ಬೆಂಗಳೂರು: ಗಣಿತಶಾಸ್ತ್ರದಲ್ಲಿ ಪಾಂಡಿತ್ಯ ಪಡೆದಿದ್ದ ಎಂಇಎಸ್ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿದ್ದ ಡಾ.ಎಂ ಸತ್ಯಕೃಷ್ಣ ಅವರು ಡಿ.20 ರಂದು ತೀವ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದು, ಅವರ ಮಾರ್ಗದರ್ಶನದಲ್ಲಿ ವ್ಯಾಸಂಗ ಮಾಡಿದ್ದ ಅಸಂಖ್ಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಪ್ರಾಂಶುಪಾಲರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
ಡಿ.21 ರಂದು ಚಾಮರಾಜಪೇಟೆಯ ಟಿ.ಆರ್ ಮಿಲ್ ಬಳಿ ಇರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
Advertisement
ಪದವಿ ಪೂರ್ವ ಶಿಕ್ಷಣ ಇಲಾಖೆಯ ತರಬೇತಿಗಳು, ಪರೀಕ್ಷಾ ಕಾರ್ಯಗಳು, ಪಠ್ಯವಸ್ತು ರಚನೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದ ಡಾ.ಎಂ ಸತ್ಯಕೃಷ್ಣ ಅವರು ಕೆಲವೇ ವರ್ಷಗಳ ಹಿಂದೆ ಪ್ರಾಂಶುಪಾಲರಾಗಿ ನಿವೃತ್ತಗೊಂಡಿದ್ದರು.
Advertisement
Advertisement
ನಿವೃತ್ತಿಯ ನಂತರವೂ ನಿರಂತರವಾಗಿ ಬೋಧನೆಯಲ್ಲಿ ತೊಡಗಿಸಿಕೊಂಡಿದ್ದ ಡಾ.ಎಂ ಸತ್ಯಕೃಷ್ಣ ಅವರು ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಣಿತದ ತರಬೇತಿ ಕಾರ್ಯಕ್ರಮಗಳು ಪದವಿ ವಿದ್ಯಾರ್ಥಿಗಳಿಗೆ ಅತ್ಯಂತ ಆಸಕ್ತಿದಾಯಕವಾಗಿತ್ತು.
Advertisement
“ಗಣಿತ ಸುಲಲಿತವಾಗಿ ಮನ ಮುಟ್ಟುವಾಗಿ ವಿಶ್ಲೇಷಣಾ ಕಲೆ ಅನುಕರಣೀಯವಾಗಿತ್ತು. ಗಣಿತ ತರಬೇತಿದಾರರಾಗಿ ನಮಗೆ ಮಾದರಿ” ಸಹೃದಯಿ, ಕರುಣಾಮಯಿ, ಮಿತಮಾತು, ಸರಳ ಆಹಾರ ಮತ್ತು ಸರಳ ಜೀವನ ಶೈಲಿ ಅವರ ವ್ಯಕ್ತಿತ್ವಕ್ಕೆ ಮೆರಗು ತರುವಂತಿತ್ತು” ಎನ್ನುತ್ತಾರೆ ಡಾ. ಎಂ ಸತ್ಯಕೃಷ್ಣ ಅವರ ವಿದ್ಯಾರ್ಥಿಗಳು.
ಕೊರೊನಾ ಲಾಕ್ ಡೌನ್ ನಂತರ ಜೂನ್-ಜುಲೈ ಅವಧಿಯಲ್ಲಿ ಕೆಎಸ್ ಸಿಎಸ್ ಟಿ, ಐಐಎಸ್ ಸಿ ಕ್ಯಾಂಪಸ್ ಗಳಲ್ಲಿ ಕರ್ನಾಟಕ ರೆಶಿಡೆನ್ಶಿಯಲ್ ಹಾಗೂ ವಿಲೇಜ್ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದರು.
1978 ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಗಣಿತಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಯನ್ನು ಪಡೆದಿದ್ದ ಅವರು, 1979 ರಲ್ಲಿ ಎಂಇಎಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು ಹಾಗೂ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪುನಃ ಎಂಇಎಸ್ ಕಾಲೇಜಿನಲ್ಲಿ ಸುದೀರ್ಘಾವಧಿ ಸೇವೆ ಸಲ್ಲಿಸಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು.
1990 ರಲ್ಲಿ ಗೋವಾ ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಾನ್ಫರೆನ್ಸ್ ನಲ್ಲಿ “Theory of differential equations and its application to oceanography” ಎಂಬ ವಿಷಯದ ಬಗ್ಗೆ ಸಂಶೋಧನಾ ಪ್ರಬಂಧ ಮಡಿಸಿದ್ದಷ್ಟೇ ಅಲ್ಲದೇ, ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಇವರ ಗಣಿತಕ್ಕೆ ಸಂಬಂಧಿಸಿದಂತೆ ಇವರ ಪ್ರಬಂಧಗಳು ಪ್ರಕಟವಾಗಿದೆ.
27 ವರ್ಷಗಳ ಕಾಲ ಗಣಿತಶಾಸ್ತ್ರ ಎಂಎಸ್ ಸಿ ಸ್ನಾತಕೋತ್ತರ ಪದವಿ ತರಗತಿಗಳನ್ನು ನಿರ್ವಹಿಸಿದ್ದು, ಪೆರಿಯಾರ್ ವಿಶ್ವವಿದ್ಯಾನಿಲಯದ ನಾಲ್ವರು ವಿದ್ಯಾರ್ಥಿಗಳು ಡಾ.ಸತ್ಯಕೃಷ್ಣ ಅವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿ (ಎಂ.ಫಿಲ್) ಪಡೆದಿದ್ದಾರೆ.
“Analysis of Some Unsteady Laminar Boundary – Layer Flows Using Numerical Methods” ಎಂಬ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಡಾ.ಸತ್ಯಕೃಷ್ಣ ಅವರಿಗೆ ಐಐಎಸ್ ಸಿ, ಬೆಂಗಳೂರು ಪಿಹೆಚ್ಡಿ ಪದವಿ ನೀಡಿದೆ. ಗಣಿತ ಶಾಸ್ತ್ರ ವಿಭಾಗದಲ್ಲಿ ಅನನ್ಯ ಸಾಧನೆಗೈದಿರುವ ಡಾ.ಸತ್ಯಕೃಷ್ಣ ಅವರಿಗೆ ವಿದ್ಯಾವಾರಿಧಿ ಎಂಬ ಬಿರುದನ್ನೂ ನೀಡಿ ಗೌರವಿಸಲಾಗಿತ್ತು.