ಹೈದರಾಬಾದ್: ಹೊಲದಲ್ಲಿ ಉಳುಮೆ ಮಾಡುತ್ತಿದ್ದ ರೈತನಿಗೆ ಎರಡು ಮಡಿಕೆ ಚಿನ್ನದ ಮತ್ತು ಬೆಳ್ಳಿ ಸರ ತುಂಬಿರುವ ನಿಧಿ ಸಿಕ್ಕಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಈ ಘಟನೆ ತೆಲಂಗಾಣದ ವಿಕಾರಬಾದ್ ಜಿಲ್ಲೆಯ ಸುಲ್ತಾನ್ ಪುರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಸುಲ್ತಾನ್ ಪುರದ ರೈತ ಮೊಹಮ್ಮದ್ ಸಿದ್ದಿಕ್ಕಿಗೆ ಈ ಚಿನ್ನ ಬೆಳ್ಳಿ ತುಂಬಿದ ಪಾತ್ರೆ ಸಿಕ್ಕಿದೆ. ಸಿದ್ದಿಕ್ಕಿ ಎರಡು ವರ್ಷದ ಹಿಂದೆ ಈ ಜಮೀನನ್ನು ಖರೀದಿ ಮಾಡಿದ್ದರು. ಆದರೆ ಇಂದು ಉಳುಮೆ ಮಾಡುವಾಗ ಮಡಿಕೆ ಸಿಕ್ಕಿದ್ದು, ಅದರಲ್ಲಿ 25 ಬಗೆಯ ಚಿನ್ನದ ಸರಗಳು ಸಿಕ್ಕಿವೆ.
Advertisement
Advertisement
ಮಾನ್ಸೂನ್ ಆರಂಭವಾದ ಕಾರಣ ರೈತರು ಉಳುಮೆ ಮಾಡಲು ಶುರು ಮಾಡಿದ್ದಾರೆ. ಈ ವೇಳೆ ಸಿದ್ದಿಕ್ಕಿಗೆ ಮಡಿಕೆಗಳು ಸಿಕ್ಕಿವೆ ನಂತರ ಅವುಗಳನ್ನು ತೆಗೆದು ನೋಡಿದಾಗ ಅದರಲ್ಲಿ ಚಿನ್ನದ ಮತ್ತು ಬೆಳ್ಳಿಯ ಸರ ಇರುವುದು ಪತ್ತೆಯಾಗಿದೆ. ತಕ್ಷಣ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದು, ವಿಷಯ ತಿಳಿದು ಸ್ಥಳಕ್ಕೆ ಬಂದ ಕಂದಾಯ ಇಲಾಖೆ ಅಧಿಕಾರಿಗಳು ಸಿಕ್ಕ ಒಡೆವೆಗಳನ್ನು ಪರಿಶೀಲನೆ ಮಾಡಿ ಲ್ಯಾಬ್ಗೆ ಕಳುಹಿಸಿದ್ದಾರೆ.
Advertisement
Advertisement
ಈ ಬಗ್ಗೆ ಮಾತನಾಡಿರುವ ಕಂದಾಯ ಇಲಾಖೆ ಅಧಿಕಾರಿ ವಿದ್ಯಾಸಾಗರ್ ರೆಡ್ಡಿ, ಚಿನ್ನ ಬೆಳ್ಳಿ ಸಿಕ್ಕ ಈ ಜಾಗದ ಬಗ್ಗೆ ಪರಿಶೀಲನೆ ಮಾಡಿ ನೋಡಿದ್ದೇವೆ. ಆದರೆ ಈ ಜಾಗಕ್ಕೆ ಯಾವುದೇ ರೀತಿಯ ರಾಜಮನೆತನದ ಇತಿಹಾಸವಿಲ್ಲ. ಹೀಗಾಗಿ ನಾವು ಈ ವಿಚಾರವನ್ನು ಪುರಾತತ್ವ ಇಲಾಖೆಗೆ ತಿಳಿಸಿದ್ದೇವೆ. ಜೊತೆಗೆ ಸಿಕ್ಕ ಒಡವೆ ನಕಲಿಯೋ ಅಸಲಿಯೋ ಎಂದು ತಿಳಿಯಲು ಲ್ಯಾಬ್ಗೆ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.