ಬಿಗ್ಬಾಸ್ ಶಮಂತ್ಗೆ ಒಂದು ಸರ್ಪ್ರೈಸ್ ಕೊಟ್ಟಿದ್ದಾರೆ. ಫಿನಾಲೆಗೆ ಇನ್ನೇನು ಕೆಲವು ದಿನಗಳು ಬಾಕಿ ಇರುವಾಗ ಬಿಗ್ಬಾಸ್ ಶಮಂತ್ಗೆ ನೀಡಿರುವ ಸರ್ಪ್ರೈಸ್ ಕಂಡು ಭಾವುಕರಾಗಿದ್ದಾರೆ.
Advertisement
ಬಿಗ್ಬಾಸ್ ಮನೆಯಲ್ಲಿ ವೇಕಪ್ ಸಾಂಗ್ಅನ್ನು ಪ್ರತಿನಿತ್ಯ ಬೆಳಗ್ಗೆ ಪ್ಲೇ ಮಾಡಲಾಗುತ್ತದೆ. ಈ ಹಿಂದೆ ಬಾ.. ಗುರು ಸಾಂಗ್ ಹಾಕುವಂತೆ ಶಮಂತ್ ಕೇಳಿಕೊಳ್ಳುತ್ತಿದ್ದರು. ಅದರಂತೆ ಬಿಗ್ಬಾಸ್ ಹಾಡನ್ನು ಪ್ರಸಾರ ಮಾಡಿದ್ದರು. ಈ ಬಾರಿ ಮತ್ತೆ ಶಮಂತ್ ಅವರ ನಿರ್ದೇಶನದ ಸಾಂಗ್ ಹಾಡನ್ನು ಹಾಕಲಾಗಿದೆ. ಸಾಕಷ್ಟು ಹಾಡುಗಳನ್ನು ಬರೆದು ಶಮಂತ್ ಹಾಡಿದ್ದಾರೆ. ಶಮಂತ್ ಬಿಗ್ಬಾಸ್ ಮನೆ ಒಳಗೆ ಬರುವುದಕ್ಕೂ ಮೊದಲು ಕಣ್ಣೊಳಗೆ.. ವಿಡಿಯೋ ಸಾಂಗ್ ನಿರ್ದೇಶನ ಮಾಡಿ ಹಾಡಿದ್ದರು. ಬಿಗ್ಬಾಸ್ ಮನೆಯಲ್ಲಿ ಬೆಳಗ್ಗೆ ಈ ಹಾಡು ಮೊಳಗಿದೆ. ಇದನ್ನು ಕೇಳಿ ಶಮಂತ್ ಸ್ವಲ್ಪ ಭಾವುಕರಾದಂತೆ ಕಂಡುಬಂತು. ಇದನ್ನೂ ಓದಿ: ಅರವಿಂದ್ ವಸ್ತು ಕದಿಯಲು ಕಷ್ಟಪಟ್ಟೆ – ಟಾಸ್ಕ್ ಗೆದ್ದ ವೈಷ್ಣವಿಗೆ ಸಿಕ್ತು ಐಸ್ಕ್ರೀಂ
Advertisement
Advertisement
ಆನಂದ್ ಆಡಿಯೋ ಪಾಪ್ಯುಲರ್ ಯೂಟ್ಯೂಬ್ ಚಾನೆಲ್ನಲ್ಲಿ ಕಣ್ಣೊಳಗೆ..ಹಾಡು 2019ರಲ್ಲಿ ರಿಲೀಸ್ ಆಗಿತ್ತು. ಈ ಹಾಡು ಇಲ್ಲಿವರೆಗೆ 10 ಲಕ್ಷ ವೀಕ್ಷಣೆ ಕಂಡಿದೆ. ಬಿಗ್ಬಾಸ್ನಲ್ಲಿ ಶಮಂತ್ ಈ ಹಾಡನ್ನು ಸಾಕಷ್ಟು ಬಾರಿ ಹಾಡಿದ್ದರು. ಈ ಹಾಡು ಪ್ರಸಾರವಾಗುತ್ತಿದ್ದಂತೆ ನನ್ನದೇ ಹಾಡು ಎಂದು ಸಂತೋಷಪಟ್ಟಿದ್ದಾರೆ. ಬಿಗ್ಬಾಸ್ ತುಂಬಾ ಧನ್ಯವಾದಗಳು. ಈ ಸಾಂಗ್ ನೀವು ಹಾಕುತ್ತಿರುವುದು ಅನ್ಎಕ್ಸ್ಪೆಕ್ಟೆಡ್ ಆಗಿತ್ತು. ಸಂತೋಷಕ್ಕೆ ಮಾತೇ ಬರುತ್ತಿಲ್ಲ ಬಿಗ್ಬಾಸ್ ಎಂದು ಒಂದು ಕ್ಷಣ ಭಾವುಕರಾಗಿದ್ದಾರೆ.
Advertisement
ಬಿಗ್ಬಾಸ್ ಸೀಸನ್ 8 ಮೊದಲ ಇನ್ನಿಂಗ್ಸ್ನ ಎಲಿಮಿನೇಷನ್ನಿಂದ ಅದೃಷ್ಟದ ರೀತಿಯಲ್ಲಿ ಪಾರಾಗಿದ್ದರು. ಶಮಂತ್ ಬ್ರೋ ಗೌಡ ನಂತರ ಒಳ್ಳೆಯ ಮೈಲೇಜ್ ಪಡೆದುಕೊಂಡರು. ಈಗ ಅವರು ಬಿಗ್ಬಾಸ್ ಫಿನಾಲೆ ತಲುಪಲು ಒಂದು ಹೆಜ್ಜೆಯಷ್ಟೇ ಬಾಕಿಯಿದೆ. ಫಿನಾಲೆಗೆ ಒಂದು ವಾರ ಮೊದಲು ಶಮಂತ್ಗೆ ಸರ್ಪ್ರೈಸ್ ಸಿಕ್ಕಿದೆ. ಈ ಸರ್ಪ್ರೈಸ್ ನೋಡಿ ಶಮಂತ್ ಭಾವುಕರಾದರು.