ಬೆಂಗಳೂರು: ಇನ್ಸ್ಟಾಗ್ರಾಂ ನಲ್ಲಿ ಹೃದಯ ತಜ್ಞ ಅಂತ ಹೇಳಿಕೊಂಡು, ನಕಲಿ ವೈದ್ಯನೊಬ್ಬ ಮಹಿಳೆಗೆ 80 ಲಕ್ಷ ರೂ. ವಂಚಿಸಿರುವ ಘಟನೆ ನಗರದ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Advertisement
50 ವರ್ಷದ ವಿಧವೆ ಮಹಿಳೆ, ಇನ್ಸ್ಟಾಗ್ರಾಂ ನಲ್ಲಿ ಹೃದಯ ತಜ್ಞರನ್ನು ಹುಡುಕುವಾಗ ಆರೋಪಿ ಮಾರ್ಬಿಸ್ ಹಾರ್ಮನ್ ಪರಿಚಯವಾಗಿದೆ. ಮಹಿಳೆಗೆ ಹೃದಯ ಸಂಬಂಧ ಖಾಯಿಲೆ ಇದ್ದಿದ್ದರಿಂದ ಇನ್ಸ್ಟಾಗ್ರಾಂ ನಲ್ಲಿ ಡಾಕ್ಟರ್ ಹುಡುಕುವಾಗ, ಹಾರ್ಮನ್ ಪ್ರೋಫೈಲ್ ಸಿಕ್ಕಿದೆ. ನಂತರ ವಾಟ್ವಪ್ ಗೆ ಕನೆಕ್ಟ್ ಆಗಿ, ಸಲಹೆ ನೀಡುತ್ತೇನೆ ಎಂದು ನಕಲಿ ವೈದ್ಯ ಮಹಿಳೆಗೆ ನಂಬಿಸಿದ್ದ. ಇದನ್ನೂ ಓದಿ: ಪತಿಯ ಮರ್ಮಾಂಗ ಕತ್ತರಿಸಿ, ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿದ್ಳು!
Advertisement
Advertisement
ಕೆಲ ದಿನಗಳ ನಂತರ ವಿಧವೆ ಮಹಿಳೆಗೆ ಈ ನಕಲಿ ಡಾಕ್ಟರ್ ಯುಕೆಯಿಂದ ಕರೆನ್ಸಿ ಹಾಗೂ ಗಿಫ್ಟ್ ಕಳಿಸಿದ್ದ. ಎರಡು ದಿನಗಳ ನಂತರ ಕಸ್ಟಮ್ಸ್ ಅಧಿಕಾರಿಗಳು ಎಂದು ಹೇಳಿ ಮಹಿಳೆಗೆ ಕರೆ ಹೋಗಿದೆ. ನೀವು ಗಿಫ್ಟ್ ಸ್ವೀಕರಿಸಿಲ್ಲ, ವಿತ್ತ ಸಚಿವಾಲಯದಿಂದ ನೋಟಿಸ್ ಬಂದಿದೆ ಎಂದು ಫೇಕ್ ಕಸ್ಟಮ್ಸ್ ಅಧಿಕಾರಿಗಳು ನಕಲಿ ಲೆಟರ್ ತೋರಿಸಿದ್ದಾರೆ. ಬಳಿಕ ಮಹಿಳೆ ಬಳಿ 80 ಲಕ್ಷ ರೂಪಾಯಿಯನ್ನು ಪೀಕಿದ್ದಾರೆ. ಸದ್ಯ ಬನಶಂಕರಿ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.