– ಮಟನ್ ಅಂಗಡಿ ಮುಂದೆ ಸರತಿ ಸಾಲು
ಬೆಂಗಳೂರು: ಇಂದು ಯುಗಾದಿ ಹೊಸತೊಡಕು. ಹೀಗಾಗಿ ಬೆಳಗ್ಗೆಯಿಂದಲೇ ಎಲ್ಲಾ ಕಡೆ ಮಟನ್ ಸ್ಟಾಲ್ಗಳತ್ತ ಜನ ಮುಖ ಮಾಡಿದ್ದಾರೆ. ಬೆಂಗಳೂರಿನ ಪಾಪಣ್ಣ ಮಟನ್ ಸ್ಟಾಲ್ ಮುಂದೆ ಅಂತೂ ಸಾವಿರಾರು ಜನ ಸೇರಿದ್ದಾರೆ. ಮಟನ್ಗಾಗಿ ಕಿಲೋಮೀಟರ್ ಗಟ್ಟಲೇ ಕ್ಯೂ ಕಂಡುಬರುತ್ತಿದೆ.
Advertisement
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅನಾವಶ್ಯಕವಾಗಿ ಮನೆಯಿಂದ ಹೊರ ಬರದಂತೆ ಸರ್ಕಾರ ಸೂಚಿಸಿದೆ. ಸರ್ಕಾರದ ಕೊರೊನಾ ನಿಯಮಗಳು ಕಾಗದಗಳಿಗೆ ಮಾತ್ರ ಸೀಮಿತವಾದಂತೆ ಕಾಣಿಸುತ್ತಿದೆ. ಬೆಳಗಿನ ಜಾವ 5 ಗಂಟೆಗೆ ನೈಟ್ ಕಫ್ರ್ಯೂ ಮುಗಿಯುತ್ತಿದ್ದಂತೆ ಜನ ರಸ್ತೆಗೆ ಇಳಿಯುತ್ತಿದ್ದಾರೆ. ಕಳೆದರಡು ದಿನಗಳಿಂದ ಯುಗಾದಿ ಹಿನ್ನೆಲೆ ಮಾರುಕಟ್ಟೆಗಳು ಗಿಜಿಗುಡುತ್ತಿವೆ. ಇಂದು ಹೊಸ ತೊಡಕು ಹಿನ್ನೆಲೆ ಮಟನ್ ಸ್ಟಾಲ್ ಗಳ ಮುಂದೆ ಕ್ಯೂ ಕಾಣಿಸುತ್ತಿವೆ.
Advertisement
Advertisement
ಹಾಸನದಲ್ಲಿ ಜನ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ಮಟನ್ ಖರೀದಿಯಲ್ಲಿ ತೊಡಗಿದ್ದಾರೆ. ಹಾಸನದಲ್ಲಿ ಪ್ರತಿದಿನ ಸುಮಾರು 100 ರಿಂದ 150 ಜನರಿಗೆ ಕೊರೊನಾ ಪಾಸಿಟಿವ್ ಬರುತ್ತಿದೆ. ಆದರೂ ಕೂಡ ಮಟನ್ ಮಾರುಕಟ್ಟೆಗೆ ಬರುವ ಜನ ಯಾವುದೇ ಸಾಮಾಜಿಕ ಅಂತರ ಇಲ್ಲದೆ, ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ.