ನವದೆಹಲಿ: ಇಂದು ಭಾರತೀಯ ಸೇನಾ ದಿನದ ಅಂಗವಾಗಿ ಸೈನಿಕರಿಗಾಗಿ ವಿಶೇಷ ಮ್ಯಾರಥಾನ್ ಆಯೋಜಿಸುವ ಮೂಲಕ ನಮ್ಮ ದೇಶದ ವೀರ ಪುತ್ರರಿಗೆ ಗೌರವ ಸಲ್ಲಿಸಲಾಗಿದೆ.
General Bipin Rawat #CDS message on #VeteransDay pic.twitter.com/VWZt03Wk2L
— ADG PI – INDIAN ARMY (@adgpi) January 14, 2021
Advertisement
ಭಾರತವು ಇಂದು 73ನೇ ವರ್ಷದ ಸೇನಾ ದಿನವನ್ನು ಆಚರಿಸುತ್ತಿದೆ. ಸೈನಿಕರು ದೇಶಕ್ಕಾಗಿ ಮಾಡುವ ನಿಸ್ವಾರ್ಥ ಸೇವೆಯ ಭಾಗವಾಗಿ ಪ್ರತಿ ವರ್ಷ ಅವರಿಗೆ ಗೌರವ ಸಲ್ಲಿಸುವ ಕೆಲಸ ಎಲ್ಲಾ ಆರ್ಮಿ ಕಮಾಂಡ್ ಪ್ರಧಾನ ಕಚೇರಿಗಳಲ್ಲಿ ಆಯೋಜಿಸಲಾಗುತ್ತದೆ. ಈ ವರ್ಷ ಕೂಡ ಸಂಪ್ರದಾಯ ಮುಂದುವರಿದಿದೆ.
Advertisement
#ArmyDay#IndianArmy, the land component of Indian Armed Forces, is one of the key instruments of Comprehensive National Power. (1/2) pic.twitter.com/tWG8wDOPmK
— ADG PI – INDIAN ARMY (@adgpi) January 7, 2021
Advertisement
1949 ರಂದು ಭಾರತ, ಬ್ರಿಟಿಷ್ ಕಮಾಂಡರ್ಗಳಿಂದ ಅಧಿಕಾರ ವಹಿಸಿಕೊಂಡಾಗ ಆ ದಿನವನ್ನು ಭಾರತ ವಿಜಯ ದಿನವಾಗಿ ಆಚರಿಸಲಾಯಿತು. ಈ ಸಂಪ್ರದಾಯ ಹೀಗೆ ಮುಂದುವರರಿದಿದ್ದು ಪ್ರತಿ ವರ್ಷ ಸೇನಾ ದಿನದಂದು ಬೇರೆ ಬೇರೆ ವಿಷಯವನ್ನು ಆರಿಸಿಕೊಂಡು ಈ ದಿನವನ್ನು ಸ್ಮರಣೀಯವಾಗಿ ಆಚರಿಸಲಾಗುತ್ತಿದೆ. ಕಳೆದ ವರ್ಷ ಸೈನ್ಯ ದಿನವನ್ನು ‘ರಕ್ಷಣಾ ಡಿಜಿಟಲ್ ಪರಿವರ್ತನೆ’ ದಿನವಾಗಿ ಆಚರಿಸಲಾಗಿತ್ತು. ಈ ಬಾರಿ 1971 ರಲ್ಲಿ ಪಾಕಿಸ್ತಾನ ವಿರುದ್ಧ ಹೋರಾಡಿ ವಿಜಯಗಳಿಸಿದ ಸ್ವಾರ್ನಿಮ್ ವಿಜಯ್ ವರ್ಷದ ಸವಿನೆನಪಿಗಾಗಿ ವಿಜಯ್ ರನ್ ಎಂಬ ಮ್ಯಾರಥಾನ್ ಆಯೋಜಿಸಲಾಗಿದೆ.
Advertisement
On Army Day, greetings to the valiant men and women of the Indian Army.
We remember the bravehearts who made the supreme sacrifice in service to the nation.
India will remain forever grateful to courageous and committed soldiers, veterans and their families.
Jai Hind!????????
— President of India (@rashtrapatibhvn) January 15, 2021
ಪ್ರತಿ ವರ್ಷ ಸೇನಾ ದಿನದಂದು ಧೈರ್ಯಶಾಲಿ ವೀರ ಸೈನಿಕರಿಗಾಗಿ ದೇಶಾದ್ಯಂತ ಗೌರವ ಸೂಚಿಸಲಾಗಿತ್ತದೆ. ಈ ಬಾರಿಯು ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ದೇಶದ ರಾಷ್ಟ್ರಪತಿ ರಮಾನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಹಲವಾರು ಗಣ್ಯರು ಶುಭಾಶಯಗಳನ್ನು ಹೆಮ್ಮಯೆ ವೀರ ಯೋಧರಿಗೆ ಸಲ್ಲಿಸಿದ್ದಾರೆ.
Indian Army has time and again lived up to its tradition of valour, heroism, sacrifice and fortitude. On 73rd Army Day, let us salute our brave soldiers for their selfless service to the nation.#ArmyDay
— B.S.Yediyurappa (@BSYBJP) January 15, 2021
ಜನವರಿ 15 ಅನ್ನು ಪ್ರತಿ ವರ್ಷ ಭಾರತೀಯ ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ. ಏಕೆಂದರೆ 1949ರಲ್ಲಿ ಈ ದಿನದಂದು ಭಾರತವು ದೇಶದ ಮೊದಲ ಸೇನಾ ಮುಖ್ಯಸ್ಥರನ್ನು ಪೆಡೆದ ದಿನವಾಗಿದೆ. ಭಾರತ ದೇಶವು ಮೊದಲ ಚೀಫ್ ಇನ್ ಕಮಾಂಡರ್ ಲೆಫ್ಟೆನೆಂಟ್ ಜನರಲ್ ಕೆ.ಎಂ.ಕರಿಯಪ್ಪ, ಭಾರತದ ಕೊನೆಯ ಬ್ರಿಟಿಷ್ ಕಮಾಂಡರ್ ಚೀಫ್ ಇನ್ ಜನರಲ್ ಸರ್ ಫ್ರಾನ್ಸಿಸ್ ಬುತ್ಚೆರ್ ಅವರಿಂದ ಅಧಿಕಾರ ವಹಿಸಿಕೊಂಡ ದಿನವಾಗಿದೆ. ಆ ದಿನ ಭಾರತ ವಿಜಯ ದಿನವಾಗಿ ಆಚರಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಭಾರತೀಯ ಸೇನಾ ದಿನವನ್ನು ಪ್ರತಿವರ್ಷ ಸಂಭ್ರಮದಿಂದ ಆಚರಿಸಿ ಸೈನಿಕರಿಗೆ ಗೌರವ ಸೂಚಿಸಲಾಗುತ್ತಿದೆ.
ಇಂದು 'ಸೇನೆ ದಿನ'. ದೇಶದ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಸೈನಿಕರು ಮತ್ತು ಅವರ ಕುಟುಂಬದ ತ್ಯಾಗವನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಯಾವುದೇ ವಿಪತ್ತಿನ ಸಂದರ್ಭದಲ್ಲೂ ದೇಶ ಸೇವೆಗಾಗಿ ಸನ್ನದ್ಧರಾಗಿ ನಿಲ್ಲುವ ಸೈನಿಕರ ಶೌರ್ಯ,ಸಾಹಸ ಯಾವುದೇ ವರ್ಣನೆಗೆ, ಹೋಲಿಕೆಗಳಿಗೆ ನಿಲುಕದ್ದು. ಅವರ ಸೇವೆಗೆ ಸಲಾಂ. #ArmyDay
1/2
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) January 15, 2021