-ಸಿಎಂ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ
-ವಿಮಾನ ನಿಲ್ದಾಣದ ಮುಂಭಾಗ ಕಪ್ಪು ಬಾವುಟ ಪ್ರದರ್ಶನ
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಮನೆ ಮತ್ತು ಕಚೇರಿ ನೆಲಸಮ ಮಾಡಿರುವ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದು, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಏಕವಚನದಲ್ಲಿ ಪ್ರಹಾರ ನಡೆಸಿದ್ದಾರೆ.
Advertisement
ಶಿವಸೇನೆಯ ಬೆದರಿಕೆ ನಡುವೆಯೂ ಇಂದು ಮಧ್ಯಾಹ್ನ ಮುಂಬೈಗೆ ಬಂದಿಳಿದ ಕಂಗನಾ, ಟ್ವಿಟ್ಟರ್ ನಲ್ಲಿ ನೆಲಸಮವಾಗಿರುವ ಕಟ್ಟಡದ ವಿಡಿಯೋ ಹಾಕಿ ಪ್ರಜಾಪ್ರಭುತ್ವದ ಕೊಲೆ ಆಗುತ್ತಿದೆ ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ. ಜೊತೆ ವಿಡಿಯೋ ಮೂಲಕ ಮಹಾರಾಷ್ಟ್ರ ಸರ್ಕಾರ ಮತ್ತು ಫಿಲಂ ಮಾಫಿಯಾ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.
Advertisement
Advertisement
ಕಂಗನಾ ಹೇಳಿದ್ದೇನು?: ಉದ್ಧವ್ ಠಾಕ್ರೆ ಫಿಲಂ ಮಾಫಿಯಾ ಜೊತೆ ಶಾಮೀಲಾಗಿ ಮನೆ ನಾಶ ಮಾಡಿ ನನ್ನ ವಿರುದ್ಧ ಸೇಡು ತೀರಿಸಿಕೊಂಡೆ ಎಂದು ತಿಳಿದುಕೊಂಡಿದ್ದೀಯಾ?. ಇಂದು ನನ್ನ ಮನೆ ನೆಲಸಮ ಆಗಿರಬಹುದು, ನಾಳೆ ನಿನ್ನ ಅಹಂಕಾರ ನೆಲಸಮ ಆಗುತ್ತೆ. ಇದು ಸಮಯದಾಟ, ಪ್ರತಿ ಬಾರಿ ಒಂದೇ ಆಗಿರಲ್ಲ. ಕಾಶ್ಮೀರಿ ಪಂಡಿತರ ಮೇಲೆ ಏನಾಗುತ್ತಿತ್ತು ಎಂಬುವುದು ಇಂದು ನನಗೆ ಅರ್ಥವಾಗಿದೆ. ನಾನು ಕೇವಲ ಅಯೋಧ್ಯೆ ಮಾತ್ರವಲ್ಲ, ಕಾಶ್ಮೀರದ ಕುರಿತು ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಮಾತು ನೀಡುತ್ತಾನೆ. ಸಿನಿಮಾಗಳ ಮೂಲಕ ದೇಶದ ಜನರನ್ನ ಎಚ್ಚರಿಸುವ ಕೆಲಸ ಮಾಡುತ್ತೇನೆ. ಈ ರೀತಿ ಕೆಲಸಗಳ ನಡೆಯುತ್ತಿರುವ ಬಗ್ಗೆ ಕೇಳಿದ್ದೆ. ಆದ್ರೆ ಇಂದು ನನ್ನೊಂದಿಗೆ ನಡೆದಿದೆ. ಉದ್ಧವ್ ಠಾಕ್ರೆಯ ಕ್ರೂರತ್ವದ ಭಯೋತ್ಪಾದನೆ ನನ್ನೊಂದಿಗೆ ನಡೆದಿರೋದು ಒಳ್ಳೆಯದು ಆಯ್ತು. ಕಾರಣ ಇದಕ್ಕೆ ಕೆಲ ಮಹತ್ವದ ಕಾರಣವಿದೆ. ಜೈ ಹಿಂದ್, ಜೈ ಮಹಾರಾಷ್ಟ್ರ. ಇದನ್ನೂ ಓದಿ: ಕಂಗನಾ V/s ಮಹಾರಾಷ್ಟ್ರ ಸರ್ಕಾರ- ಮನೆ, ಕಚೇರಿ ನೆಲಸಮಕ್ಕೆ ಹೈಕೋರ್ಟ್ ತಡೆ-ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ
Advertisement
तुमने जो किया अच्छा किया ????#DeathOfDemocracy pic.twitter.com/TBZiYytSEw
— Kangana Ranaut (@KanganaTeam) September 9, 2020
ಮುಂಬೈನ ಪಾಲಿ ಹಿಲ್ಸ್ ನಲ್ಲಿರುವ ಕಂಗನಾ ರಣಾವತ್ ಕಚೇರಿ ಕಟ್ಟಡವನ್ನ ಬಿಎಂಸಿ ಇಂದು ಬೆಳಗ್ಗೆ ನೆಲಸಮ ಮಾಡಲು ಮುಂದಾಗಿತ್ತು. ಮಧ್ಯಾಹ್ನ ಹೈಕೋರ್ಟ್ ನೆಲಸಮ ಕಾರ್ಯಕ್ಕೆ ತಡೆ ನೀಡಿದ ಹಿನ್ನೆಲೆ ಬಿಎಂಸಿ ಅಧಿಕಾರಿಗಳು ಹಿಂದಿರುಗಿದ್ದಾರೆ. ಆದ್ರೆ ಕಟ್ಟಡದ ಒಳಭಾಗ ಭಾಗಶಃ ಕೆಡವಲಾಗಿದ್ದು, ಸದ್ಯದ ಒಳ ಭಾಗದ ವಿಡಿಯೋಗಳನ್ನ ಕಂಗನಾ ಶೇರ್ ಮಾಡಿಕೊಂಡಿದ್ದಾರೆ.
#DeathOfDemocracy pic.twitter.com/pbLleNulYa
— Kangana Ranaut (@KanganaTeam) September 9, 2020
ಬಿಎಂಸಿಗೆ ಹೈಕೋರ್ಟ್ ಚಾಟಿ: ಹೈಕೋರ್ಟ್ ನೀಡಿದ ಆದೇಶವನ್ನ ಬಿಎಂಸಿ ಪಾಲನೆ ಮಾಡೋದರಲ್ಲಿ ವಿಫಲವಾದಂತೆ ಕಾಣಿಸುತ್ತಿದೆ. ನೋಟಿಸ್ ನೀಡಿದ 24 ಗಂಟೆಯೊಳಗೆ ಕಚೇರಿ ಮತ್ತು ಮನೆ ನೆಲಸಮ ಮಾಡುವ ಆತುರವೇನಿತ್ತು? ಇಂದು ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯುವ ವಿಷಯ ತಿಳಿಸಿದಿದ್ದರೂ ಬಿಎಂಸಿ ಈ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಎಂದು ಹೈಕೋರ್ಟ್ ಬಿಎಂಸಿಗೆ ಚಾಟಿ ಬೀಸಿದೆ. ಇದನ್ನೂ ಓದಿ: ಕಂಗನಾ ಮನೆ, ಆಫೀಸ್ ಕೆಡವಿದ ಬಿಎಂಸಿ – ನನ್ನ ಮುಂಬೈ ಪಿಓಕೆ ಆಗಿದೆಯೆಂದ ನಟಿ
#DeathOfDemocracy pic.twitter.com/cpv0A1TJjy
— Kangana Ranaut (@KanganaTeam) September 9, 2020
ಬಾಂಬೆ ಹೈಕೋರ್ಟ್ 26 ಮಾರ್ಚ್ 2020ರಂದು ರಾಜ್ಯ ಸರ್ಕಾರ, ಬಿಎಂಸಿ ಮತ್ತು ಸಂಬಂಧಿತ ವಿಭಾಗಗಳು ಯಾರ ವಿರುದ್ಧವೂ ಆತುರದ ನಿರ್ಧಾರಗಳನ್ನ ತೆಗೆದುಕೊಳ್ಳುವಂತಿಲ್ಲ ಎಂದು ಆದೇಶ ನೀಡಿತ್ತು. ಮಾರ್ಚ್ 26ರ ಆದೇಶಕ್ಕೆ ಸಂಬಂಧಿಸಿದಂತೆ ಆಗಸ್ಟ್ 31ಕ್ಕೆ ಹೈಕೋರ್ಟ್ ವಿಚಾರಣೆ ನಡೆಸಿ, ಆದೇಶದ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿತ್ತು. ಈ ಕಾಲಾವಧಿಯಲ್ಲಿ ಯಾರೇ ಸಮಸ್ಯೆ ಅನುಭವಿಸಿದ್ರೂ ಹೈಕೋರ್ಟ್ ಬಾಗಿಲು ತಟ್ಟಬಹುದು ಎಂದು ನ್ಯಾಯಾಲಯ ಹೇಳಿತ್ತು.
#DeathOfDemocracy pic.twitter.com/JVj3VN40x3
— Kangana Ranaut (@KanganaTeam) September 9, 2020
ಮಧ್ಯಾಹ್ನ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗ ಭಾರತೀಯ ಕಮ್ಗರ್ ಸೇನಾ ಮತ್ತು ಶಿವಸೇನಾ ಕಾರ್ಯಕರ್ತರು ಕಂಗಾನ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಶಿವಸೇನಾ ಬೆದರಿಕೆ ಹಿನ್ನೆಲೆ ಕೇಂದ್ರ ಸರ್ಕಾರ ಕಂಗನಾ ರಣಾವತ್ಗೆ ಕೇಂದ್ರ ಸರ್ಕಾರ ವೈ ದರ್ಜೆಯ ಭದ್ರತೆ ನೀಡಿದೆ.
#DeathOfDemocracy pic.twitter.com/9jPsCDYYrH
— Kangana Ranaut (@KanganaTeam) September 9, 2020
ಮುಂಬೈಗೆ ಆಗಮಿಸಿರುವ ಕಂಗನಾ ರಣಾವತ್ ಏಳು ದಿನಗಳಲ್ಲಿ ಹಿಂದಿರುಗಲಿದ್ದಾರೆ. ಏಳು ದಿನಗಳಲ್ಲಿ ಹಿಂದಿರುಗುವ ದಾಖಲೆಗಳನ್ನ ಬಿಎಂಸಿ ಮುಂದೆ ಹಾಜರುಪಡಿಸದಿದ್ದಲ್ಲಿ 14 ದಿನ ಹೋಂ ಕ್ವಾರಂಟೈನ್ ನಲ್ಲಿ ಕಂಗನಾ ಅವರನ್ನ ಇರಿಸುವ ಸಾಧ್ಯತೆಗಳಿವೆ. ಇದನ್ನೂ ಓದಿ: ಶಿವಸೇನೆ ಧಮ್ಕಿ -ನಟಿ ಕಂಗನಾ ರಣಾವತ್ಗೆ ವೈ ದರ್ಜೆಯ ಭದ್ರತೆ
#WATCH Maharashtra: Members of Bhartiya Kamgar Sena – workers' union affiliated to Shiv Sena, protested outside Chhatrapati Shivaji Maharaj International Airport as actor #KanganaRanaut arrived in Mumbai. pic.twitter.com/shDA5o6B3u
— ANI (@ANI) September 9, 2020
ನಾನು ಯಾವತ್ತೂ ತಪ್ಪು ಮಾಡುವುದಿಲ್ಲ ಎಂದು ನನ್ನ ಶತ್ರುಗಳು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ. ಹೀಗಾಗಿಯೇ ನಾನು ಹೇಳಿದ್ದು, ನನ್ನ ಮುಂಬೈ ಈಗ ಪಿಓಕೆ ಆಗಿದೆ ಎಂದು ಟ್ವೀಟ್ ಮಾಡಿ, ಅಧಿಕಾರಿಗಳು ಮನೆಯನ್ನು ಒಡೆದು ಹಾಕುತ್ತಿರುವ ಫೋಟೋವನ್ನು ಹಾಕಿದ್ದಾರೆ. ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಪಾಕಿಸ್ತಾನ ಪ್ರಜಾಪ್ರಭುತ್ವದ ಕಗ್ಗೊಲೆ ಬಾಬರ್ ಮತ್ತು ಅವನ ಸೈನಿಕರು ಎಂದು ವ್ಯಂಗ್ಯವಾಡಿದ್ದರು.
#WATCH Actor #KanganaRanaut arrives at #Mumbai's Chhatrapati Shivaji Maharaj International Airport pic.twitter.com/p4Sc232kgT
— ANI (@ANI) September 9, 2020