ಶಿವಮೊಗ್ಗ: ಜೋಕಾಲಿಗೆ ಕಟ್ಟಿದ್ದ ಸೀರೆಯೇ ಉರುಳಾಗಿ ಬಾಲ ಮೃತಪಟ್ಟ ಹೃದಯ ವಿದ್ರಾವಕ ಘಟನೆ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಿಶೋರ್ (13) ಮೃತ ದುರ್ದೈವಿ.
ಮೃತ ಕಿಶೋರ್ ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದೊಡ್ಡೇರಿ ಗ್ರಾಮದ ನಿವಾಸಿ. ಹಾಡೋನಹಳ್ಳಿಯ ಸಂಬಂಧಿಕರ ಮನೆಯಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ. ಹಾಡೋನಹಳ್ಳಿಯ ವೆಂಕಟೇಶ್ವರ ವಿದ್ಯಾಲಯದಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
Advertisement
ಜೋಕಾಲಿ ತಂದ ಆಪತ್ತು- ಎರಡು ಎಳೆಯ ಜೀವಗಳಿಗೆ ಕುತ್ತುhttps://t.co/pT8blaWMZi#Madikeri #Children #KannadaNews
— PublicTV (@publictvnews) June 30, 2021
Advertisement
ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಸೀರೆಯಿಂದ ಮಾಡಿಕೊಂಡಿದ್ದ ಜೋಕಾಲಿ ಆಟ ಆಡುತ್ತಿದ್ದ. ಆಟ ಆಡುವ ರಭಸದಲ್ಲಿ ಸೀರೆ ಮೃತ ಕಿಶೋರ್ ನ ಕುತ್ತಿಗೆಗೆ ಕುಣಿಕೆಯಾಗಿ ಸುತ್ತಿಕೊಂಡಿದೆ. ಸೀರೆ ಬಿಗಿಯಾಗಿ ಸುತ್ತಿಕೊಂಡಿದ್ದರಿಂದ ಬಾಲಕ ಕಿಶೋರ್ ಕ್ಷಣಾರ್ಧದಲ್ಲಿಯೇ ಉಸಿರು ನಿಲ್ಲಿಸಿದ್ದಾನೆ. ಘಟನೆ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜೋಕಾಲಿ ಮೇಲೆ ವೃದ್ಧನ ಸ್ಟಂಟ್ – ವೀಡಿಯೋ ನೋಡಿ ಬೆರಗಾದ ನೆಟ್ಟಿಗರು