– 486ಕ್ಕೇರಿದ ಸಾವಿನ ಸಂಖ್ಯೆ
– ಬೆಂಗ್ಳೂರಿನಲ್ಲಿ ಸಾವಿನ ಪ್ರಕರಣವಿಲ್ಲ!
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆ ಜೊತೆಗೆ ಸಾವಿನ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಕೂಡ 17 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 486ಕ್ಕೇರಿದೆ.
ಆರೋಗ್ಯ ಇಲಾಖೆ ಬುಲೆಟಿನ್ ಮಾಹಿತಿಯ ಅನ್ವಯ ಬೆಂಗಳೂರಿನಲ್ಲಿ ಇಂದು ಒಂದು ಸಾವಿನ ಪ್ರಕರಣ ದಾಖಲಾಗಿಲ್ಲ. ಉಳಿದಂತೆ ಧಾರವಾಡದಲ್ಲಿ 7, ಹಾಸನ, ಕಲಬುರಗಿ, ಮೈಸೂರು ಜಿಲ್ಲೆಗಳಲ್ಲಿ ತಲಾ 2, ರಾಯಚೂರು, ದಾವಣಗೆರೆ, ಉತ್ತರ ಕನ್ನಡ ಮತ್ತು ತುಮಕೂರಿನಲ್ಲಿ ತಲಾ 1 ಸಾವಿನ ಪ್ರಕರಣ ದಾಖಲಾಗಿದೆ.
Advertisement
Advertisement
ಬುಲೆಟಿನ್ ಬಿಡುಗಡೆ ಮುನ್ನ ಕೋವಿಡ್-19 ಕುರಿತು ಮಾಹಿತಿ ನೀಡಿದ ಸಚಿವ ಸುಧಾಕರ್ ಅವರು, ರಾಜ್ಯದಲ್ಲಿ ಇಂದು 18,952 ಟೆಸ್ಟ್ ಗಳನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಒಂದು ದಿನಕ್ಕೆ 30 ಸಾವಿರ ಟೆಸ್ಟ್ ಮಾಡುವ ಗುರಿ ಹೊಂದಿದ್ದೇವೆ. ರಾಜ್ಯದಲ್ಲಿ ಇಂದು ಸಾವಿನ ಪ್ರಮಾಣ ಶೇ. 1.49 ಮತ್ತು ಬೆಂಗಳೂರಿನ ಸಾವಿನ ಪ್ರಮಾಣ ಶೇ. 1.28 ರಷ್ಟಿದ್ದು, ವಿಶ್ವದಲ್ಲಿ ಸಾವಿನ ಪ್ರಮಾಣ ಶೇ. 4.5ಕ್ಕಿಂತಲೂ ಮೇಲಿದೆ. ಭಾರತದಲ್ಲಿ ಸಾವಿನ ಪ್ರಮಾಣ ಶೇ. 2.74 ರಷ್ಟಿದೆ ಎಂದು ತಿಳಿಸಿದರು.
Advertisement
ಸಾವನ್ನಪ್ಪಿದವರ ವಿವರ:
ಧಾರವಾಡದಲ್ಲಿ ರೋಗಿ-18716, ರೋಗಿ-23232, ರೋಗಿ-24839, ರೋಗಿ-25532, ರೋಗಿ-28410, ರೋಗಿ-30725, ರೋಗಿ-30726 ಮಂದಿ ಸಾವನ್ನಪ್ಪಿದ್ದಾರೆ.
Advertisement
ಹಾಸನದಲ್ಲಿ ರೋಗಿ-25268 77 ವರ್ಷದ ವೃದ್ಧ, ರೋಗಿ-28410 78 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ಕಲಬುರಗಿಯಲ್ಲಿ ರೋಗಿ-26670 50 ವರ್ಷದ ಮಹಿಳೆ, ರೋಗಿ-30965 53 ವರ್ಷದ ಪುರುಷ ಸಾವನ್ನಪ್ಪಿದ್ದಾರೆ. ಮೈಸೂರಿನಲ್ಲಿ ರೋಗಿ-29091 64 ವರ್ಷದ ವೃದ್ಧ, ರೋಗಿ-29178 53 ವರ್ಷದ ಪುರುಷ ಸಾವನ್ನಪ್ಪಿದ್ದಾರೆ.
ರಾಯಚೂರಿನಲ್ಲಿ ರೋಗಿ-11328 45 ವರ್ಷದ ಮಹಿಳೆ, ದಾವಣಗೆರೆಯಲ್ಲಿ ರೋಗಿ-30682 73 ವರ್ಷದ ವೃದ್ಧ, ಉತ್ತರ ಕನ್ನಡದ ರೋಗಿ-24704 42 ವರ್ಷದ ಪುರುಷ ಮತ್ತು ತುಮಕೂರಿನ ರೋಗಿ-29178 53 ವರ್ಷದ ಪುರುಷ ಸಾವನ್ನಪ್ಪಿದ್ದಾರೆ.