ಲಾಹೋರ್: ಪಾಕಿಸ್ತಾನದ ಲಾಹೋರ್ ನಲ್ಲಿ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದ್ದು ಇಬ್ಬರು ಮೃತಪಟ್ಟು, 16 ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಮುಂಬೈ ದಾಳಿಯ ಪ್ರಮುಖ ಆರೋಪಿ ಲಷ್ಕರ್ ತೊಯ್ಬಾ ಸಂಘಟನೆ ಮತ್ತು ಜಮಾತ್-ಉದ್-ದವಾಹ್ (ಜುಡಿ) ಮುಖ್ಯಸ್ಥ ಹಫೀಜ್ ಸಯೀದ್ ನಿವಾಸದಿಂದ 120 ಮೀಟರ್ ದೂರದಲ್ಲಿ ಈ ಸ್ಫೋಟ ಸಂಭವಿಸಿದೆ.
Advertisement
Jinnah Hospital's Medical Superintendent confirms Lahore's #JoharTown explosion was a bomb blast. He says the injured received "ball bearing" and "blast" injuries. pic.twitter.com/M8kQvlfk85
— Roohan Ahmed (@Roohan_Ahmed) June 23, 2021
Advertisement
ಸ್ಫೋಟಕ್ಕೆ ನಿಜವಾದ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಕೆ ಮಾಡಿ ಸ್ಫೋಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಲಾಹೋರಿನ ಜೋಹರ್ ಪಟ್ಟಣದಲ್ಲಿ ಸ್ಫೋಟ ಸಂಭವಿಸಿದ ಕೂಡಲೇ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿವೆ. ಸ್ಫೋಟದಲ್ಲಿ ಗಾಯಗೊಂಡವರನ್ನು ಖಾಸಗಿ ಕಾರು ಮತ್ತು ಆಟೋರಿಕ್ಷಾ ಮೂಲಕ ಜಿನ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
#BREAKING: Suspicious Bomb blast outside residence of Globally designated terrorist Hafiz Saeed of Lashkar e Toyiba in Lahore’s Jóhar Town area in Pakistan. Blast at Akbar Chowk. 15-20 people injured in the blast. 2 people are critical in ICU. More details awaited. pic.twitter.com/Ev8LpDc0oF
— Aditya Raj Kaul (@AdityaRajKaul) June 23, 2021
Advertisement
ದ್ವಿಚಕ್ರ ವಾಹನದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಮನೆಯ ಬಳಿ ಪಾರ್ಕ್ ಮಾಡಿದ ಕೂಡಲೇ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಹತ್ತಿರದ ಮನೆಗಳು ಮತ್ತು ಕಟ್ಟಡಗಳ ಗಾಜಿನ ಕಿಟಕಿಗಳು ಒಡೆದು ಹೋಗಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.