ನವದೆಹಲಿ: ಐಪಿಎಲ್-2020ಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಮತ್ತು ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ ದಾಖಲೆಯೊಂದನ್ನು ಸಮನಾಗಿ ಹಂಚಿಕೊಂಡಿದ್ದಾರೆ.
ಕೊರೊನಾ ನಡುವೆಯೂ ಯುಎಇಯಲ್ಲಿ ನಡೆದ ಐಪಿಎಲ್-2020 ಯಶಸ್ವಿಯಾಗಿ ಮುಗಿದಿದೆ. ಹಲವಾರು ಅಡೆತಡೆಗಳ ನಡುವೆ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಿ ಸಕ್ಸಸ್ ಕಂಡಿದೆ. ಅಂತಯೇ ಟೂರ್ನಿಯುದ್ದಕ್ಕೂ ಭರ್ಜರಿಯಾಗಿ ಆಡಿದ ಮುಂಬೈ ಇಂಡಿಯನ್ಸ್ ಐದನೇ ಬಾರಿಗೆ ಚಾಂಪಿಯನ್ ಆಗಿದೆ. ಶ್ರೇಯಸ್ ಐಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರನ್ನರ್ ಆಫ್ ಆಗಿದೆ.
Advertisement
Advertisement
ಈ ಬಾರಿಯ ಐಪಿಎಲ್ನಲ್ಲಿ ಕರ್ನಾಟಕದ ಆಟಗಾರರದ ಕೆಎಲ್ ರಾಹುಲ್ ಮತ್ತು ಯುವ ಆಟಗಾರ ದೇವದತ್ ಪಡಿಕ್ಕಲ್ ಉತ್ತಮವಾಗಿ ಬ್ಯಾಟ್ ಬೀಸಿದರು. ಜೊತೆಗೆ ಇಬ್ಬರು ಈ ಬಾರಿಯ ಐಪಿಎಲ್ನಲ್ಲಿ ಐದು ಅರ್ಧಶತಕ ಸಿಡಿಸಿದ್ದು, ಐಪಿಎಲ್-2020ಯಲ್ಲಿ ಅತೀ ಹೆಚ್ಚು ಅರ್ಧಶತಕ ಸಿಡಿಸಿದ ದಾಖಲೆಯನ್ನು ಎಬಿಡಿ ವಿಲಿಯರ್ಸ್ ಅವರ ಜೊತೆ ಹಂಚಿಕೊಂಡಿದ್ದಾರೆ. ಇದ ಜೊತೆಗೆ ಕರ್ನಾಟದ ಇಬ್ಬರು ಆಟಗಾರರು ಅತೀ ಹೆಚ್ಚು ಅರ್ಧಶತಕ ಸಿಡಿಸಿದಂತಾಗಿದೆ.
Advertisement
Advertisement
ಐಪಿಎಲ್-2020ಯಲ್ಲಿ ಈ ಬಾರಿ ದೇವದತ್ ಪಡಿಕ್ಕಲ್ ಅವರು ಉತ್ತಮ ಫಾರ್ಮ್ ನಲ್ಲಿದ್ದರು. ಈ ಬಾರಿಯ ಐಪಿಎಲ್ನಲ್ಲಿ 15 ಪಂದ್ಯಗಳನ್ನು ಆಡಿದ ಪಡಿಕ್ಕಲ್ ಐದು ಅರ್ಧಶತಕದ ನೆರವಿನಿಂದ 473 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದುಕೊಂಡಿದ್ದಾರೆ. ಜೊತೆಗೆ ಐಪಿಎಲ್ ಪಾದಾರ್ಪಣೆ ಟೂರ್ನಿಯಲ್ಲೇ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದ ರಾಹುಲ್, ಕ್ಯಾಪ್ಟನ್ ಆಗಿ ವಿಫಲವಾದರೂ ಆಟಗಾರನಾಗಿ ಒಳ್ಳೆಯ ಲಯದಲ್ಲಿ ಕಾಣಿಸಿಕೊಂಡಿದ್ದರು. ತಾವಾಡಿದ 14 ಪಂದ್ಯಗಳಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕದ ನೆರವಿನಿಂದ ಬರೋಬ್ಬರಿ 670 ರನ್ ಸಿಡಿಸಿ, ಐಪಿಎಲ್-2020ಯ ಆರೆಂಜ್ ಕ್ಯಾಪ್ ವಿನ್ನರ್ ಆಗಿ ಹೊರಹೊಮ್ಮಿದರು.
ಎಬಿಡಿ ವಿಲಿಯರ್ಸ್ ಈ ಬಾರಿ ಆರ್ಸಿಬಿ ತಂಡಕ್ಕೆ ಆಧಾರ ಸ್ಥಂಭದಂತೆ ಬ್ಯಾಟ್ ಬೀಸಿದರು. ಜೊತೆಗೆ ಬೆಂಗಳೂರು ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಿದ್ದರು. ಐಪಿಎಲ್-2020ಯಲ್ಲಿ 15 ಪಂದ್ಯಗಳನ್ನಾಡಿ ಎಬಿಡಿ ಐದು ಅರ್ಧಶತಕದ ನೆರವಿನಿಂದ 454 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಇದ್ದಾರೆ.