– ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ 900 ಕೋಟಿ ಮೀಸಲು
ನವದೆಹಲಿ: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಉದ್ಯೋಗ ಸೃಷ್ಟಿಗಾಗಿ ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆ ಘೋಷಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ವಿತ್ತ ಸಚಿವೆ, ಆತ್ಮನಿರ್ಭರ್ ಭಾರತ್ 3.0 ಪ್ಯಾಕೇಜ್ ಘೋಷಿಸಿದರು. ಇದೇ ವೇಳೆ ಮುಂದಿನ ದಿನಗಳ ಕೋವಿಡ್ 19 ಲಸಿಕೆ ಕಾರ್ಯಕ್ರಮಕ್ಕಾಗಿ ಸರ್ಕಾರ 900 ಕೋಟಿ ರೂ. ಮೀಸಲಿಸಲಾಗುವುದು ಸೀತಾರಾಮನ್ ಹೇಳಿದರು.
Advertisement
ದೇಶದ ಅರ್ಥವ್ಯವಸ್ಥೆಯ ಸುಧಾರಣೆಯತ್ತ ಸಾಗುತ್ತಿದೆ. ರಪ್ತು ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ ಮೂರು ಸಾವಿರ ಕೋಟಿ ಅನುದಾನ ಘೋಷಿಸಿದೆ. ಜಿಎಸ್ಟಿ ಸಂಗ್ರಹ ಶೇ.10ರಷ್ಟು ಏರಿಕೆಯಾಗಿದ್ದು, 1.05 ಲಕ್ಷ ಕೋಟಿ ರೂ. ಅಧಿಕವಾಗಿದೆ. ದೇಶಿಯ ಉತ್ಪನ್ನಗಳ ಉತ್ಪಾದನೆ ಹೆಚ್ಚಿಸಲು 10 ಕ್ಷೇತ್ರಗಳಿಗೆ 2 ಲಕ್ಷ ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಲಾಗಿದೆ.
Advertisement
Rs 900 crores provided for COVID Suraksha Mission for research and development of the Indian COVID vaccine to the Department of Biotechnology: Finance Minister Nirmala Sitharaman pic.twitter.com/eMANIa3xym
— ANI (@ANI) November 12, 2020
Advertisement
ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆಯಿಂದಾಗಿ ಕೋವಿಡ್-19 ಲಾಕ್ಡೌನ್ ವೇಳೆ ಹಲವರು ಉದ್ಯೋಗ ಕಳೆದುಕೊಂಡಿದ್ದರು. ಸಂಘಟಿತ ವಲಯದ ಇಪಿಎಫ್ಓ ನೋಂದಾಯಿತ ಕಂಪನಿಗಳಲ್ಲಿ 15 ಸಾವಿರಕ್ಕೂ ಕಡಿಮೆ ಸಂಬಳ ಪಡೆಯುವ ಸಿಬ್ಬಂದಿ ಈ ಯೋಜನೆ ಲಾಭ ಪಡೆಯಲಿದ್ದಾರೆ. ಅಕ್ಟೋಬರ್ 1ರಿಂದ ಹೊಸ ನೌಕರಿ ಮಾಡುತ್ತಿರುವ ಉದ್ಯೋಗಿಗಳು ಮುಂದಿನ ಎರಡು ವರ್ಷ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಸರ್ಕಾರ ಈ ಯೋಜನೆಗಾಗಿ ಸಬ್ಸಿಡಿ ಘೋಷಿಸಿದೆ.
Advertisement
Rs 10,200 crore additional budget outlay will be provided towards Capital and industrial expenditure: MoS Finance Anurag Thakur pic.twitter.com/Wm20CPaLEV
— ANI (@ANI) November 12, 2020
ಮೊದಲ ಪ್ಯಾಕೇಜ್ ನಲ್ಲಿ ಜಾರಿಗೆ ತರಲಾಗಿದ್ದ ಎಮೆರ್ಜಿನ್ಸಿ ಕ್ರೆಡಿಟ್ ಲೈನ್ ಗ್ಯಾರೆಂಟಿ ಸ್ಕೀಮ್ (ಇಸಿಎಲ್ಜಿಎಸ್ 1.0) ನ್ನು ಮಾರ್ಚ್ 31, 2021ರವರಗೆ ವಿಸ್ತರಿಸಲಾಗಿದೆ. ಕೊರೊನಾ ಮತ್ತು ಲಾಕ್ಡೌನ್ ನಿಂದ ಸಂಕಷ್ಟದಲ್ಲಿ ಸಿಲುಕಿದ್ದ 26 ವಲಯದ ಉದ್ದಿಮೆಗಳನ್ನ ಕಾಮತ್ ಸಮಿತಿ ಗುರುತಿಸಿದ್ದು, ಎಲ್ಲರಿಗೂ ಇಸಿಎಲ್ಜಿಎಸ್ ಲಾಭ ಸಿಗಲಿದೆ. ಇದುವರೆಗೂ ಈ ಯೋಜನೆಯಡಿ 65 ಲಕ್ಷ ಜನರಿಗೆ 2 ಲಕ್ಷ ಕೋಟಿ ರೂ. ಅಧಿಕ ಸಾಲ ನೀಡಲಾಗಿದೆ.
Rs 3,000 crores will be released to EXIM Bank for promotion of project exports through Lines of Credit under IDEAS Scheme. Supported projects cover Railways, power, transmission, road and transport, auto and auto components, sugar projects etc: FM Nirmala Sitharaman pic.twitter.com/YTuJGrl2PM
— ANI (@ANI) November 12, 2020
ನಗರ ಪಿಎಂ ಆವಾಸ್ ಯೋಜನೆಯಡಿ 18 ಸಾವಿರ ಕೋಟಿ ವೆಚ್ಚದಲ್ಲಿ 18 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳ್ಳಲಿದೆ. ರೆಸಿಡೆನ್ಷಿಯಲ್ ರಿಯಲ್ ಎಸ್ಟೇಟ್ ಮಾರುಕಟ್ಟೆ ಉತ್ತೇಜನಕ್ಕಾಗಿ ಡೆವಲಪರ್ಸ್ ಮತ್ತು ಮನೆ ಖರೀದಿದಾರರಿಗೆ ತೆರಿಗೆ ವಿನಾಯ್ತಿ ಸಿಗಲಿದೆ.
So, by 2025 they will have to fund projects to the extent of Rs 1,10,000 Crores. We are creating this avenue for them to do it even through Debt Market: Finance Minister Nirmala Sitharaman https://t.co/PKolD7WiTT
— ANI (@ANI) November 12, 2020
ಕಿಸಾನ್ ಕ್ರೆಡಿಟ್ ಕಾರ್ಡ್ ಗಾಗಿ 1.83 ಕೋಟಿ ಮನವಿಗಳು ಬಂದಿದ್ದು, 1.57 ಕೋಟಿ ರೈ ತರಿಗೆ ಈಗಾಗಲೇ ಕಾರ್ಡ್ ವಿತರಿಸಲಾಗಿದೆ. ಈ ಯೋಜನೆ ಮಾಧ್ಯಮದ ಮೂಲಕ 1,43,262 ಕೋಟಿ ರೂ. ಸಾಲ ನೀಡಲಾಗಿದೆ.