ಮಡಿಕೇರಿ: ವಿಧಾನ ಪರಿಷತ್ಗೆ ಬಿಜೆಪಿಯ ಸಿ.ಪಿ. ಯೋಗೇಶ್ವರ್ ನೇಮಕ ಸಂವಿಧಾನ ಬಾಹಿರವಾಗಿದ್ದು, ಅವರನ್ನು ಎಂಎಲ್ಸಿ ಸ್ಥಾನದಿಂದ ವಾಪಸ್ ತೆಗೆದುಕೊಳ್ಳಬೇಕು ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎಸ್.ಎಸ್. ಪೊನ್ನಣ್ಣ ಆಗ್ರಹಿಸಿದ್ದಾರೆ.
Advertisement
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗೇಶ್ವರ್ ನೇಮಕ ಸಂವಿಧಾನ ಬಾಹಿರವಾಗಿದೆ. ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದು ಹಲವು ದಿನಗಳು ಕಳೆದಿವೆ. ಆದರೆ ಇದೂವರೆಗೆ ಪ್ರತ್ಯುತ್ತರ ಬಂದಿಲ್ಲ. ಮೆಗಾ ಸಿಟಿ ಯೋಜನೆ ಮೂಲಕ ಯೋಗೇಶ್ವರ್ ಬಹುಕೋಟಿ ಹಗರಣ ಮಾಡಿದ್ದಾರೆ. ಅದರಡಿಯಲ್ಲಿ ವಂಚನೆ ಸೇರಿದಂತೆ 9ಕ್ಕೂ ಹೆಚ್ಚು ಚಾರ್ಜ್ ಶೀಟ್ ಸಲ್ಲಿಕೆಯಾಗಿವೆ ಎಂದರು.
Advertisement
Advertisement
ಆರ್ಟಿಕಲ್ 171 ಅಡಿಯಲ್ಲಿ ಯೋಗೇಶ್ವರ್ ಅವರ ನಾಮನಿರ್ದೇಶನವನ್ನು ವಾಪಸ್ ಪಡೆಯಬೇಕು. ಯೋಗೇಶ್ವರ್ ಅವರನ್ನು ಯಾವ ವಿಶೇಷ ಜ್ಞಾನದ ಮೇಲೆ ನಾಮನಿರ್ದೇಶನ ಮಾಡಲಾಗಿದೆ?. ಬಹುಕೋಟಿ ಹಗರಣದ ಅರೋಪ ಅವರ ಮೇಲೆ ಈಗಲೂ ಇದೆ. ಈಗಾಗಲೇ ಅವರದನ್ನು ಜನರೇ ಯೋಗೇಶ್ವರ್ ಅವರನ್ನು ಸೋಲಿಸಿದ್ದಾರೆ. ಈ ಎಲ್ಲಾ ಪ್ರಕರಣಗಳನ್ನು ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
Advertisement