲಾಗಿತ್ತು. ಜೂನ್ 2019ರಲ್ಲಿ ನನಗೆ ಫಾಲೋ ರಿಕ್ವೆಸ್ಟ್ ಕಳುಹಿಸಿದ. ನಾನು ರಿಕ್ವೆಸ್ಟ್ ಎಕ್ಸೆಪ್ಟ್ ಮಾಡಿದ ಬಳಿಕ ಪ್ರತಿ ದಿನ ಚಾಟ್ ಮಾಡಲು ಆರಂಭಿಸಿದ ಎಂದು ಯುವತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
Advertisement
Advertisement
ಹೀಗೆ ಆಮೀಷವೊಡ್ಡಿದ ಬಳಿಕ ಯುವತಿ ಆತನ ಸ್ನೇಹದ ಬಲೆಗೆ ಬಿದ್ದಿದ್ದಾಳೆ. ಆರೋಪಿ ಭಾವನಾತ್ಮಕವಾಗಿ ಬ್ಲ್ಯಾಕ್ಮೇಲ್ ಮಾಡುವ ಮೂಲಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಗಸ್ಟ್ ತಿಂಗಳಲ್ಲಿ ಯುವಕ ತನ್ನ ಕೈ ಕುಯ್ದುಕೊಂಡಿದ್ದ ಫೋಟೋವನ್ನು ಯುವತಿಗೆ ಕಳುಹಿಸಿದ್ದ. ಅಲ್ಲದೆ ನನ್ನನ್ನು ಭೇಟಿ ಮಾಡಲು ಅಹ್ಮದಾಬಾದ್ಗೆ ಆಗಮಿಸದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
Advertisement
ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದರಿಂದ ಯುವಕನನ್ನು ಭೇಟಿಯಾಗಲು ನಾನು ಅಹ್ಮದಾಬಾದ್ನ ಖಾದಿಯಾಗೆ ಆಗಮಿಸಿದೆ. ಬಳಿಕ ರಾಯಪುರದ ಹೋಟೆಲ್ಗೆ ಕರೆದೊಯ್ದು ಸತತ ಎರಡು ದಿನ ಹಲವು ಬಾರಿ ಅತ್ಯಾಚಾರ ಎಸಗಿದ. ಬಳಿಕ ನನ್ನನ್ನು ವಿವಾಹವಾಗುವುದಾಗಿ ನಂಬಿಸಿದ ಎಂದು ಯುವತಿ ಆರೋಪಿಸಿದ್ದಾಳೆ.
ಹೀಗೆ ಆರೋಪಿ ವಿನಂತಿ ಮೇರೆಗೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ಯುವತಿ ಮತ್ತೊಂದು ಬಾರಿ ಅಹ್ಮದಾಬಾದ್ಗೆ ಭೇಟಿ ನೀಡಿದ್ದಾಳೆ. ಈ ವೇಳೆ ಸಹ ಯುವತಿಯನ್ನು ಗೆಸ್ಟ್ ಹೌಸ್ಗೆ ಕರೆದೊಯ್ದು ಯುವಕ ಅತ್ಯಾಚಾರ ಎಸಗಿದ್ದಾನೆ. ಅಕ್ಟೋಬರ್ ವರೆಗೆ ಯುವಕ ಸಂಪರ್ಕದಲ್ಲೇ ಇದ್ದ ಬಳಿಕ ನಾಪತ್ತೆಯಾಗಿದ್ದಾನೆ. ಒಂದು ತಿಂಗಳು ಕಾದರೂ ಯುವಕ ಪತ್ತೆಯಾಗಿಲ್ಲ. ಹೀಗಾಗಿ ಯುವತಿ ಉಜ್ಜಯಿನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾಳೆ. ದೂರು ದಾಖಲಿಸಿಕೊಂಡ ಉಜ್ಜಯಿನಿ ಪೊಲೀಸರು ಪ್ರಕರಣವನ್ನು ಅಹ್ಮದಾಬಾದ್ನ ಖಾದಿಯಾ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.