– ಇಬ್ಬರು ಬೆಸ್ಟ್ ಬ್ಯಾಟ್ಸ್ಮ್ಯಾನ್ಗಳಿಗೆ ಪ್ರತಿಷ್ಠೆಯ ಕಣ
ಅಬುಧಾಬಿ: ಇಂದು ಐಪಿಎಲ್ ವಿಕೇಂಡ್ ಧಮಾಕದ ಮೊದಲನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಐಪಿಎಲ್ನಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿವೆ. ಅಬುಧಾಬಿ ಕ್ರಿಕೆಟ್ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಉಭಯ ತಂಡಗಳ ಬಲಿಷ್ಠ ನಾಯಕರು ಇಂದು ಸೆಣಸಾಡಲಿದ್ದಾರೆ. ಬ್ಯಾಟಿಂಗ್ನಲ್ಲಿ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಅವರ ನಡುವೆ ಯಾರು ಉತ್ತಮರು ಎಂಬ ಪ್ರಶ್ನೆ ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಕಾರಣ ಇಬ್ಬರಿಗೂ ಈ ಪಂದ್ಯ ಪ್ರತಿಷ್ಠೆಯ ಕಣವಾಗಿದೆ.
Advertisement
Advertisement
ಈಗಾಗಲೇ ಐಪಿಎಲ್ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಪಂದ್ಯ ಗೆದ್ದಿರುವ ಬೆಂಗಳೂರು ತಂಡ ಉತ್ತಮ ಸ್ಥಿತಿಯಲ್ಲಿದೆ. ಜೊತೆಗೆ ಕಳೆದ ಪಂದ್ಯವನ್ನು ಬಲಿಷ್ಠ ಮುಂಬೈ ವಿರುದ್ಧ ಸೂಪರ್ ಓವರಿನಲ್ಲಿ ಗೆದ್ದ ಆತ್ಮವಿಶ್ವಾಸದೊಂದಿಗೆ ಇಂದು ಕಣಕ್ಕೆ ಇಳಿಯಲಿದೆ. ಜೊತೆಗೆ ರಾಜಸ್ಥಾನ್ ಕೂಡ ಆಡಿರುವ 3 ಪಂದ್ಯಗಳಲ್ಲಿ ಎರಡಲ್ಲಿ ಗೆಲುವು ಸಾಧಿಸಿದೆ. ಜೊತೆಗೆ ಕಳೆದ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಹೀನಾಯ ಸೋಲಿನ ಕಹಿ ಅನುಭವದೊಂದಿಗೆ ಇಂದು ಆಡಬೇಕಿದೆ.
Advertisement
Advertisement
ಆರ್ಸಿಬಿಗೆ ಬ್ಯಾಟಿಂಗ್ ಬಲ
ಆರ್ಸಿಬಿ ತಂಡದಲ್ಲಿ ಬ್ಯಾಟ್ಸ್ ಮ್ಯಾನ್ಗಳ ದಂಡೇ ಇದೆ. ಆಸೀಸ್ನ ಅನುಭವಿ ಆಟಗಾರ ಫಿಂಚ್, ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಪಂದ್ಯದ ಯಾವುದೇ ಹಂತದಲ್ಲಿಯಾದರೂ ಸಿಡಿದೆಳೇಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಜೊತೆಗೆ ಕನ್ನಡಿಗ ದೇವದತ್ ಪಡಿಕಲ್ ಅವರು ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದು, ಬೆಂಗಳೂರು ತಂಡಕ್ಕೆ ವರದಾನವಾಗಲಿದೆ. ಕೊನೆಯ ಓವರ್ ಗಳಲ್ಲಿ ಶಿವಮ್ ದುಬೆ ಕೂಡ ದೊಡ್ಡ ಹೊಡೆತಕ್ಕೆ ಮುಂದಾಗಿದ್ದಾರೆ.
ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿರುವ ಆರ್ಸಿಬಿ ಬೌಲಿಂಗ್ನಲ್ಲಿ ಕೊಂಚ ಸುಧಾರಿಸಬೇಕಿದೆ. ಡೆತ್ ಓವರಿನಲ್ಲಿ ಉತ್ತಮವಾಗಿ ಬೌಲ್ ಮಾಡುವ ಬೌಲರ್ ತಂಡಕ್ಕೆ ಬೇಕಿದೆ. ಈಗಾಗಲೇ ಡೇಲ್ ಸ್ಟೇನ್ ಮತ್ತು ಉಮೇಶ್ ಯಾದವ್ ಅವರು ವಿಫಲವಾಗಿ ತಂಡದಿಂದ ಹೊರಗುಳಿದಿದ್ದಾರೆ. ಹಿಂದಿನ ಪಂದ್ಯದಲ್ಲಿ ಕೊಂಚ ಸುಧಾರಿಸಿದ್ದ ಆರ್ಸಿಬಿ ಬೌಲಿಂಗ್ಗೆ ಸೈನಿ ಮತ್ತು ಉದಾನ ಅವರ ಬೌಲಿಂಗ್ ಕೈಹಿಡಿದಿದೆ. ಜೊತೆಗೆ ಯುಜ್ವೇಂದ್ರ ಚಹಲ್ ಅವರ ಸ್ಪಿನ್ ಮೋಡಿ ಚೆನ್ನಾಗಿ ಮ್ಯಾಜಿಕ್ ಮಾಡುತ್ತಿದೆ.
ಅಬ್ಬರಿಸುತ್ತಿರುವ ಸಂಜು ಸಮ್ಸನ್
ರಾಜಸ್ಥಾನ್ ರಾಯಲ್ಸ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಬಹಳ ಬ್ಯಾಲೆನ್ಸ್ ಆಗಿದೆ. ಆರಂಭದಲ್ಲಿ ನಾಯಕ ಸ್ಮಿತ್ ಮತ್ತು ಬಟ್ಲರ್ ಆಡುತ್ತಾರೆ. ಜೊತೆಗೆ ಸಂಜು ಸಮ್ಸನ್ ಅವರು ಉತ್ತಮ ಲಯದಲಿದ್ದು, ಹೀಗಾಗಲೇ 3 ಪಂದ್ಯದಲ್ಲಿ ಎರಡು ಅರ್ಧಶತಕದೊಂದಿಗೆ 167 ರನ್ ಸಿಡಿಸಿದ್ದಾರೆ. ರಾಜಸ್ಥಾನ್ ಬೌಲಿಂಗ್ನಲ್ಲಿ ಜೋಫ್ರಾ ಆರ್ಚರ್, ಟಮ್ ಕರ್ರನ್ ಅವರು ಮಿಂಚಲಿದ್ದಾರೆ.