– ಸಿಸಿಬಿ ಪೊಲೀಸರಿಂದ 850 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ
– ಮಧ್ಯಂತರ ಚಾರ್ಜ್ಶೀಟ್ನಲ್ಲಿ ಸಂಪತ್ ರಾಜ್ 51ನೇ ಆರೋಪಿ
ಬೆಂಗಳೂರು: ದೇವರಜೀವನಹಳ್ಳಿ(ಡಿಜೆ ಹಳ್ಳಿ) ಹಾಗೂ ಕಾಡುಗೊಂಡನಹಳ್ಳಿ(ಕೆಜೆ ಹಳ್ಳಿ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮಧ್ಯಂತರ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
60 ದಿನಗಳ ಒಳಗಾಗಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕಾಗಿದ್ದರಿಂದ ಇಂದು ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. 850 ಪುಟಗಳ ಮಧ್ಯಂತರ ಚಾರ್ಜ್ ಶೀಟ್ನಲ್ಲಿ ಮಾಜಿ ಮೇಯರ್ ಸಂಪತ್ ರಾಜ್ 51ನೇ ಆರೋಪಿಯಾಗಿದ್ದರೆ, ಮಾಜಿ ಪಾಲಿಕೆ ಸದಸ್ಯ ಝಾಕೀರ್ 52ನೇ ಆರೋಪಿಯಾಗಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಿವಾಸಕ್ಕೆ ಬೆಂಕಿ ಇಡಲು ಇವರ ಪಾತ್ರ ಇದೆ. ಟೆಕ್ನಿಕಲ್ ಸಾಕ್ಷ್ಯಗಳ ಮೂಲಕ ಗಲಭೆಯಲ್ಲಿ ಭಾಗಿಯಾದ ಮತ್ತಷ್ಟು ಆರೋಪಿಗಳ ಹೆಸರನ್ನು ಸೇರಿಸಲಾಗುವುದು ಎಂದು ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ.
Advertisement
Advertisement
ಪ್ರಕರಣದ ತನಿಖೆಯಲ್ಲಿ ಟೆಕ್ನಿಕಲ್ ಮತ್ತು ಡಿಜಿಟಲ್ ಸಾಕ್ಷ್ಯಗಳೇ ಪ್ರಮುಖ ಪಾತ್ರ ವಹಿಸಿದೆ. ವಿಡಿಯೋ ಎವಿಡೆನ್ಸ್ ಆರೋಪಿಗಳ ಪಾಲಿಗೆ ಮುಳುವಾಗಿದೆ. 30ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಯನ್ನು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಬರೋಬ್ಬರಿ 52 ಆರೋಪಿಗಳ ವಿರುದ್ದ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಮುಂದೆ ತನಿಖೆ ಬಳಿಕ ಉಳಿದ ಆರೋಪಿಗಳ ಹೆಸರನ್ನು ಸೇರಿಸಲಾಗುವುದು ಎಂದು ಹೇಳಿದೆ.
Advertisement
ಸದ್ಯದ ಮಟ್ಟಿಗೆ ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ರಿಲೀಫ್ ಸಿಕ್ಕಿದೆ. ಸಂಪತ್ ರಾಜ್ ಅನಾರೋಗ್ಯ ಸಂಬಂಧ ಡಾಕ್ಟರ್ ನೀಡಿದ ಪ್ರಮಾಣಪತ್ರವನ್ನು ಲಗತ್ತಿಸಲಾಗಿದೆ. ಸಂಪತ್ ರಾಜ್ ಅವರಿಗೆ ಕೋವಿಡ್ ಲಕ್ಷಣಗಳು ಇನ್ನೂ ಹೋಗಿಲ್ಲ. ಅಲ್ಲದೆ ಎದೆ ನೋವು, ಬಿಪಿ, ಶುಗರ್ ಇದೆ ಎಂದು ವೈದ್ಯರು ವರದಿ ನೀಡಿದ್ದರು. ಸಂಪತ್ ರಾಜ್ ದಾಖಲಾಗಿದ್ದ ಆಸ್ಪತ್ರೆಗೆ ತೆರಳಿ ಸಿಸಿಬಿ ಪೊಲೀಸರು ಮೆಡಿಕಲ್ ವರದಿ ಪಡೆದುಕೊಂಡಿದ್ದರು.
Advertisement
ಚಾರ್ಜ್ಶೀಟ್ನಲ್ಲಿ ಏನಿದೆ?
ಪ್ರತಿಭಟನೆ ಮಾಡಲು ಹೋದವರು ಬೇರೆಯವರ ಕುಮ್ಮಕ್ಕಿಗೆ ಕಿವಿಗೊಟ್ಟು ಬೆಂಕಿ ಹಾಕಿದ್ದಾರೆ. ನವೀನ್ ಫೇಸ್ಬುಕ್ ಪೋಸ್ಟ್ ಕೇವಲ ನೆಪಮಾತ್ರ. ಈ ಪೋಸ್ಟ್ ವಿರುದ್ಧ ಪ್ರತಿಭಟನೆ ನಡೆಸಲು ಮುಸ್ಲಿಂ ಮುಖಂಡರು ಮುಂದಾಗಿದ್ದರು. ಆದರೆ ಪ್ರತಿಭಟನೆಯನ್ನ ಕೆಲವರು ದುರುಪಯೋಗ ಮಾಡಿಕೊಂಡು ಶಾಸಕರ ಮೇಲಿನ ದ್ವೇಷದಿಂದ ಗಲಭೆಗೆ ಸಂಚು ರೂಪಿಸಿದರು.
ಅಖಂಡ ಶ್ರೀನಿವಾಸ ಮೂರ್ತಿ ರಾಜಕೀಯವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಗಲಭೆಗೆ ಕುಮ್ಮಕ್ಕು ನೀಡಲಾಯಿತು. ರಾಜಕೀಯ ವೈಷಮ್ಯ ಸಾಧಿಸಲು ಶಾಸಕರ ಮನೆ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಯಿತು. ಅರುಣ್ ರಾಜ್ ಮತ್ತು ಮುಜಾಹೀದ್ ಅಖಂಡ ಮನೆ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು. ಇಬ್ಬರ ಕುಮ್ಮಕ್ಕಿನಿಂದ ಪ್ರತಿಭಟನಾಕಾರರು ಬೆಂಕಿ ಹಂಚಿದ್ದರು. ಇಬ್ಬರು ಆರೋಪಿಗಳ ಮೊಬೈಲಿನಲ್ಲಿ ವಾಟ್ಸಪ್ ಚಾಟ್ ಮತ್ತು ಕರೆ ಮಾಹಿತಿಯಲ್ಲಿ ಸಂಚಿನ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ.
52 ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದು ಎಲ್ಲರ ಕಾಲ್ ಡಿಟೈಲ್ಸ್, ವಾಟ್ಸಪ್ ಚಾಟಿಂಗ್ ಸಂಗ್ರಹಿಸಲಾಗಿದೆ. ಅರುಣ್ ರಾಜ್ ಮತ್ತು ಮುಜಾಹೀದ್ ಪ್ರತಿಭಟನಾಕಾರರ ಜೊತೆ ಮಾತಾನಾಡುತ್ತಿದ್ದರು ಎಂದು ಗಲಭೆ ವೇಳೆ ಇದ್ದ ವ್ಯಕ್ತಿಗಳು ಸಾಕ್ಷ್ಯ ಹೇಳಿದ್ದಾರೆ. ಒಟ್ಟು 100ಕ್ಕೂ ಅಧಿಕ ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ.
ಪೂರ್ವ ನಿಯೋಜಿತ ಸಂಚು:
ಆಖಂಡ ಶ್ರೀನಿವಾಸಮೂರ್ತಿ ಹೆಸರು ಹಾಳು ಮಾಡಲು ಪೂರ್ವ ನಿಯೋಜಿತ ಸಂಚು ಎಂಬುದು ತನಿಖೆ ವೇಳೆ ಬಯಲಾಗಿದೆ. ಶಾಸಕರ ಹೆಸರು ಕೆಡಿಸಲು ಒಳ್ಳೆಯ ಸಮಯಕ್ಕೆ ಕೆಲವು ಮುಖಂಡರು ಕಾದಿದ್ದರು. ನವೀನ್ ಪೋಸ್ಟ್ ಹಾಕುತ್ತಿದ್ದಂತೆ ಎಲ್ಲರೂ ಸಕ್ರಿಯರಾಗಿ ಈ ಗಲಭೆ ನಡೆಸಿದ್ದಾರೆ ಎಂಬ ಅಂಶ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ.
ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಎ ಆರ್ ಝಾಕೀರ್ ಅವರ ವಿಚಾರಣೆ ನಡೆಸಿಲ್ಲ. ಈಗಾಗಲೇ ಇಬ್ಬರಿಗೂ ವಿಚಾರಣೆಗೆ ಬರುವಂತೆ ಎರಡನೇ ಬಾರಿ ನೋಟಿಸ್ ನೀಡಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಸದ್ಯಕ್ಕೆ ಸಂಪತ್ ರಾಜ್ ಅವರಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ.