ಬೆಂಗಳೂರು: ಇಂದು ಮಧ್ಯಾಹ್ನ ಟ್ರೈನಿಂಗ್ ಕಮಾಂಡ್ ಯಾವುದೇ ವಿಮಾನವನ್ನು ಹಾರಿಸಿಲ್ಲ ಎಂದು ಭಾರತೀಯ ವಾಯುಸೇನೆ ಸ್ಪಷ್ಟಪಡಿಸಿದೆ. ಹೀಗಾಗಿ ನಿಗೂಢ ಶಬ್ಧದ ಮೂಲದ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ.
ಮಧ್ಯಾಹ್ನ ಆಕಾಶದಲ್ಲಿ ಕೇಳಿ ಬಂದ ನಿಗೂಢ ಶಬ್ಧಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಸೇನೆ ಹೇಳಿಕೆ ಬಿಡುಗಡೆ ಮಾಡಿದ್ದು, ಏರ್ ಕ್ರಾಫ್ಟ್ ಆಂಡ್ ಸಿಸ್ಟಂ ಟೆಸ್ಟಿಂಗ್ ಮತ್ತು ಎಚ್ಎಎಲ್ ವಿಮಾನಗಳು ಪರೀಕ್ಷಾರ್ಥ ಹಾರಾಟ ನಡೆಸಿರಬಹುದು. ಆದರೆ ಅದರಿಂದ ಈ ರೀತಿಯ ಶಬ್ಧ ಬರುವುದಿಲ್ಲ. ಅಲ್ಲದೆ ಈ ರೀತಿ ಶಬ್ಧ ಬರುವ ವಿಮಾನಗಳನ್ನ ನಗರದ ಹೊರಭಾಗದಲ್ಲಿ ಹಾರಿಸಲಾಗುತ್ತದೆ. ಒಂದು ವೇಳೆ ನಗರದಲ್ಲಿ ಹಾರಾಡಿದ್ದರೆ ಅದರ ಶಬ್ಧ ಗೊತ್ತಾಗುತ್ತದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Advertisement
Advertisement
ನಡೆದಿದ್ದು ಏನು?
ಮಧ್ಯಾಹ್ನ ಮಧ್ಯಾಹ್ನ 1.20ರ ಸುಮಾರಿಗೆ ಎದೆ ಝಲ್ ಎನ್ನಿಸುವ ದೊಡ್ಡ ಶಬ್ಧ ಕೇಳಿಬಂತು. ಇಂದಿರಾನಗರ, ಕಲ್ಯಾಣನಗರ, ಕೆಆರ್ಪುರ, ಟಿನ್ಫ್ಯಾಕ್ಟ್ರಿ, ರಾಮಮೂರ್ತಿನಗರ, ಮಾರತ್ತಹಳ್ಳಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಬನಶಂಕರಿ, ವಸಂತಪುರದ ಜನ ಈ ಶಬ್ಧ ಕೇಳಿ ಬೆಚ್ಚಿಬಿದ್ದಿದ್ರು.
Advertisement
Advertisement
ಶುರುವಿನಲ್ಲಿ ಏನಾಯ್ತು ಅಂತ ಯಾರಿಗೂ ಅರ್ಥ ಆಗಲೇ ಇಲ್ಲ. ಕೆಲವರು ಭೂಕಂಪ ಆಗಿರಬಹುದು ಎಂದರೆ, ಇನ್ನೂ ಕೆಲವರು ಏನೋ ಸ್ಫೋಟ ಆಗಿರಬಹುದು ಅಂತಾ ತಮಗನಿಸಿದ್ದನ್ನು ಹೇಳುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಥರಹೇವಾರಿ ವದಂತಿ ಹಬ್ಬಿತು. ಈ ಬೆನ್ನಲ್ಲೇ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್ಎನ್ಡಿಎಂಸಿ) ಎಲ್ಲೂ ಭೂಮಿ ಕಂಪಿಸಿಲ್ಲ ಎಂದು ಸ್ಪಷ್ಟಪಡಿಸಿತು. ಇದು ಆಂಫಾನ್ ಚಂಡಮಾರುತ ಪರಿಣಾಮದಿಂದ ಈ ಶಬ್ಧ ಎಂಬ ಅಭಿಪ್ರಾಯ ಕೇಳಿಬಂತು.
This was the loud boom in Bangalore today.
Not an earthquake or a supersonic jet. (HAL confirmed)
It may be a SKYQUAKE.pic.twitter.com/aYKeNYXn7f
— Dr. Vijay (@Helth_z_Wealth) May 20, 2020
ಈ ನಡುವೆ ಭಾರತೀಯ ವಾಯುಪಡೆಯ ಫೈಟರ್ ಜೆಟ್ ಸುಖೋಯ್ 30ನಿಂದ ಕೇಳಿಬಂದ ಸೋನಿಕ್ ಬೂಮ್ ಶಬ್ಧ ಇದಾಗಿದೆ ಎಂದು ವಿಂಗ್ ಕಮಾಂಡರ್ ಸುದರ್ಶನ್ ಅಭಿಪ್ರಾಯ ಹಂಚಿಕೊಂಡರು. ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳಿದರೂ ಈ ಶಬ್ಧ ಬಂದಿದ್ದು ಹೇಗೆ ಎನ್ನುವುದು ಇನ್ನೂ ನಿಗೂಢವಾಗಿದೆ.
ಬೆಂಗಳೂರುನಗರ ಪ್ರದೇಶದಲ್ಲಿ ಯಾವುದೇ ಭೂಕಂಪನ/ಭೂಮಿ ನಡುಗಿದ ಬಗ್ಗೆ ವರದಿಯಾದ ಮಾಹಿತಿಯು ಭೂಕಂಪನಕ್ಕೆ ಸಂಭಂದಿಸಿರುವುದಿಲ್ಲ ಹಾಗೂ ಭೂಕಂಪನ ಚಟುವಟಿಕೆಯು ಒಂದು ಪ್ರದೇಶಕ್ಕೆ ಸೀಮಿತವಾಗಿರದೇ ವ್ಯಾಪಕವಾಗಿರುತ್ತದೆ. ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಭೂಕಂಪನಮಾಪನ ಕೇಂದ್ರಗಳಲ್ಲಿ ಈ ಬಗ್ಗೆ ದಾಖಲಾಗಿರುವುದಿಲ್ಲKSNDMC ನಿರ್ದೇಶಕರು ಶ್ರೀನಿವಾಸರೆಡ್ಡಿ
— Karnataka State Natural Disaster Monitoring Centre (@KarnatakaSNDMC) May 20, 2020
ಏನಿದು ಸೋನಿಕ್ ಬೂಮ್?
ಸಮುದ್ರ ಮಟ್ಟದಲ್ಲಿ ಶಬ್ದಗಳ ತರಂಗಗಳ ವೇಗ ಸುಮಾರು ಗಂಟೆಗೆ 1,235 ಕಿಮೀ ಇರುತ್ತದೆ. ಮೇಲೆ ಮೇಲೆ ಹಾರುತ್ತಾ ಏರಿದಾಗ ಈ ವೇಗ ಕಡಿಮೆಯಾಗುತ್ತಾ ಹೋಗುತ್ತದೆ. ಈ ವೇಗವನ್ನು ಒಂದು ಮ್ಯಾಕ್ ಎನ್ನುತ್ತಾರೆ. ನಮ್ಮ ಫೈಟರ್ ವಿಮಾನಗಳು ಈ ವೇಗದ ಆಸುಪಾಸಿನಲ್ಲಿ ಹಾರಾಡುತ್ತಿರುವಾಗ ಗಾಳಿಯ ಹಲವಾರು ಪದರಗಳು ಒಂದರ ಮೇಲೆ ಒಂದರಂತೆ ಏರುತ್ತಾ ಹೋಗುತ್ತವೆ. ಈ ವಿಮಾನದ ವೇಗ ಒಂದು ಮ್ಯಾಕ್ಗಿಂತಾ ಹೆಚ್ಚಾದಾಗ ಈ ವಾಯು ಪದರಗಳನ್ನು ಸೀಳಿಕೊಂಡು ಮುನ್ನುಗ್ಗುತ್ತವೆ. ಆಗ ವಿಮಾನದ ಹಿಂದೆ ಉಂಟಾದ ನಿರ್ವಾತದಲ್ಲಿ ಅಪ್ಪಳಿಸಿದಾಗ ಉಂಟಾಗುವ ಶಬ್ಧವೇ ಸೂಪರ್ ಸೋನಿಕ್ ಬೂಮ್ ಎಂದು ವಿಂಗ್ ಕಮಾಂಡರ್ ಸುದರ್ಶನ್ ತಿಳಿಸಿದ್ದಾರೆ.
@ShivAroor Caught it!! Finally????.. possible reasone behind that sonic boom type of noise!! #bangalore #bengaluru any idea which fighter jet is this?? pic.twitter.com/Sr0qRWadfz
— S M (@S_M2023) May 20, 2020
ಸೂಪರ್ ಸೋನಿಕ್ ವೇಗವನ್ನು ಮ್ಯಾಕ್ ಸಂಖ್ಯೆಯಲ್ಲಿ ಹೇಳಲಾಗುತ್ತದೆ. ಮ್ಯಾಕ್ 1 ಎಂದರೆ ಧ್ವನಿಯ ವೇಗ, ಮ್ಯಾಕ್ 2 ಆ ವೇಗದ ಎರಡರಷ್ಟು. ವಿಮಾನದ ಎತ್ತರದಲ್ಲಿನ ಧ್ವನಿಯ ವೇಗದಿಂದ ವಿಮಾನದ ವೇಗವನ್ನು ವಿಭಜಿಸುವುದರಿಂದ ಮ್ಯಾಕ್ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಯುದ್ಧ ವಿಮಾನಗಳ ವಾಯುನೆಲೆಯಲ್ಲಿ ಸೂಪರ್ ಸೋನಿಕ್ ಬೂಮ್ ಸಾಮಾನ್ಯ. ಬಹಳಷ್ಟು ಸಲ ಕಿಟಕಿಯ ಗಾಜುಗಳು ಒಡೆದು ಹೋಗುತ್ತದೆ.