– ಟೆಕ್ಕಿಗಳಿಂದ ಅರ್ಥಪೂರ್ಣ ನಿಶ್ಚಿತಾರ್ಥ
ಚಿಕ್ಕಮಗಳೂರು: ವಿಶ್ವವೇ ಪ್ರೇಮಿಗಳ ದಿನಾಚರಣೆಯ ಸಂಭ್ರಮದಲ್ಲಿದ್ದರೆ ಭಾರತ ಮಾತ್ರ ಪ್ರೇಮಿಗಳ ದಿನಾಚರಣೆಯ ಜೊತೆ ಪುಲ್ವಾಮ ದಾಳಿಯಲ್ಲಿ ಮೃತ ಯೋಧರ ದಿನಾಚರಣೆಯನ್ನೂ ಆಚರಿಸುತ್ತಿದೆ. ಈ ಮಧ್ಯೆ ನವಜೀವನಕ್ಕೆ ಕಾಲಿಡುತ್ತಿರುವ ಜೋಡಿ ನಿಶ್ಚಿತಾರ್ಥದ ವೇಳೆ, ಉಗುರು ಬದಲಿಸಿಕೊಳ್ಳುವ ಬದಲು ಭಾರತಾಂಬೆಯ ಭಾವಚಿತ್ರವನ್ನ ಬದಲಿಸಿಕೊಳ್ಳುವ ನಿಶ್ಚಿತಾರ್ಥ ಆಚರಿಸಿಕೊಂಡಿದ್ದಾರೆ.
Advertisement
ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಹಿರೇಮಗಳೂರಿನಲ್ಲಿ ರವೀಶ್ ಪಟೇಲ್ ಹಾಗೂ ವಿದ್ಯಾಶ್ರೀ ಎಂಬವರು ನಿಶ್ಚಿತಾರ್ಥ ಆಚರಿಸಿಕೊಳ್ಳುತ್ತಿದ್ದರು. ಈ ವೇಳೆ ಪರಸ್ಪರ ಉಂಗುರದ ಬದಲು ಭಾರತಾಂಬೆಯ ಫೋಟೋವನ್ನ ಬದಲಿಸಿಕೊಂಡು ವಿಭಿನ್ನವಾಗಿ ನಿಶ್ಚಿತಾರ್ಥ ಆಚರಿಸಿಕೊಂಡಿದ್ದಾರೆ. ವಿದ್ಯಾಶ್ರೀ ಮೂಲತಃ ಚಿಕ್ಕಮಗಳೂರಿನ ಹುಡುಗಿ. ಹಿರೇಮಗಳೂರು ಪೈ ಕಲ್ಯಾಣ ಮಂಟದ ಹಿಂಭಾಗದ ವಧುವಿನ ನಿವಾಸದಲ್ಲಿ ಈ ಅಪರೂಪ ಹಾಗೂ ಅರ್ಥಪೂರ್ಣ ನಿಶ್ಚಿತಾರ್ಥ ನಡೆದಿದೆ.
Advertisement
Advertisement
ರವೀಶ್ ಹಾಗೂ ವಿದ್ಯಾಶ್ರೀ ಇಬ್ಬರೂ ಬೆಂಗಳೂರಿನಿಲ್ಲಿ ಸಾಫ್ಟ್ವೇರ್ ಉದ್ಯೋಗಿಗಳಾಗಿದ್ದು, ಪ್ರೇಮಿಗಳ ದಿನವನ್ನ ಭಾರತಾಂಬೆಯ ದಿನವೆಂದು ವಿಭಿನ್ನವಾಗಿ ನಿಶ್ಚಿತಾರ್ಥ ಆಚರಿಸಿಕೊಂಡಿದ್ದಾರೆ. ಈ ವೇಳೆ ರವೀಶ್ ಹಾಗೂ ವಿದ್ಯಾಶ್ರೀ ಕುಟುಂಬದವರು ಜೊತೆಗಿದ್ದು ಮಕ್ಕಳ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಅಪರೂಪ ಹಾಗೂ ಅರ್ಥಪೂರ್ಣ ಕಾರ್ಯಕ್ರಮಕ್ಕೆ ನಾಗಲಕ್ಷ್ಮಿ, ವೆಂಕಟೇಶ್, ಉಷಾ, ಕೇಶವಮೂರ್ತಿ, ಸ್ನೇಹಿತರು ಹಾಗೂ ಬಂಧುಮಿತ್ರರು ಸಾಕ್ಷಿಯಾಗಿದ್ದರು.