– ಲೈವ್ ಮಾಡಿ ಹಣಗಳಿಸುತ್ತಿದ್ದ ಆರೋಪಿ
– 2ನೇ ಪತ್ನಿಯಿಂದ ಪೊಲೀಸರಿಗೆ ದೂರು
ಭೋಪಾಲ್: ಹಣದ ಆಸೆಗೆ ಬಿದ್ದ ವ್ಯಕ್ತಿಯೊಬ್ಬ ತನ್ನ ಇಬ್ಬರು ಪತ್ನಿಯರೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ಲೈವ್ ಮಾಡಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಪಟ್ಟಣದಲ್ಲಿ ನಡೆದಿದೆ.
24 ವರ್ಷದ ಚರಣ್ಜೀತ್ ಬಂಧಿತ ಆರೋಪಿ. ವಿವಿಧ ಆ್ಯಪ್ಗಳ ಮೂಲಕ ಲೈವ್ ಶೋ ನಡೆಸುತ್ತಿದ್ದ. ಅಲ್ಲದೇ ಜನರಿಂದ ಲೈವ್ ವೀಕ್ಷಣೆ ಮಾಡಲು 100 ರೂ. ನಿಂದ 1 ಸಾವಿರದ ವರೆಗೂ ದರ ನಿಗದಿ ಮಾಡಿದ್ದ. ಆ ಮೂಲಕ ಲಕ್ಷ ಲಕ್ಷ ರೂ. ಹಣ ಗಳಿಸುವ ಉದ್ದೇಶವನ್ನು ಆರೋಪಿ ಹೊಂದಿದ್ದ ಎಂಬ ಮಾಹಿತಿ ಲಭಿಸಿದೆ.
Advertisement
Advertisement
ಆರೋಪಿಯ 2ನೇ ಪತ್ನಿ ಅಕ್ಟೋಬರ್ 21ರಂದು ನೀಡಿದ ದೂರಿನ ಮೇರೆಗೆ ಶನಿವಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವೀಕ್ಷಕರಿಗೆ ಖಾಸಗಿ ಕ್ಷಣಗಳನ್ನು ಡಿಜಿಟಲ್ ರೂಪದಲ್ಲಿ ತೋರಿಸುವ ಮೂಲಕ ಲೈಂಗಿಕ ಹಿಂಸೆ ಹಾಗೂ ಬೆದರಿಕೆ, ಅತ್ಯಾಚಾರ ಮತ್ತು ಗೌಪ್ಯತೆಯ ಉಲ್ಲಂಘನೆ ಆರೋಪಗಳನ್ನು ಬಂಧಿತ ಎದುರಿಸುತ್ತಿದ್ದಾನೆ.
Advertisement
10ನೇ ತರಗತಿ ವರೆಗೂ ಶಿಕ್ಷಣ ಪಡೆದಿರುವ ಆರೋಪಿ ಸೈಬರ್ ವರ್ಲ್ಡ್ ಮತ್ತು ಟೆಕ್ ಮಾಹಿತಿಯನ್ನು ಹೊಂದಿದ್ದು, ಕೆಲ ಡೇಟಿಂಗ್ ಆ್ಯಪ್ಗಳಲ್ಲಿಯೂ ಈತ ಸಕ್ರಿಯನಾಗಿದ್ದ. ಅಲ್ಲದೇ ಅಂತಹ ಆ್ಯಪ್ಗಳಿಂದ ಗಿಫ್ಟ್ ಪಡೆಯವುದು ಹೇಗೆ ಎಂಬ ಬಗ್ಗೆಯೂ ಮಾಹಿತಿ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಆರೋಪಿ ಆ್ಯಪ್ಗಳಲ್ಲಿ ಡಿಪಿ ಸೆಟ್ ಮಾಡುತ್ತಿದ್ದ. ಅದನ್ನು ಕ್ಲಿಕ್ ಮಾಡಿದ ತಕ್ಷಣ ವೀಕ್ಷಕರ ಮೊಬೈಲ್ಗೆ ಪ್ರತ್ಯೇಕ ಸಂದೇಶ ರವಾನೆಯಾಗುತ್ತಿತ್ತು. ಅಲ್ಲಿ 100 ರೂ. ಗಳಿಗೆ ಡೆಮೋ ನೋಡಬಹುದಿತ್ತು. ಬಳಿಕ ಲೈವ್ ನೋಡಲು 500 ರಿಂದ ಒಂದು ಸಾವಿರ ರೂ.ಗಳ ವರೆಗೂ ಪಾವತಿ ಮಾಡಬೇಕಿತ್ತು. ಮುಖ ಕಾಣಿಸದೆ ಹಾಗೂ ಕಾಣಿಸುವಂತೆ ವೀಡಿಯೋ ನೋಡಲು ಅವಕಾಶವಿತ್ತು. ಇದಕ್ಕೆ ಪ್ರತ್ಯೇಕ ಹಣ ಗಳಿಸುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಇದುವರೆಗೂ ಆರೋಪಿ 6 ಲಕ್ಷ ರೂ. ವರೆಗೂ ಹಣ ವರ್ಗಾವಣೆ ಪಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಆರೋಪಿ ಪ್ರತಿ ದಿನ 3 ರಿಂದ 4 ಸಾವಿರ ರೂ. ಗಳಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಆ್ಯಪ್ನಲ್ಲಿ ಆತನಿಗೆ ಹಣ ಪಾವತಿ ಮಾಡಿರುವವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ವಿದಿಶಾ ಜಿಲ್ಲೆಯೂ ಭೋಪಾಲ್ನಿಂದ ಸುಮಾರು 50 ಕಿಮೀ ದೂರದಲ್ಲಿದ್ದು, ಮೂಲತಃ ಕೃಷಿ ಮಾಡುವ ಜನರೇ ಹೆಚ್ಚಾಗಿದ್ದಾರೆ. ಆರೋಪಿಯ ಮೊದಲ ಪತ್ನಿ ಬೆಂಗಳೂರು ಮೂಲದವರು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. 2ನೇ ಪತ್ನಿ ಉತ್ತರ ಪ್ರದೇಶದ ನಿವಾಸಿದ್ದು, ಆಕೆಗೆ ತಾನು ಅಪಾರ ದೈವ ಭಕ್ತ ಎಂದು ಹೇಳಿ ಮೋಸ ಮಾಡಿ ಮದುವೆಯಾಗಿದ್ದ. ಇಬ್ಬರು ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಮದುವೆಯಾಗಿದ್ರು. ಆಕೆ 7 ತಿಂಗಳ ಗರ್ಭಿಣಿಯಾಗಿದ್ದಾಳೆ. ಪತಿಯ ಕೃತ್ಯದಿಂದ ಬೇಸತ್ತ ಮಹಿಳೆ ಅಕ್ಟೋಬರ್ 21ರಂದು ವಿಧಿಶಾ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಳು. ಆದ್ರೆ ಈ ಮೊದಲೇ ಆಗಿರುವ ಮದುವೆ ವಿಷಯ ಹೇಳಿರಲಿಲ್ಲ. ಮದುವೆ ಬಳಿಕ ತನ್ನ ಕೆಲ ಖಾಸಗಿ ವೀಡಿಯೋ ಸೆರೆ ಹಿಡಿದ ಚರಣ್ ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದ. ಫೋಟೋ ಮತ್ತು ವೀಡಿಯೋಗಳನ್ನ ತೋರಿಸಿ ಆ್ಯಪ್ ನಲ್ಲಿ ಲೈಂಗಿಕ ಕ್ರಿಯೆ ನೀಡುವಂತೆ ತನಗೆ ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿಯ ಕೃತ್ಯದ ಬಗ್ಗೆ ಮೊದಲ ಪತ್ನಿ ಇದುವರೆಗೂ ಪೊಲೀಸರಿಗೆ ಯಾವುದೇ ದೂರು ನೀಡಲ್ಲ. ಆಕೆಯನ್ನು ಆರೋಪಿ ಮನವೊಲಿಸಿ ಮುಂದಿನ ಭವಿಷ್ಯದಲ್ಲಿ ಐಶಾರಾಮಿ ಜೀವನದ ಆಸೆ ತೋರಿಸಿದ್ದ ಎಂದು ವಿಎಸ್ಪಿ ವಿಕಾಸ್ ಪಾಂಡೆ ತಿಳಿಸಿದ್ದಾರೆ. ಸದ್ಯ ಬಂಧಿತ ಆರೋಪಿ ತನ್ನ ಕೃತ್ಯದ ಬಗ್ಗೆ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದು, ಆತನ ಮೊಬೈಲ್, ಬ್ಯಾಕ್ ವಿವರ ಸೇರಿದಂತೆ 12 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.