– ರಾಜ್ಯದಲ್ಲಿ ಇಂದು ಕೊರೊನಾಗೆ 2ನೇ ಬಲಿ
ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 34 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 959ಕ್ಕೆ ಏರಿಕೆಯಾಗಿದೆ. ಜೊತೆಗೆ ಮಂಗಳೂರಿನಲ್ಲಿ ಕೊರೊನಾಗೆ ವ್ಯಕ್ತಿ ಬಲಿಯಾಗಿದ್ದಾರೆ. ಇದರೊಂದಿಗೆ ಇಂದು ಕೊರೊನಾಗೆ ರಾಜ್ಯದಲ್ಲಿ 2ನೇ ಬಲಿಯಾಗಿದ್ದು, ಸಾವಿನ ಸಂಖ್ಯೆ 33ಕ್ಕೆ ಏರಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಧ್ಯಾಹ್ನ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಬೀದರ್ 12, ಕಲಬುರಗಿ 8, ಹಾಸನ 4, ಬೆಂಗಳೂರು 2, ದಕ್ಷಿಣ ಕನ್ನಡ ಹಾಗೂ ಬಳ್ಳಾರಿಯಲ್ಲಿ ತಲಾ 1 ಹೊಸ ಪ್ರಕರಣ ದೃಢವಾಗಿದೆ. ಜೊತೆಗೆ ಕಲಬುರಗಿಯಲ್ಲಿ ಕೊರೊನಾ ಬಲಿಯಾಗಿದೆ. ಮಂಗಳೂರಿನ ಬೋಳೂರು ನಿವಾಸಿ 58 ವರ್ಷದ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ. ಇವರಿಗೆ ಏಪ್ರಿಲ್ 30ರಂದು ಸೋಂಕು ದೃಢವಾಗಿತ್ತು. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೆದುಳಿನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸಾವಿನ ಅಧಿಕೃತ ಘೋಷಣೆ ಸಾಧ್ಯತೆ ಇದ್ದು, ದ.ಕ ಸಂಭವಿಸಿದ 4ನೇ ಕೊರೊನಾ ಸಾವು ಇದಾಗಿದೆ. ಉಳಿದಂತೆ ಈವರೆಗೂ 451 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Advertisement
Advertisement
ಸಂಜೆ ಬಿಡುಗಡೆಯಾದ ಬುಲೆಟಿನ್
37. ರೋಗಿ 952 : ಕಲಬುರಗಿಯ 42 ವರ್ಷದ ಮಹಿಳೆ. ಪಿ-806 ಸಂಪರ್ಕದಲ್ಲಿದ್ದರು.
28. ರೋಗಿ 953: ಕಲಬುರಗಿಯ 30 ವರ್ಷದ ಮಹಿಳೆ. ಪಿ-848 ಸಂಪರ್ಕದಲ್ಲಿದ್ದರು.
29. ರೋಗಿ 954: ಕಲಬುರಗಿಯ 19 ವರ್ಷದ ಯುವಕ. ಆಂಧ್ರಪ್ರದೇಶದ ಗುಂಟೂರು ಪ್ರಯಾಣದ ಹಿನ್ನೆಲೆ.
30. ರೋಗಿ 955: ಕಲಬುರಗಿಯ 28 ವರ್ಷದ ಮಹಿಳೆ. ಪಿ-806 ಸಂಪರ್ಕ.
31. ರೋಗಿ 956: ಕಲಬುರಗಿಯ 15 ವರ್ಷದ ಬಾಲಕಿ. ಪಿ-806 ಸಂಪರ್ಕ.
32. ರೋಗಿ 957: ಕಲಬುರಗಿಯ 35 ವರ್ಷದ ಮಹಿಳೆ. ಪಿ-806 ಸಂಪರ್ಕ.
33. ರೋಗಿ 958: ಬೆಂಗಳೂರು ನಗರ ಜಿಲ್ಲೆಯ 24 ವರ್ಷದ ಯುವಕ. ಲಂಡನ್ ಪ್ರಯಾಣದ ಹಿನ್ನೆಲೆ.
34. ರೋಗಿ 959: ಬೀದರ್ ನ 44 ವರ್ಷದ ಪುರುಷ. ಬೀದರಿನ ಕಂಟೈನ್ಮೆಂಟ್ ಝೋನ್ ಸಂಪರ್ಕದ ಹಿನ್ನೆಲೆ.
Advertisement
ರೋಗಿ ಸಂಖ್ಯೆ 958ರ 24 ವರ್ಷದ ಯುವಕ ಮೇ 11 ರಂದು ಲಂಡನ್ ನಿಂದ ಆಗಮಿಸಿದ್ದರು. ಈ ವಿಮಾನದಲ್ಲಿ 356 ಮಂದಿ ಜನ ಪ್ರಯಾಣಿಸಿದ್ದರು. ಸದ್ಯ ಎಲ್ಲರೂ ಕ್ವಾರಂಟೈನ್ ನಲ್ಲಿದ್ದಾರೆ. ಬೆಳಗ್ಗೆ ಬಿಡುಗಡೆಯಾಗಿದ್ದ ಬುಲೆಟಿನ್ನಲ್ಲಿ ಕಲಬುರಗಿಯ ಕಂಟೈನ್ಮೆಂಟ್ ಝೋನ್ ಸಂಪರ್ಕದಲ್ಲಿದ್ದ 60 ವರ್ಷದ ವೃದ್ಧ ಸಾವನ್ನಪ್ಪಿದ್ದರು. ಮೃತ ವೃದ್ಧ ಕಲಬುರಗಿ ನಗರದ ಮೊಮ್ಮಿನಪುರ ನಿವಾಸಿಯಾಗಿದ್ದು, ಕಲಬುರಗಿಯ ಜಿಮ್ಸ್ ಕೊರೊನಾ ವಾರ್ಡ್ ನಲ್ಲಿ ಮಂಗಳವಾರ ರಾತ್ರಿ ಸಾವನ್ನಪ್ಪಿದ್ದರು. ಅವರ ಕೋವಿಡ್-19 ರಿಪೋರ್ಟ್ ಪಾಸಿಟಿವ್ ಬಂದಿದೆ. ಬೆಳಗ್ಗೆ ವಿಜಯಪುರದ ಇಬ್ಬರು ಕೊರೊನಾ ಪಾಸಿಟಿವ್ ಬಂದಿದ್ದರೆ ಸಂಜೆ 6 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
Advertisement
ಸೋಂಕಿತರ ವಿವರ: ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್
1.ರೋಗಿ-926: ಕಲಬುರಗಿಯ 45 ವರ್ಷದ ಪುರುಷ. ರೋಗಿ-848ರ ಸಂಪರ್ಕದ್ದಲ್ಲಿದ್ದರು.
2.ರೋಗಿ-927: ಕಲಬುರಗಿಯ 60 ವರ್ಷದ ವೃದ್ಧ. ಕಲಬುರಗಿಯ ಕಂಟೈನ್ಮೆಂಟ್ ಝೋನ್ ಸಂಪರ್ಕದಲ್ಲಿದ್ದರು.
3.ರೋಗಿ-928: ಬೆಂಗಳೂರಿನ 37 ವರ್ಷದ ಮಹಿಳೆ. ಸೋಂಕಿನ ಮೂಲ ಪತ್ತೆಯಾಗಿಲ್ಲ.
4.ರೋಗಿ-929: ಉತ್ತರ ಕನ್ನಡದ 02 ವರ್ಷದ ಬಾಲಕಿ. ರೋಗಿ-786ರ ಸಂಪರ್ಕದಲ್ಲಿದ್ದಳು.
5.ರೋಗಿ-930: ಬಳ್ಳಾರಿಯ 18 ವರ್ಷದ ಯುವತಿ. ತೀವ್ರ ಉಸಿರಾಟದ ತೊಂದರೆ.
6.ರೋಗಿ-931: ಬೀದರ್ನ 30 ವರ್ಷದ ಯುವಕ. ಬೀದರ್ ಜಿಲ್ಲೆಯ ಕಂಟೈನ್ಮೆಂಟ್ ಝೋನ್ ಸಂಪರ್ಕದಲ್ಲಿದ್ದರು.
7.ರೋಗಿ-932: ಬೀದರ್ನ 26 ವರ್ಷದ ಯುವತಿ. ಬೀದರ್ ಜಿಲ್ಲೆಯ ಕಂಟೈನ್ಮೆಂಟ್ ಝೋನ್ ಸಂಪರ್ಕದಲ್ಲಿದ್ದರು.
8.ರೋಗಿ-933: ದಾವಣಗೆರೆಯ 33 ವರ್ಷದ ಮಹಿಳೆ. ರೋಗಿ-695ರ ಸಂಪರ್ಕ ಹೊಂದಿದ್ದರು.
9.ರೋಗಿ-934: ದಾವಣಗೆರೆಯ 11 ವರ್ಷದ ಬಾಲಕ. ರೋಗಿ-695ರ ಸಂಪರ್ಕದಲ್ಲಿ ಇದ್ದರು.
10.ರೋಗಿ-935: ಬೀದರ್ನ 19 ವರ್ಷದ ಯುವತಿ. ಬೀದರ್ ಜಿಲ್ಲೆಯ ಕಂಟೈನ್ಮೆಂಟ್ ಝೋನ್ ಸಂಪರ್ಕದಲ್ಲಿದ್ದರು.
11. ರೋಗಿ-936: ಬೀದರ್ನ 36 ವರ್ಷದ ಮಹಿಳೆ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್ನಲ್ಲಿ ಸಂಪರ್ಕ.
12. ರೋಗಿ-937: ಬೀದರ್ನ 17 ವರ್ಷದ ಬಾಲಕ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್ನಲ್ಲಿ ಸಂಪರ್ಕ.
13. ರೋಗಿ-938: ಬೀದರ್ನ 36 ವರ್ಷದ ಮಹಿಳೆ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್ನಲ್ಲಿ ಸಂಪರ್ಕ.
14. ರೋಗಿ-939: ಬೀದರ್ನ 31 ವರ್ಷದ ಮಹಿಳೆ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್ನಲ್ಲಿ ಸಂಪರ್ಕ.
15. ರೋಗಿ-940: ಬೀದರ್ನ 15 ವರ್ಷದ ಬಾಲಕಿ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್ನಲ್ಲಿ ಸಂಪರ್ಕ.
16. ರೋಗಿ-941: ಬೀದರ್ನ 16 ವರ್ಷದ ಬಾಲಕಿ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್ನಲ್ಲಿ ಸಂಪರ್ಕ.
17. ರೋಗಿ-942: ಬೀದರ್ನ 14 ವರ್ಷದ ಬಾಲಕಿ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್ನಲ್ಲಿ ಸಂಪರ್ಕ.
18. ರೋಗಿ-943: ಬೀದರ್ನ 35 ವರ್ಷದ ಮಹಿಳೆ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್ನಲ್ಲಿ ಸಂಪರ್ಕ.
19. ರೋಗಿ-944: ವಿಜಯಪುರದ 30 ವರ್ಷದ ಪುರುಷ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
20. ರೋಗಿ-945: ವಿಜಯಪುರದ 18 ವರ್ಷದ ಯುವಕ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
21. ರೋಗಿ-946: ಉತ್ತರ ಕನ್ನಡದ 26 ವರ್ಷದ ಯುವಕ. ಮಹಾರಾಷ್ಟ್ರದ ರತ್ನಗಿರಿಗೆ ಪ್ರಯಾಣ ಮಾಡಿರುವ ಹಿನ್ನೆಲೆ.
22. ರೋಗಿ-947: ದಕ್ಷಿಣ ಕನ್ನಡದ 38 ವರ್ಷದ ಮಹಿಳೆ. ರೋಗಿ-507 ಸಂಪರ್ಕ.
23. ರೋಗಿ-948: ಹಾಸನದ 38 ವರ್ಷದ ಮಹಿಳೆ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
24. ರೋಗಿ-949: ಹಾಸನದ 17 ವರ್ಷದ ಯುವಕ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
25. ರೋಗಿ-950: ಹಾಸನದ 14 ವರ್ಷದ ಬಾಲಕಿ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
26. ರೋಗಿ-951: ಹಾಸನದ 43 ವರ್ಷದ ಪುರುಷ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.