ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮನೆಯ ಸಹಾಯಕ ದೀಪೇಶ್ ಸಾವಂತ್ ಎನ್ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿ ನನ್ನನ್ನು ಕಾನೂನುಬಾಹಿರವಾಗಿ ಬಂಧಿಸಿಸಿತ್ತು ಎಂದು ದೀಪೇಶ್ ಆರೋಪಿಸಿದ್ದಾರೆ.
Advertisement
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಂವಿಧಾನದ ಅನುಚ್ಛೇಧ 21 ಮತ್ತು 22ರ ಸಂಪೂರ್ಣ ಉಲ್ಲಂಘನೆ ಮಾಡಿದೆ ಎಂದು ದೀಪೇಶ್ ಪರ ವಕೀಲ ರಾಜೇಂದ್ರ ರಾಥೋಡ್ ಹೇಳಿದ್ದಾರೆ. ಎನ್ಸಿಬಿ ವಿರುದ್ಧ ಅರ್ಜಿ ಸಲ್ಲಿಸಿರುವ ದೀಪೇಶ್, ತಮಗಾದ ಅನ್ಯಾಯಕ್ಕೆ ಭಾರತ ಸರ್ಕಾರ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸುಶಾಂತ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಆಗಿಲ್ಲ- ರಿಯಾಗೆ ರಿಲೀಫ್? – ಕುಟುಂಬಸ್ಥರ ತಪ್ಪು ಗ್ರಹಿಕೆಯಿಂದ ದೂರು ದಾಖಲು
Advertisement
Advertisement
ಎನ್ಡಿಪಿಎಸ್ ಆ್ಯಕ್ಟ್ 20 (ಬಿ)(2)(ಎ), 23, 29 ಮತ್ತು 30ರ ಅಡಿಯಲ್ಲಿ ದೀಪೇಶ್ ಸಾವಂತ್ ಬಂಧನವಾಗಿತ್ತು. ಎನ್ಸಿಬಿ ಬಂಧನದಲ್ಲಿದ್ದ ದೀಪೇಶ್ ಅಕ್ಟೋಬರ್ 7ರಂದು ರಿಯಾ ಚಕ್ರವರ್ತಿ ಮತ್ತು ಸ್ಯಾಮುಯಲ್ ಮಿರಾಂಡ ಜೊತೆ ಜಾಮೀನು ಸಿಕ್ಕಿದ್ದರಿಂದ ಹೊರ ಬಂದಿದ್ದಾರೆ. ಎನ್ಸಿಬಿ ತನ್ನ ದಾಖಲೆಗಳಲ್ಲಿ ಸೆಪ್ಟೆಂಬರ್ 5 ರಾತ್ರಿ 8 ಗಂಟೆಗೆ ದೀಪೇಶ್ ಬಂಧನವಾಗಿದೆ ಎಂದು ದಾಖಲಿಸಿದೆ. ಆದ್ರೆ ಸೆಪ್ಟೆಂಬರ್ 4, ರಾತ್ರಿ 10 ಗಂಟೆಗೆ ಎನ್ಸಿಬಿ ಬಂಧಿಸಿದೆ ಎಂದು ದೀಪೇಶ್ ಆರೋಪಿಸಿದ್ದಾರೆ. ಇದನ್ನೂ ಓದಿ: 5 ವರ್ಷದಲ್ಲಿ ಸುಶಾಂತ್ ಗಳಿಸಿದ್ದು 70 ಕೋಟಿ-ರಿಯಾಗಾಗಿ ಖರ್ಚು ಮಾಡಿದೆಷ್ಟು?
Advertisement
ಸೆಪ್ಟೆಂಬರ್ 6ರ ಮಧ್ಯಾಹ್ನ ನನ್ನನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯ್ತು. ಇದಾದ ಬಳಿಕ ನ್ಯಾಯಾಲಯ ಅನುಮತಿ ಮೇರೆಗೆ ಸೆಪ್ಟೆಂಬರ್ 9ರವರೆಗೆ ಎನ್ಸಿಬಿ ತನ್ನ ವಶಕ್ಕೆ ಪಡೆದುಕೊಂಡಿತ್ತು. 36 ಗಂಟೆಯ ನಂತರ ಬಂಧಿತನನ್ನು ಎನ್ಸಿಬಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿತ್ತು. ಇದು ಸಂವಿಧಾನದ ಅನುಚ್ಛೇಧ 22 ಮತ್ತು ಅಪೆಕ್ಸ್ ಕೋರ್ಟ್ ಮಾರ್ಗಸೂಚಿಗಳ ಉಲ್ಲಂಘನೆ. ಬಂಧಿಸಿದ ವ್ಯಕ್ತಿಯನ್ನ 24 ಗಂಟೆಯೊಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು. ಎನ್ಸಿಬಿ ಕಾನೂನು ಬಾಹಿರವಾಗಿ ಬಂಧನದಲ್ಲಿರಿಸಿಕೊಂಡಿತ್ತು. ಹಾಗಾಗಿ ಸರ್ಕಾರದಿಂದ 10 ಲಕ್ಷ ಪರಿಹಾರ ಕೊಡಿಸಬೇಕೆಂದು ದೀಪೇಶ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿದ್ದ 28 ದಿನದ ರಿಯಾ ದಿನಚರಿ ಬಿಚ್ಚಿಟ್ಟ ವಕೀಲ