ಬೆಂಗಳೂರು: ಒಂದು ವಾರದ ಲಾಕ್ಡೌನ್ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಸಿಎಂ ಯಡಿಯೂರಪ್ಪ ಅವರು ಇಂದು ಸಂಜೆ 4 ಗಂಟೆಗೆ ಫೇಸ್ಬುಕ್ ಮತ್ತು ಯುಟ್ಯೂಬ್ ಮೂಲಕ ಲೈವ್ ಬರಲಿದ್ದಾರೆ. ಸಿಎಂ ಸುಮಾರು 15 ನಿಮಿಷ ಕಾಲ ಲೈವ್ನಲ್ಲಿ ಭಾಷಣ ಮಾಡಲಿದ್ದಾರೆ. ಲೈವ್ ಬರುವ ಮೂಲಕ ರಾಜ್ಯದ ಜನತೆಗೆ ಕೊರೊನಾ ಕುರಿತು ಮಹತ್ತರ ಸಂದೇಶ ನೀಡಲಿದ್ದಾರೆ.
Advertisement
Advertisement
ಲಾಕ್ಡೌನ್ ಮುಗಿಯುತ್ತಿದ್ದಂತೆ ಲೈವ್ ಮೂಲಕ ಜನರಿಗೆ ಏನು ಸಂದೇಶ ಕೊಡಬಹುದು ಎಂಬ ಭಾರೀ ಕುತೂಹಲವನ್ನು ಸಿಎಂ ಯಡಿಯೂರಪ್ಪ ಹುಟ್ಟಿಸಿದ್ದಾರೆ. ಬೆಂಗಳೂರು ಅನ್ಲಾಕ್ ಬಗ್ಗೆಯೂ ಲೈವ್ನಲ್ಲಿ ಮಾತನಾಡುವ ಸಾಧ್ಯತೆ ಇದೆ.