-ಐಸಿಯುನಲ್ಲಿ 197 ಮಂದಿಗೆ ಚಿಕಿತ್ಸೆ
ಬೆಂಗಳೂರು: ಇಂದು ಕೊರೊನಾ ರಾಜ್ಯದಲ್ಲಿ ಮಹಾ ದಾಖಲೆಯನ್ನು ಬರೆದಿದ್ದು, ಒಂದೇ ದಿನ 918 ಮಂದಿಗೆ ಸೋಂಕು ತಗುಲಿದೆ. ಕೊರೊನಾಗೆ 11 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರಿನಲ್ಲಿ 3, ಬೀದರ್ 3, ಕಲಬುರಗಿ 2, ಗದಗ, ಬಳ್ಳಾರಿ ಮತ್ತು ಧಾರವಾಡದಲ್ಲಿ ತಲಾ ಒಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಐಸಿಯುನಲ್ಲಿ ಒಟ್ಟು 197 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 197 ಪೈಕಿ 125 ರೋಗಿಗಳು ಬೆಂಗಳೂರಿನಲ್ಲಿಯೇ ಇದ್ದಾರೆ. ಇಂದು ಒಟ್ಟು ಸಿಲಿಕಾನ್ ಸಿಟಿಯಲ್ಲಿ ಒಟ್ಟು 596 ಮಂದಿಗೆ ಸೋಂಕು ತಗುಲಿದೆ.
Advertisement
Advertisement
ಇಂದು ಕೊರೊನಾಗೆ ಬಲಿಯಾದವರ ವಿವರ:
1. ರೋಗಿ 7,204: ಬೆಂಗಳೂರಿನ 83 ವರ್ಷದ ವೃದ್ಧ. ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 11ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜೂನ್ 27ರಂದು ನಿಧನರಾಗಿರುತ್ತಾರೆ. ವೃದ್ಧ ಕಿಡ್ನಿ ಸಮಸ್ಯೆ ಮತ್ತು ಡಯಾಬಿಟಿಸ್ ನಿಂದ ಬಳಲುತ್ತಿದ್ದರು. ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
Advertisement
2. ರೋಗಿ 7,955: ಬೀದರ್ ಜಿಲ್ಲೆಯ 65 ವರ್ಷದ ವೃದ್ಧ, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 16ರಂದು ನಿಗದಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜೂನ್ 26ರಂದು ನಿಧನರಾಗಿದ್ದಾರೆ. ವೃದ್ಧ ಕಿಡ್ನಿ ಸಮಸ್ಯೆ ಮತ್ತು ಡಯಾಬಿಟಿಸ್ ನಿಂದ ಬಳಲುತ್ತಿದ್ದರು.
Advertisement
3. ರೋಗಿ 8,216: ಬೆಂಗಳೂರಿನ 70 ವರ್ಷದ ವೃದ್ಧ. ಜ್ವರ, ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 17ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜೂನ್ 25ರಂದು ನಿಧನರಾಗಿದ್ದಾರೆ. ಸೋಂಕಿನ ನಿಖರವಾದ ಮೂಲ ಪತ್ತೆಯಾಗಿಲ್ಲ.
4. ರೋಗಿ 9,833: ಕಲಬುರಗಿಯ 72 ವರ್ಷದ ವೃದ್ಧ. ಸಣ್ಣ ಪ್ರಮಾಣ ದಲ್ಲಿ ಶೀತ ಮತ್ತು ಜ್ವರ ಕಾಣಿಸಿಕೊಂಡಿತ್ತು. ಜೂನ್ 23ರಂದು ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಚಿಕಿತ್ಸೆ ಫಲಕಾರಿಯಾಗದೇ ಜೂನ್ 26ರಂದು ನಿಧನರಾಗಿದ್ದಾರೆ. ಸೋಂಕಿನ ಮೂಲ ಪತ್ತೆಯಾಗಿಲ್ಲ. ಡಯಾಬಿಟಿಸ್ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು.
5. ರೋಗಿ 11,148: ಬೆಂಗಳೂರಿನ 74 ವರ್ಷದ ವೃದ್ಧೆ. ಎದೆನೋವು ಕಾಣಿಸಿಕೊಂಡಿದ್ದರಿಂದ ಜೂನ್ 15ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜೂನ್ 20ರಂದು ನಿಧನರಾಗಿದ್ದಾರೆ. ವೃದ್ಧೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಆದ್ರೆ ಸೋಂಕಿನ ಮೂಲ ತಿಳಿದು ಬಂದಿಲ್ಲ.
6. ರೋಗಿ 11,231: ಗದಗನ 95 ವರ್ಷದ ವೃದ್ಧೆ. ಅಜ್ಜಿ ಬೆಂಗಳೂರು ಪ್ರಯಾಣದ ಹಿನ್ನೆಲೆ ಹೊಂದಿದ್ದರು. ಕೆಮ್ಮು, ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 25ರಂದು ದಾಖಲಾಗಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೇ ಜೂನ್ 27ರಂದು ನಿಧನರಾಗಿದ್ದಾರೆ. ಡಯಾಬಿಟಿಸ್ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.
7. ರೋಗಿ 11,278: ಕಲಬುರಗಿಯ 50 ವರ್ಷದ ಪುರುಷ. ತೀವ್ರ ಉಸಿರಾಟದ ತೊಂದರೆಯಿಂದ ಕಾಣಿಸಿಕೊಂಡಿತ್ತು. ಜೂನ್ 25ರಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಜೂನ್ 26ರಂದು ನಿಧನರಾಗಿದ್ದಾರೆ.
8. ರೋಗಿ 11,322: ಬಳ್ಳಾರಿಕಯ 75 ವರ್ಷದ ವೃದ್ಧ. ತೀವ್ರ ಉಸಿರಾಟದ ತೊಂದರೆಯಿಂದ ಕಾಣಿಸಿಕೊಂಡಿತ್ತು. ಜೂನ್ 25ರಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಜೂನ್ 26ರಂದು ನಿಧನರಾಗಿದ್ದಾರೆ.
9. ರೋಗಿ 11,406: ಧಾರವಾಡದ 73 ವರ್ಷದ ವೃದ್ಧ. ಸಾಮುದಾಯಿಕ ಪರೀಕ್ಷೆ ವೇಳೆ ಕೊರೊನಾ ತಗುಲಿರೋದು ಬೆಳಕಿಗೆ ಬಂದಿದೆ. ಸೋಂಕು ತಗುಲಿರೋದು ಖಚಿತವಾಗ್ತಿದ್ದಂತೆ ವೃದ್ಧನನ್ನು ಜೂನ್ 22ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜೂನ್ 24ರಂದು ನಿಧನರಾಗಿದ್ದು, ವೃದ್ಧ ಡಯಾಬಿಟಿಸ್ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು.
10. ರೋಗಿ 11,437: ಬೀದರ್ ನ 65 ವರ್ಷದ ವೃದ್ಧ. ಸಾವನ್ನಪ್ಪಿದ ಬಳಿಕ ವೃದ್ಧನ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿತ್ತು. ಹಾಗಾಗಿ ಸೋಂಕಿನ ಮೂಲ ತಿಳಿದು ಬಂದಿಲ್ಲ.
11. ರೋಗಿ 11,438: ಬೀದರ್ ನ 73 ವರ್ಷದ ವೃದ್ಧೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆ ಜೂನ್ 20ರಂದು ನಿಧನರಾಗಿದ್ದರು. ಮರಣ ನಂತರ ವೃದ್ಧೆಯ ಶವವನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.