ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ನೋಟಿಸ್ ಕೊಟ್ಟಾಗಿನಿಂದಲೂ ತಗಾದೆ ತೆಗೆಯುತ್ತಿದ್ದ ನಟಿ ಸಂಜನಾ ಗಲ್ರಾನಿ ಇಂದು ಪರಪ್ಪನ ಅಗ್ರಹಾರ ಜೈಲಿನೊಳಗೆ ಹೋಗುವ ವೇಳೆಯೂ ಕಿರಿಕ್ ಮುಂದುವರಿಸಿದ್ದಾರೆ.
Advertisement
ಹೌದು. ಜೈಲಿಗೆ ಎಂಟ್ರಿ ಕೊಡುವಾಗಲೂ ಕಿರಿಕ್ ಮಾಡಿರುವ ಸಂಜನಾ, ಇಷ್ಟು ಚಿಕ್ಕ ಗೇಟ್ನಲ್ಲಿ ನಾನು ಹೋಗಲ್ಲ. ನಾನು ಹೋಗಲ್ಲ..ಹೋಗಲ್ಲ ಎಂದು ಹಠಕ್ಕೆ ಬಿದ್ದಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಒಳಗೆ ಹೋಗಿ ಎಂದು ಹೇಳಿದ್ದಾರೆ. ನಂತರ ಒಂದು ನಿಮಿಷದ ಬಳಿಕ ಸಂಜನಾ ಒಳಗೆ ಹೋಗಿದ್ದಾರೆ.
Advertisement
Advertisement
ಸಂಜನಾರನ್ನು ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದಂತೆಯೇ ಇತ್ತ ಪರಪ್ಪನ ಅಗ್ರಹಾರದ ಮುಂದೆ ಫುಲ್ ಟೈಟ್ ಪೊಲೀಸ್ ಸೆಕ್ಯೂರಿಟಿ ಕೈಗೊಳ್ಳಲಾಗಿತ್ತು. ಜೈಲು ಆವರಣದಿಂದ 500 ಮೀಟರ್ ದೂರದಲ್ಲಿಯೇ ಬ್ಯಾರಿಕೇಡ್ ಹಾಕಲಾಗಿತ್ತು. ಒಳಗಡೆ ಯಾರಿಗೂ ಪ್ರವೇಶ ನೀಡದೆ ಸಾರ್ವಜನಿಕರನ್ನೂ ಮುಖ್ಯ ರಸ್ತೆಯಲ್ಲೇ ತಡೆದಿದ್ದರು. ಇದನ್ನೂ ಓದಿ: ಸಂಜನಾಗೆ 2 ದಿನ, ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ಯಾಕೆ?
Advertisement
ಸಾಂತ್ವನ ಕೇಂದ್ರದಿಂದ ಸಂಜನಾರನ್ನು ಲಗೇಜ್ ಸಮೇತ ಪರಪ್ಪನ ಅಗ್ರಹಾರಕ್ಕೆ ಸಿಸಿಬಿ ಪೊಲೀಸರು ಕಳುಹಿಸಿದರು. ಈಕೆಯ ಜೊತೆಗೆ ವೀರೇನ್ ಖನ್ನಾ ಮತ್ತು ರವಿಶಂಕರ್ ನನ್ನೂ ಕೂಡ ಸಿಸಿಬಿ ಪೊಲೀಸರು ಕರೆದೊಯ್ದಿದ್ದಾರೆ. ರಾಜ್ಯ ಮಹಿಳಾ ನಿಲಯದಿಂದ ಪರಪ್ಪನ ಅಗ್ರಹಾರ ರೂಮ್ ನಂ.4ರಲ್ಲಿ ಸಂಜನಾರನ್ನು ಸಿಸಿಬಿ ಪೊಲೀಸರು ಬಿಟ್ಟು ಬಂದಿದ್ದಾರೆ. ಈ ಮೂಲಕ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ ಕನ್ನಡದ ಎರಡನೇ ನಟಿಯಾಗಿದ್ದಾರೆ.
ಇನ್ನು ಸಿಸಿಬಿ ಪೊಲೀಸರು ಸಾಂತ್ವನ ಕೇಂದ್ರದಿಂದ ಕರೆದುಕೊಂಡು ಬರುವಾಗ ವಾಹನದಲ್ಲಿ ಸಂಜನಾ ಮಲಗಿಕೊಂಡೇ ಬಂದಿದ್ದಾರೆ. ಮಾಧ್ಯಮಗಳ ಕಣ್ತಪ್ಪಿಸೋದರ ಜೊತೆಗೆ ತೀವ್ರ ಅಸ್ವಸ್ಥರಾದಂತೆ ಬಿಂಬಿಸಿಕೊಳ್ಳುವ ಮೂಲಕ ಮತ್ತೆ ಹೈಡ್ರಾಮ ಶುರು ಮಾಡಿದ್ದರು.