-ಇಂದಿರಾ ಕ್ಯಾಂಟೀನ್ ಸ್ವಚ್ಛತೆ, ಗುಣಮಟ್ಟ, ಅಡುಗೆ ಪರಿಶೀಲನೆ
ಮೈಸೂರು: ಟಿ.ನರಸೀಪುರದ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ. ಸೋಮಶೇಖರ್ ಅವರು, ಸ್ವಚ್ಛತೆ ಹಾಗೂ ಅಡುಗೆ ತಯಾರಿಕಾ ವ್ಯವಸ್ಥೆಯನ್ನು ಖುದ್ದು ಪರಿಶೀಲನೆ ಮಾಡಿ ಚಿತ್ರಾನ್ನವನ್ನು ಟೆಸ್ಟ್ ಮಾಡಿದ್ದಾರೆ.
Advertisement
ಇಂದಿರಾ ಕ್ಯಾಂಟೀನ್ನಲ್ಲಿಯೇ ಚಿತ್ರಾನ್ನ ಸೇವಿಸಿದ ಸೋಮಶೇಖರ್ ಅವರು, ಗುಣಮಟ್ಟದ ವ್ಯವಸ್ಥೆಗೆ ಮೆಚ್ಚುಗೆಯನ್ನು ಸೂಚಿಸಿದರು. ಪ್ರತಿದಿನ ಬೆಳಗ್ಗೆ 200 ಮಂದಿಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ತಲಾ 200 ಮಂದಿಗೆ ಆಗುವಷ್ಟು ಊಟವನ್ನು ಇಲ್ಲಿ ಸಿದ್ಧಪಡಿಸುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: ಜೂನ್ 7ರ ನಂತರ ಲಾಕ್ ಡೌನ್ ಬೇಡ: ಎಸ್.ಟಿ.ಸೋಮಶೇಖರ್
Advertisement
Advertisement
ಇಂದು30-5-21ಮುಂಜಾನೆ ಮೈಸೂರಿನ ಟಿ.ನರಸೀಪುರದಲ್ಲಿರುವ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿ ಗ್ರಾಹಕರೊಂದಿಗೆ ಮಾತನಾಡಿ ಊಟದ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದುಕೊಂಡು ನಂತರ ಅಡುಗೆ ತಯಾರಿಸುವ ಸ್ಥಳ-ಸುಚಿತ್ವ & ಗುಣಮಟ್ಟದ ಬಗ್ಗೆ ಖುದ್ದು ಪರಿಶೀಲನೆ ನಡೆಸಿ ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗಿನ ಉಪಹಾರ ಸೇವನೆ ಮಾಡಲಾಯಿತು@BSYBJP @nalinkateel pic.twitter.com/aUtlYkg0T4
— S T Somashekar Gowda (@STSomashekarMLA) May 30, 2021
Advertisement
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇಂದಿರಾ ಕ್ಯಾಂಟಿನ್ನಲ್ಲಿ ಉತ್ತಮವಾದ ವ್ಯವಸ್ಥೆಯನ್ನು ಮಾಡಲಾಗಿದ್ದು, ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಸ್ವತಃ ನಾನು ತಿಂಡಿಯನ್ನು ಸೇವಿಸುವ ಮೂಲಕ ಪರಿಶೀಲನೆ ನಡೆಸಿದ್ದು, ಶುಚಿಯಾಗಿ ಮತ್ತು ರುಚಿಯಾಗಿ ತಯಾರಿಸಲಾಗಿದೆ ಎಂದು ತಿಳಿಸಿದರು. ಶಾಸಕರಾದ ಅಶ್ವಿನ್ ಕುಮಾರ್ ಹಾಗೂ ಸಂಸದರು, ಔಷಧ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ ಪ್ರತಾಪ್ ಸಿಂಹ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.