ನವದೆಹಲಿ: ಕೊರೊನಾ ಪ್ರಕರಣ ಸಂಖ್ಯೆ ದಿನದಿಂದ ದಿನ ಹೆಚ್ಚುತ್ತಿರುವುದರಿಂದ ಇಂದಿನಿಂದ ಮುಂದಿನ ಸೋಮವಾರದ ಬೆಳಗ್ಗೆಯವರೆಗೂ ದೆಹಲಿಯನ್ನು ಸಂಪೂರ್ಣ ಲಾಕ್ಡೌನ್ ಮಾಡುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಕಟಿಸಿದ್ದಾರೆ.
#WATCH| In the last 24 hours, around 23,500 cases were reported. In last 3-4 days, around 25,000 cases have been reported. Positivity rate&infection have increased. If 25,000 patients come every day then system will crumble, there's a shortage of beds:Delhi CM Arvind Kejriwal pic.twitter.com/P3xEszFkke
— ANI (@ANI) April 19, 2021
Advertisement
ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ರೊಂದಿಗೆ ಮುಖ್ಯಮಂತ್ರಿ ಕೇಜ್ರಿವಾಲ್ ಸಭೆ ನಡೆಸಿದ ಬಳಿಕ ದೆಹಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ರಾತ್ರಿ 10 ಗಂಟೆಯಿಂದ ಏಪ್ರಿಲ್ 26ರ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಲಾಕ್ಡೌನ್ ಮಾಡಲಾಗುವುದು ಎಂದು ಘೋಷಿಸಿದರು. ಅಗತ್ಯ ಸೇವೆಗಳು ಹೊರತು ಪಡಿಸಿ ಉಳಿದ ಎಲ್ಲ ಸೇವೆಗಳು ಈ ಲಾಕ್ಡೌನ್ ಅವಧಿಯಲ್ಲಿ ಬಂದ್ ಆಗಿರಲಿದೆ ಎಂದು ಅವರು ತಿಳಿಸಿದರು.
Advertisement
ದೆಹಲಿಯಲ್ಲಿ ಇಂದು ರಾತ್ರಿ 10 ಗಂಟೆಯಿಂದ 6 ದಿನ ಲಾಕ್ಡೌನ್: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಘೋಷಣೆ #COVIDSecondWave #COVID19 #Delhi
— PublicTV (@publictvnews) April 19, 2021
Advertisement
ಪ್ರತಿ ದಿನದ ಕೋವಿಡ್ ಪ್ರಕರಣಗಳೊಂದಿಗೆ 25,462 ಹೊಸ ಪ್ರಕರಣಗಳು ಹೆಚ್ಚಾಗುತ್ತಿದೆ. ಅಲ್ಲದೇ ಪಾಸಿಟಿವ್ ಪ್ರಕರಣವು ಶೇಕಡಾ 29.74ಕ್ಕೆ ಏರಿಕೆಯಾಗಿದೆ ಎಂದು ಕಳೆದ ವಾರ ಸಿಎಂ ಕೇಜ್ರಿವಾಲ್ ವರ್ಚುವಲ್ ವೀಡಿಯೋ ಕಾನ್ಫರೆನ್ಸ್ ಮೂಲಕ ಕೊರೊನಾ ಹೆಮ್ಮಾರಿಯನ್ನು ನಗರದಿಂದ ಓಡಿಸಲು ವಾರಾಂತ್ಯದಲ್ಲಿ ಕರ್ಫ್ಯೂ ಘೋಷಿಸಿದ್ದರು.
Advertisement
ದೆಹಲಿಯಲ್ಲಿ ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆ ಇಲ್ಲ, ಮದುವೆಯಲ್ಲಿ 50 ಜನರಿಗೆ ಮಾತ್ರ ಅವಕಾಶ: ಸಿಎಂ ಅರವಿಂದ್ ಕೇಜ್ರಿವಾಲ್ #COVIDSecondWave #COVID19 #Delhi
— PublicTV (@publictvnews) April 19, 2021