– ಮನೆ ಹೊರಭಾಗದ ಕಾರಿಡಾರಿನಲ್ಲೇ ರಾತ್ರಿ ಕಾಲ ಕಳೆದ ಟೆಕ್ಕಿ
ಬೆಂಗಳೂರು: ಟೆಕ್ಕಿ ಪತಿಯೊಬ್ಬ ತನ್ನ ಪತ್ನಿ ಮತ್ತು ಎರಡು ವರ್ಷದ ಮಗುವನಿಗೆ ತಿನ್ನಲೂ ಆಹಾರವನ್ನು ಕೊಡದೆ ಮನೆಯಿಂದ ಹೊರ ಹಾಕಿ ಅಮಾನವೀಯವಾಗಿ ವರ್ತಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಹೈದರಾಬಾದ್ ಮೂಲದ ಟೆಕ್ಕಿ ವಾದಿಕಾ ಜತ್ಲಾಗೆ ಟೆಕ್ಕಿ ಪತಿ ಮತ್ತು ಕುಟುಂಬದವರು ಕಿರುಕುಳ ನೀಡುತ್ತಿದ್ದರು. ಆರೋಪಿ ಹರಿಪ್ರಸಾದ್ ತೋಟಾ ತನ್ನ 2 ವರ್ಷದ ಮಗುವಿನೊಂದಿಗೆ ಪತ್ನಿಗೆ ಆಹಾರವನ್ನು ನೀಡದೆ ಕಿರುಕುಳ ನೀಡುತ್ತಿದ್ದನು. ಇದರಿಂದ ನೊಂದ ಜತ್ಲಾ ತನ್ನ ಪತಿಯ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಆರೋಪಿಯ ಪೋಷಕರು ಕೆಲ ವರ್ಷಗಳ ಹಿಂದೆ ಟೆಕ್ಕಿ ಹರಿಪ್ರಸಾದ್ ತೋಟಾ ಜೊತೆಗೆ ವಾದಿಕಾ ಜತ್ಲಾ ವಿವಾಹ ಮಾಡಿಸಿದ್ದರು. ಪತ್ನಿ ವಾದಿಕಾ ಜತ್ಲಾ ಕೂಡ ಟೆಕ್ಕಿಯಾಗಿದ್ದು, ಇಬ್ಬರು ಅಮೆರಿಕಾದಲ್ಲಿ ವಾಸಿಸುತ್ತಿದ್ದರು. ಕೆಲ ತಿಂಗಳ ಬಳಿಕ ಅಮೆರಿಕದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರು. ಆದರೆ ಆರೋಪಿ ಹರಿಪ್ರಸಾದ್ ತೋಟಾ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು. ಜೊತೆಗೆ ಆಕೆಯನ್ನು ಅನುಮಾನಿಸುತ್ತಿದ್ದನು.
Advertisement
Advertisement
ಆಹಾರವನ್ನು ಕೊಡದೆ ಪತ್ನಿಯ ಜೊತೆಗೆ ಮಗುವನ್ನು ಮನೆಯಿಂದ ಹೊರ ಹಾಕಿ ಅಮಾನವೀಯವಾಗಿ ವರ್ತಿಸಿದ್ದನು. ಆಗ ಪತ್ನಿ ಕೊರೆಯುವ ಚಳಿಯಲ್ಲಿ ಮನೆ ಹೊರಭಾಗದ ಕಾರಿಡಾರಿನಲ್ಲೇ ಮಗು ಸಮೇತ ರಾತ್ರಿಯಿಡೀ ಕಳೆದಿದ್ದರು ಎಂದು ತಿಳಿದುಬಂದಿದೆ. ಆದರೆ ಕಳೆದ ಮೂರು ತಿಂಗಳಿನಿಂದ ಆರೋಪಿ ಪತ್ನಿ ಮಗುವನ್ನು ಬಿಟ್ಟುಹೋಗಿದ್ದಾನೆ. ಅಂದಿನಿಂದ ಬೆಂಗಳೂರಿನಲ್ಲಿ ಪತಿಗಾಗಿ ವಾದಿಕಾ ಜತ್ಲಾ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಇತ್ತ ಅತ್ತೆ-ಮಾವ ಕೂಡ ಕಿರುಕುಳ ನೀಡುತ್ತಿದ್ದರು.
ಕೊನೆಗೆ ವಾದಿಕಾ ಜಾತ್ಲಾ ಈ ಘಟನೆ ಸಂಬಂಧ ರಾಮಮೂರ್ತಿ ನಗರ ಠಾಣೆಗೆ ದೂರು ನೀಡಿದ್ದಾರೆ. ಪತಿ, ಮಾವ ಸುದರ್ಶನ್ ತೋಟಾ ಮತ್ತು ಅತ್ತೆ ಸುಗುತಾ ದೇವಿ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಟೆಕ್ಕಿ ಪತಿ ಹರಿಪ್ರಸಾದ್ ತೋಟಾ ಸೇರಿದಂತೆ ಮನೆ ಸದಸ್ಯರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.