ಚಿಕ್ಕೋಡಿ(ಬೆಳಗಾವಿ): ಇನ್ನು ಮುಂದೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬಸ್ಸ್ಟ್ಯಾಂಡ್ನಲ್ಲಿ ಹುಡುಕಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಶಾಸಕಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕಾಂಗ್ರೆಸ್ ಶಾಸಕಿ ಮೈಂಡ್ ಔಟ್ ಆಗಿದೆ ಎಂದಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಮಾತಾಡೋದು ಬೇಡ, ಲಕ್ಷ್ಮಿ ಹೆಬ್ಬಾಳ್ಕರ್ ಗೋಕಾಕ್ ಮತ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಸ್ವಾಗತಿಸುತ್ತೇನೆ. ಅವರಿಗೆ ಮೈಂಡ್ ಔಟ್ ಆಗಿದೆ. ಹೀಗಾಗಿ ಅವರಿಗೆ ಹೆಚ್ಚು ಮಹತ್ವ ನೀಡೋದು ಬೇಡ ಎಂದು ಹೇಳಿದ್ದಾರೆ.
Advertisement
Advertisement
5 ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವ ವಿಚಾರವಾಗಿ ಮಾತನಾಡಿ, ಯಾರು ಆ ಕಾಂಗ್ರೆಸ್ ಶಾಸಕರು ಎಂಬುದರ ಬಗ್ಗೆ ಈಗಲೇ ಅವರ ಹೆಸರು ಬಹಿರಂಗಪಡಿಸುವದಿಲ್ಲ. ಬೆಳಗಾವಿ ಲೋಕಸಭಾ ಟಿಕೆಟ್ ದಿವಗಂತ ಸುರೇಶ್ ಅಂಗಡಿ ಕುಟುಂಬಕ್ಕೆ ನೀಡಲು ಮನವಿ ಮಾಡಿದ್ದೇನೆ. ಹೈಕಮಾಂಡ್ ಯಾರಿಗೂ ಟಿಕೆಟ್ ನೀಡಿದರೂ ಬೆಂಬಲಿಸುತ್ತೇನೆ ಎಂದು ತಿಳಿಸಿದರು.
Advertisement
ಗೋಕಾಕ್ ಮತಕ್ಷೇತ್ರದ ಪರಾಭವ ಅಭ್ಯರ್ಥಿ ಅಶೋಕ್ ಪೂಜಾರಿ ಮನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದ್ದರ ವಿಚಾರ ಪ್ರತಿಕ್ರಿಯಿಸಿ, ಕಾಂಗ್ರೆಸ್ ಬಗ್ಗೆ ನನಗೆ ಪ್ರಶ್ನೆ ಮಾಡಬೇಡಿ. ಬಿಜೆಪಿ ಬಗ್ಗೆ ಕೇಳಿ ಎಂದರು.