ಬೆಂಗಳೂರು: 4 ವರ್ಷಗಳ ಬಳಿಕ ತಮಿಳುನಾಡಿಗೆ ಮನ್ನಾರ್ ಗುಡಿ ಚಿನ್ನಮ್ಮ ಇಂದು ವಾಪಸ್ ಆಗಲಿದ್ದಾರೆ.
ರಾಹುಕಾಲ ನೋಡಿಕೊಂಡು ದೇವನಹಳ್ಳಿ ರೆಸಾರ್ಟ್ನಿಂದ ನಿರ್ಗಮಿಸಲಿದ್ದಾರೆ. ಚಿನ್ನಮ್ಮನ ಸ್ವಾಗತಕ್ಕೆ ರೆಸಾರ್ಟ್ ಬಳಿ ಬೆಂಬಲಿಗರು ಈಗಾಗಲೇ ಜಮಾಯಿಸಿದ್ದಾರೆ. ಅತ್ತಿಬೆಲೆಯಲ್ಲಿ ಶಶಿಕಲಾ ಅದ್ದೂರಿ ಸ್ವಾಗತಕ್ಕೆ ಅನುಮತಿ ನಿರಾಕರಿಸಲಾಗಿದೆ. ರೆಸಾರ್ಟ್ನಿಂದ ನೇರವಾಗಿ ತಮಿಳುನಾಡು ಗಡಿ ತಲುಪಲಷ್ಟೇ ಅವಕಾಶ ನೀಡಲಾಗಿದ್ದು, ರೆಸಾರ್ಟ್ ಬಳಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
Advertisement
Advertisement
ಶಶಿಕಲಾ ತಮಿಳುನಾಡು ಎಂಟ್ರಿ ಆಗ್ತಿದ್ದಂತೆ ಅದ್ದೂರಿ ಸ್ವಾಗತಕ್ಕೆ ಸಜ್ಜಾಗಿದೆ. ಗಡಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಬೆಂಬಲಿಗರು ಚೆನ್ನೈಗೆ ಕರೆದೊಯ್ಯಲಿದ್ದಾರೆ. ಕರ್ನಾಟಕ ಗಡಿಯಿಂದ ಹೊಸೂರು, ಚೆನ್ನೈ ಮಾರ್ಗದಲ್ಲಿ ಮೆರವಣಿಗೆಯ ಭವ್ಯ ಸ್ವಾಗತ ಕೋರಲಾಗುತ್ತದೆ.
Advertisement
Advertisement
ಸುಮಾರು 60 ಕಡೆ ಬೆಂಬಲಿಗರು ಶಶಿಕಲಾಗೆ ಸ್ವಾಗತ ಕೋರಲಿದ್ದಾರೆ. ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲು ಸಿದ್ಧತೆ ನಡೆಸಲಾಗುತ್ತಿದ್ದು, ಶಶಿಕಲಾ ಬರಮಾಡಿಕೊಳ್ಳಲು ಸುಮಾರು 5 ಸಾವಿರ ಜನ ಸೇರುವ ಸಾಧ್ಯತೆ ಇದೆ.