ಬಿಗ್ಬಾಸ್ ಮನೆಯಲ್ಲಿ ಫಿನಾಲೆ ಹತ್ತಿರವಾಗುತ್ತಿದೆ. ಒಂಟಿಮನೆಯ ಸ್ಪರ್ಧಿಗಳು ಗೆಲ್ಲಬೇಕು ಎಂದು ಏನೆಲ್ಲಾ ಕಸರತ್ತುಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಆದರೆ ಈ ಮಧ್ಯೆ ಸ್ಪರ್ಧಿಗಳಿಗೆ ನಾವು ಹೊರಗಡೆ ತುಂಬಾ ಟ್ರೋಲ್ ಆಗುತ್ತಿದ್ದೇವೆ ಎನ್ನುವ ಭಯ ಶುರುವಾಗಿದೆ.
Advertisement
ಬಿಗ್ಬಾಸ್ ಮನೆಯಲ್ಲಿ ಪ್ರತಿ ಬಾರಿ ನಾನು ಟಾರ್ಗೆಟ್ ಆಗ್ತಿದ್ದೀನಿ, ನನ್ನನ್ನು ಸುದೀಪ್ ಸರ್ ಸ್ತ್ರೀ ಪೀಡಕ, ಸ್ತ್ರೀ ಕಂಟಕ ಅಂತ ಬಿಂಬಿಸುತ್ತಿದ್ದಾರೆ ಎಂದೆಲ್ಲ ಮಾತನಾಡಿದ್ದ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಈಗ ಹೊಸದೊಂದು ಆತಂಕ ಶುರುವಾಗಿದೆ. ಈ ಕುರಿತಾಗಿ ಅರವಿಂದ್ ಬಳಿ ಹೇಳಿಕೊಂಡಿದ್ದಾರೆ. ಕಳೆದ ವಾರ ಪ್ರಿಯಾಂಕಾ ತಿಮ್ಮೇಶ್ ಮನೆಯಿಂದ ಹೊರಗೆ ಹೋಗುವಾಗ, ಚಕ್ರವರ್ತಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಇದರಿಂದ ಕೋಪಗೊಂಡ ಚಕ್ರವರ್ತಿ, ಅಶ್ಲೀಲವಾಗಿ ಸನ್ನೆ ಮಾಡಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗಿತ್ತು. ಸುದೀಪ್ ಕೂಡ ಚಕ್ರವರ್ತಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಈ ಕುರಿತಾಗಿ ಚಕ್ರವರ್ತಿಗೆ ತಲೆನೋವು ಶುರುವಾಗಿದೆ.
Advertisement
Advertisement
ಫುಲ್ ಟ್ರೋಲ್ ಆಗಿರತ್ತೆ ಅಲ್ವಾ ಅದು ಎಂದು ಚಕ್ರವರ್ತಿ, ಅರವಿಂದ್ ಬಳಿ ಕೇಳಿದ್ದಾರೆ. ಮುಂಚೆ ಆಗಿದ್ದರೆ ನನಗೆ ಗೊತ್ತಾಗುತ್ತಿರಲಿಲ್ಲ. ಆದರೆ, 43 ದಿನಗಳಲ್ಲಿ ನೋಡಿದ್ದರ ಪ್ರಕಾರ, ಖಂಡಿತಾ ಅದು ಟ್ರೋಲ್ ಆಗಿರುತ್ತದೆ. ಖಂಡಿತಾ ನಿಮ್ಮನ್ನು ಮಾತ್ರ ಅಲ್ಲ, ನನ್ನನ್ನು ಚಚ್ಚಿರುತ್ತಾರೆ ಎಂದು ಅರವಿಂದ್ ಹೇಳಿದ್ದಾರೆ. ಚಚ್ಚಿರುತ್ತಾರೆ ಹಾಕ್ಕೊಂಡು ನನ್ನ, ಆದರೆ ನಿನ್ನ ಯಾಕೆ ಟ್ರೋಲ್ ಮಾಡುತ್ತಾರೆ ಎಂದು ಚಕ್ರವರ್ತಿ ಅರವಿಂದ್ಗೆ ಪ್ರಶ್ನೆ ಮಾಡಿದ್ದಾರೆ. ಇಲ್ಲ ನಾನು ಆಟವನ್ನು ಸರಿಯಾಗಿ ಆಡುತ್ತಿಲ್ಲ ಎಂದು ಜನ ನನ್ನ ಟ್ರೋಲ್ ಮಾಡಿರುತ್ತಾರೆ ಎಂದು ಊಹಿಸಿದ್ದಾರೆ. ಇದನ್ನೂ ಓದಿ: ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ವಿಧಿವಶ
Advertisement
ಅದೇ ನಾನು ಹೇಳಬೇಕು ಅಂದುಕೊಂಡೆ, ಪ್ರತಿವಾರವೂ ನನಗೊಂದು ಸೂಚನೆ ಬರ್ತಾ ಇದೆಯಲ್ಲಾ, ಏನಿದು? ಈ ವಾರ ನಾನು ಏನಾದ್ರೂ ಉಳಿದಕೊಂಡರೆ, ಹೆವಿ ಟಾಸ್ಕ್ ಆಡಿಬಿಡ್ತೀನಿ. ನನ್ನ ವ್ಯಕ್ತಿತ್ವ ಇರೋ ಥರ ಇದ್ದುಬಿಡ್ತೀನಿ. ಒಂದೇ ಪದ ಒಂದು ಹೆಚ್ಚಿಗೆ ಹೇಳೋದಿಲ್ಲ ಈ ಸಲ ಎಂದು ಚಕ್ರವರ್ತಿ ದೃಢ ನಿರ್ಧಾರ ಮಾಡಿದ್ದಾರೆ. ಪ್ರತಿ ವಾರ ತಪ್ಪು ಆಗ್ತಾ ಇದೆ ಸರ್ ಅದಕ್ಕೆ ಕ್ಲಾಸ್ ತಗೋತಾ ಇದ್ದಾರೆ ಎಂದು ಅರವಿಂದ್ ಹೇಳಿದ್ದಾರೆ. ಇದನ್ನೂ ಓದಿ: ನಾನು ಮನುಷ್ಯಳೇ ಅಲ್ಲವಾ ಸರ್? – ಸುದೀಪ್ಗೆ ರೇಷ್ಮೆ ಅಕ್ಕ ಪ್ರಶ್ನೆ
ಹೌದು ಬಿಗ್ಬಾಸ್ ಮನೆಯಲ್ಲಿ ನಡೆಯುವ ಎಷ್ಟೋ ವಿಚಾರಗಳು ಹೊರಗಿನ ಪ್ರಪಂಚದಲ್ಲಿ ಟ್ರೋಲ್ ಆಗುತ್ತಿವೆ. ಜನರು ಒಳ್ಳೆಯ ವಿಚಾರಗಳ ಕುರಿತಾಗಿ ಮಾತನಾಡುವುದ್ದಕ್ಕಿಂತ ಸ್ಪರ್ಧಿಗಿಳಿಂದ ಸಣ್ಣ ತಪ್ಪಾದರೂ ಆ ಕುರಿತಾಗಿ ಮಾತನಾಡಲು ಪ್ರಾರಂಭಿಸುತ್ತಾರೆ. ಸ್ಪರ್ಧಿಗಳು ತಾವು ಮಾಡಿರುವ ತಪ್ಪುಗಳನ್ನು ನೆನಪು ಮಾಡಿಕೊಂಡು ಟ್ರೋಲ್ ಆಗುತ್ತಿರಬಹುದು ಎಂದಿದ್ದಾರೆ.