– ಇಂದು 6,231 ಮಂದಿ ಆಸ್ಪತ್ರೆಯಿಂದ ಬಿಡುಗಡೆ
ಬೆಂಗಳೂರು: ರಾಜ್ಯದಲ್ಲಿ ಇಂದು 7,385 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 2,56,975ಕ್ಕೆ ಏರಿಕೆಯಾಗಿದೆ.
ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, 102 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ 4,429 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
Advertisement
Advertisement
ಇಂದು ರಾಜ್ಯದಲ್ಲಿ 6,231 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 2,56,97 ಸೋಂಕಿತರ ಪೈಕಿ 82,149 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 1,70,381 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 705 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ಇಂದು 25,989 ರ್ಯಾಪಿಡ್ ಟೆಸ್ಟ್ ನಲ್ಲಿ 33,614 ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು, ಒಟ್ಟು 59,603 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಒಟ್ಟು 608113 ಮಂದಿಗೆ ರ್ಯಾಪಿಡ್ ಟೆಸ್ಟ್, 16,48,749 ಮಂದಿಗೆ ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 22,56,862 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಇಂದು 2,912 ಮಂದಿಗೆ ಸೋಂಕು ದೃಢವಾಗಿದ್ದು, 25 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 99,822 ಏರಿಕೆ ಆಗಿದೆ. ಬಳ್ಳಾರಿ 483, ಬೆಳಗಾವಿ 358, ಬೆಂಗಳೂರು ನಗರ 2,912, ದಾವಣಗೆರೆ 245, ಕಲಬುರಗಿ 210, ಮೈಸೂರು 253, ಉಡುಪಿ 351 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇಂದು ಒಟ್ಟು 8 ಜಿಲ್ಲೆಯಲ್ಲಿ 200ಕ್ಕಿಂತ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಬಾಗಲಕೋಟೆ 295, ಬಳ್ಳಾರಿ 389, ಬೆಳಗಾವಿ 89, ಬೆಂಗಳೂರು ಗ್ರಾಮಾಂತರ 207, ಬೆಂಗಳೂರು ನಗರ 1,981, ಬೀದರ್ 107, ಚಾಮರಾಜ ನಗರ 34, ಚಿಕ್ಕಬಳ್ಳಾಪುರ 123, ಚಿಕ್ಕಮಗಳೂರು 62, ದಕ್ಷಿಣ ಕನ್ನಡ 187, ದಾವಣಗೆರೆ 381, ಧಾರವಾಡ 330, ಗದಗ 151, ಹಾಸನ 117, ಹಾವೇರಿ 42, ಕಲಬುರಗಿ 176, ಕೊಡಗು 49, ಕೋಲಾರ 132, ಕೊಪ್ಪಳ 143, ಮಂಡ್ಯ 93, ರಾಯಚೂರು 290, ರಾಮನಗರ 82, ಶಿವಮೊಗ್ಗ 13, ತುಮಕೂರು 77, ಉಡುಪಿ 359, ಉತ್ತರ ಕನ್ನಡ 116, ವಿಜಯಪುರ 150, ಯಾದಗಿರಿ 54 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.