ಉಡುಪಿ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಮತ್ತೆ 27 ಮಂದಿ ತುತ್ತಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿರುವ ಸೋಂಕಿತರ ಸಂಖ್ಯೆ ಏಕಾಏಕಿ 147ಕ್ಕೆ ಏರಿಕೆಯಾಗಿದೆ. ಹೊಸದಾಗಿ ಸೋಂಕು ಕಾಣಿಸಿಕೊಂಡ 27 ಜನರಲ್ಲಿ 18 ಮಂದಿ ಪುರುಷರಾದರೆ, 9 ಜನ ಮಹಿಳೆಯರಿದ್ದಾರೆ. ಸರ್ಕಾರಿ ದಿಗ್ಬಂಧನ ಕೇಂದ್ರಗಳಲ್ಲಿದ್ದವರಲ್ಲಿಯೇ ಸೋಂಕು ಪತ್ತೆಯಾಗಿದೆ.
Advertisement
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿಯ ಪ್ರಕಾರ, ಉಡುಪಿ ಜಿಲ್ಲೆಯಲ್ಲಿ ನಿನ್ನೆಯವರೆಗೆ 120 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ ಮೇ 24 ರಂದು ಕೋವಿಡ್-19 ಪಾಸಿಟಿವ್ ವರದಿ ಬಂದ ಕಾರ್ಕಳದ 22ರ ಹರೆಯದ ತುಂಬು ಗರ್ಭಿಣಿಗೆ ಮರು ಪರೀಕ್ಷೆಯ ನಂತರ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಆದ್ದರಿಂದ ಸೋಂಕಿತರ ಸಂಖ್ಯೆ 119ಕ್ಕೆ ಇಳಿದಿತ್ತು. ಇಂದು ಹೊಸದಾಗಿ 27 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈವರೆಗೆ ಒಟ್ಟು 147 ಜನರಲ್ಲಿ ಸೋಂಕು ದೃಢಪಟ್ಟಿದೆ.
Advertisement
Advertisement
ಸೋಂಕಿತರ ಪೈಕಿ ಬರೋಬ್ಬರಿ 122 ಮಂದಿ ಮಹಾರಾಷ್ಟ್ರ ರಾಜ್ಯದ ಸಂಪರ್ಕ ಹೊಂದಿದ್ದಾರೆ. ಇದರಲ್ಲಿ 121 ಜನ ನೇರವಾಗಿ ಅಲ್ಲಿಂದ ಬಂದವರಾಗಿದ್ದರೆ, ಒಬ್ಬರಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಉಳಿದಂತೆ ಸೋಂಕಿತರಲ್ಲಿ 11 ಮಂದಿ ದುಬೈನಿಂದ ಬಂದವರು, ತೆಲಂಗಾಣದಿಂದ ಬಂದ ಐದು ಜನರಲ್ಲಿ ಹಾಗೂ ಕೇರಳದಿಂದ ಮರಳಿದ ಮೂವರಲ್ಲಿ ಸೋಂಕು ಕಂಡುಬಂದಿದೆ.