-ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ
ಬೆಂಗಳೂರು: ಇವತ್ತು ರಾಜ್ಯದಲ್ಲಿ 176 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿದೆ. ರಾಜ್ಯದಲ್ಲಿ ಕೊರೊನ ಸೋಂಕಿತರ ಸಂಖ್ಯೆ 7 ಸಾವಿರದ ಗಡಿ ದಾಟಿದೆ. ಇವತ್ತು ಸಹ ಬೆಂಗಳೂರಿನಲ್ಲಿ ಕೊರೊನ ಮರಣ ಕೇಕೆ ಮುಂದುವರಿದಿದ್ದು, ಮೂವರು ಸಾವನ್ನಪ್ಪಿರೋದನ್ನು ಆರೋಗ್ಯ ಇಲಾಖೆ ಖಚಿತಪಡಿಸಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 42, ಯಾದಗಿರಿ 22, ಉಡುಪಿ 21, ಬೀದರ್ 20, ಕಲಬುರಗಿ 13, ಧಾರವಾಡ 10, ಬಳ್ಳಾರಿ 8, ಕೋಲಾರ 7, ಮಂಡ್ಯ 5, ದಕ್ಷಿಣ ಕನ್ನಡ 5, ಬಾಗಲಕೋಟೆ 4, ರಾಮನಗರ 3, ರಾಯಚೂರು 2, ಶಿವಮೊಗ್ಗ 2 ಮತ್ತು ಬೆಳಗಾವಿ, ಹಾಸನ, ವಿಜಯಪುರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಒಂದು ಪ್ರಕರಣಗಳು ಬೆಳಕಿಗೆ ಬಂದಿವೆ.
Advertisement
Advertisement
ಇಂದು ಪತ್ತೆಯಾದ 176 ಪ್ರಕರಣಗಳ ಪೈಕಿ 88 ಮಂದಿ ಅಂತರಾಜ್ಯ ಮತ್ತು 6 ಜನರು ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಒಟ್ಟು ಇವತ್ತು ಕೊರೊನಾದಿಂದ ಐವರು ನಿಧನ ಹೊಂದಿದ್ದು, ಸಾವನ್ನಪ್ಪಿದವರ ಸಂಖ್ಯೆ 86ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ 2956 ಸಕ್ರಿಯ ಪ್ರಕರಣಗಳಿವೆ. ಇಂದು 312 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
Advertisement
Advertisement
ಕೊರೊನಾಗೆ ಐವರು ಬಲಿ:
1. ರೋಗಿ 6848: ದಕ್ಷಿಣ ಕನ್ನಡ 24 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಜೂನ್ 12ರಂದು ಕೊರೊನಾ ತಗುಲಿರೋದು ಧೃಡವಾಗಿತ್ತು. ದಾಖಲಾದ ದಿನವೇ ಮಹಿಳೆ ಸಾವನ್ನಪ್ಪಿದ್ದಾರೆ.
2. ರೋಗಿ 6876: ಬೆಂಗಳೂರಿನ 57 ವರ್ಷದ ಮಹಿಳೆ ಜೂನ್ 11ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 12ರಂದು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ. ಮಹಿಳೆ ಜ್ವರ, ಕೆಮ್ಮು, ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು.
Evening Media Bulletin 14/06/2020.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMM @CCBBangalore @BlrCityPolice @KarnatakaVarthe @PIBBengaluru @KarFireDept pic.twitter.com/Y54xE3tZeO
— K'taka Health Dept (@DHFWKA) June 14, 2020
3. ರೋಗಿ 6882: ಬೆಂಗಳೂರಿನ 50 ವರ್ಷದ ಪುರುಷ. ತಮಿಳುನಾಡಿನ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಜೂನ್ 10 ರಂದು ದಾಖಲಾಗಿದ್ದ ವ್ಯಕ್ತಿ ಜೂನ್ 13ರಂದು ನಿಧನರಾಗಿದ್ದಾರೆ.
4. ರೋಗಿ 6901: ಬೆಂಗಳೂರಿನ 60 ವರ್ಷದ ವೃದ್ಧೆ. ಜ್ವರ, ಕೆಮ್ಮು, ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಜೂನ್ 9ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 11ರಂದು ನಿಧನರಾಗಿದ್ದಾರೆ.
5. ರೋಗಿ 7000: ಬೀದರ್ ಜಿಲ್ಲೆಯ 76 ವರ್ಷದ ವೃದ್ಧ. ಜೂನ್ 6ರಂದು ನಿಧನರಾಗಿದ್ದ ವೃದ್ಧನ ವರದಿಯಲ್ಲಿ ಆತನಿಗೆ ಸೋಂಕು ತಗುಲಿರೋದು ಧೃಡಪಟ್ಟಿದೆ.