ಬೆಂಗಳೂರು: ಸಿಎಂ ಯಡಿಯೂರಪ್ಪನವರಿಗೆ ಇಂದು ಬಿಗ್ ಬಿಗ್ ಡೇ ಆಗಿದ್ದು ರಾಜೀನಾಮೆ ಗೊಂದಲಕ್ಕೆ ಇಂದೇ ತೆರೆ ಬೀಳಲಿದೆ.
ಇಂದಿನ ಕಾರ್ಯಕ್ರಮಗಳು ಏನು?
ಬೆಳಗ್ಗೆ 9:50ರ ವೇಳೆಗೆ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಬಳಿಕ ಸರ್ಕಾರದ 2 ವರ್ಷ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
Advertisement
ನಾಡಿನ ಸಮಸ್ತ ಜನತೆಗೆ ಕಾರ್ಗಿಲ್ ವಿಜಯ್ ದಿವಸದ ಹಾರ್ದಿಕ ಶುಭಕಾಮನೆಗಳು. ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕೆ ವಿಜಯವನ್ನು ತಂದುಕೊಟ್ಟ ನಮ್ಮ ಸೇನಾಪಡೆಗಳಿಗೆ ಹೆಮ್ಮೆಯ ಅಭಿನಂದನೆಗಳನ್ನು ಸಲ್ಲಿಸುವ ಜೊತೆಗೆ ದೇಶಕ್ಕಾಗಿ ಹುತಾತ್ಮರಾದ ಯೋಧರಿಗೆ ಗೌರವಪೂರ್ವಕ ಪ್ರಣಾಮಗಳನ್ನು ಅರ್ಪಿಸೋಣ. ಜೈ ಹಿಂದ್ ????????#KargilVijayDiwas
— B.S.Yediyurappa (@BSYBJP) July 26, 2021
Advertisement
ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಸಾಧನಾ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಕೈಪಿಡಿ ಬಿಡುಗಡೆಯಾಗಲಿದೆ. ಇದನ್ನೂ ಓದಿ : ಸಂದೇಶ ಬಂದಿಲ್ಲ, ಕಡೆ ಕ್ಷಣದವರೆಗೂ ಕೆಲಸ ಮಾಡ್ತೇನೆ: ಸಿಎಂ ಯಡಿಯೂರಪ್ಪ
Advertisement
Advertisement
ಈ ಸಮಾರಂಭ ಉದ್ದೇಶಿಸಿ ಸಿಎಂ ಮಹಾ ಭಾಷಣ ಮಾಡಲಿದ್ದಾರೆ. ಇದೇ ವಿದಾಯ ಭಾಷಣವಾಗುವ ಸಾಧ್ಯತೆಯಿದೆ. ಮಧ್ಯಾಹ್ನ 1 ಗಂಟೆ ಬಳಿಕ ಭೋಜನಕೂಟದಲ್ಲಿ ಸಿಎಂ ಭಾಗಿಯಾಗುತ್ತಾರೆ. ಮಧ್ಯಾಹ್ನ 1:30ಕ್ಕೆ ಕಾವೇರಿ ನಿವಾಸಕ್ಕೆ ಸಿಎಂ ವಾಪಸ್ ಆಗಲಿದ್ದಾರೆ.
ಕಾವೇರಿ ನಿವಾಸದಲ್ಲಿ ಮುಂದಿನ ನಡೆ ಬಗ್ಗೆ ಅಂತಿಮ ಚರ್ಚೆ, ಸಮಾಲೋಚನೆ ಮಾಡಿ ಮಧ್ಯಾಹ್ನ 3 ಗಂಟೆ ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗುವ ಸಾಧ್ಯತೆಯಿದೆ. ರಾಜ್ಯಪಾಲರ ಭೇಟಿ ಮಾಡುವವರೆಗೂ ಹೈಕಮಾಂಡ್ ಸಂದೇಶಕ್ಕಾಗಿ ಸಿಎಂ ಕಾಯಲಿದ್ದಾರೆ.