ನವದೆಹಲಿ: ಭಾರತ-ಚೀನಾದ ಸೈನಿಕರ ನಡುವೆ ಸೋಮವಾರ ರಾತ್ರಿ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ನಮ್ಮ ಸೇನೆಯ 20 ಯೋಧರು ಹುತಾತ್ಮರಾಗಿದ್ದಾರೆ.
ಈ ಯೋಧರಲ್ಲಿ ಗರಿಷ್ಠ 13 ಮಂದಿ ಬಿಹಾರದ ಎರಡು ವಿಭಿನ್ನ ರೆಜಿಮೆಂಟ್ಗಳಿಂದ ಬಂದವರಾಗಿದ್ದರು. ಹುತಾತ್ಮ ಕರ್ನಲ್ ಸಂತೋಷ್ ಬಾಬು ಅವರು ಕೂಡ ಬಿಹಾರ್ ರೆಜಿಮೆಂಟ್ನವರಾಗಿದ್ದಾರೆ. ಇದನ್ನೂ ಓದಿ: ನಮ್ಮ ತಾಳ್ಮೆಯನ್ನು ಕೆಣಕಬೇಡಿ -ವೈರಿ ಚೀನಾಗೆ ಮೋದಿ ಖಡಕ್ ಸಂದೇಶ
Advertisement
Advertisement
ಯಾವ ರೆಜಿಮೆಂಟ್ನಿಂದ ಎಷ್ಟು ಹುತಾತ್ಮರು?
16 ಬಿಹಾರ್ ರೆಜಿಮೆಂಟ್: 12 ಯೋಧರು
3 ಪಂಜಾಬ್ ರೆಜಿಮೆಂಟ್: 3 ಯೋಧರು
3 ಮಧ್ಯಮ ರೆಜಿಮೆಂಟ್: 2 ಯೋಧರು
12 ಬಿಹಾರ್ ರೆಜಿಮೆಂಟ್: ಓರ್ವ ಯೋಧ
81 ಮೌಂಟ್ ಬ್ರಿಗೇಡ್ ಸಿಗ್ನಲ್ ಕಂಪನಿ: ಓರ್ವ ಯೋಧ
81 ಫೀಲ್ಡ್ ರೆಜಿಮೆಂಟ್: ಓರ್ವ ಯೋಧ ಇದನ್ನೂ ಓದಿ: ಗಾಲ್ವಾನ್ ಕಣಿವೆಯ ಸಾರ್ವಭೌಮತ್ವ ಯಾವಗಲೂ ನಮಗೆ ಸೇರಿದ್ದು- ಮತ್ತೆ ಕೆಣಕಿದ ಚೀನಾ
Advertisement
Advertisement
16 ಬಿಹಾರ್ ರೆಜಿಮೆಂಟ್:
> ಕರ್ನಲ್ ಬಿ. ಸಂತೋಷ್ ಬಾಬು – ತೆಲಂಗಾಣ (ಹೈದರಾಬಾದ್)
> ಹವಾಲ್ದಾರ್ ಸುನಿಲ್ ಕುಮಾರ್- ಬಿಹಾರ (ಪಾಟ್ನಾ)
> ಕಾನ್ಸ್ಟೇಬಲ್ ಕುಂದನ್ ಕುಮಾರ್ – ಬಿಹಾರ (ಸಹರ್ಸಾ)
> ಕಾನ್ಸ್ಟೇಬಲ್ ಅಮನ್ ಕುಮಾರ್ – ಬಿಹಾರ (ಸಮಸ್ತಿಪುರ)
> ದೀಪಕ್ ಕುಮಾರ್ – ಮಧ್ಯಪ್ರದೇಶ (ರೇವಾ)
> ಕಾನ್ಸ್ಟೇಬಲ್ ಚಂದನ್ ಕುಮಾರ್ – ಬಿಹಾರ (ಭೋಜ್ಪುರ)
> ಕಾನ್ಸ್ಟೇಬಲ್ ಗಣೇಶ ಕುಂಜಮ್ – ಪಶ್ಚಿಮ ಬಂಗಾಳ (ಸಿಂಗ್ಭೂಮ್)
> ಕಾನ್ಸ್ಟೇಬಲ್ ಗಣೇಶ ರಾಮ್ – ಛತ್ತೀಸಗಢ (ಕಾಂಕರ್)
> ಕಾನ್ಸ್ಟೇಬಲ್ ಕೆ.ಕೆ. ಓಜಾ – ಜಾರ್ಖಂಡ್ (ಸಾಹಿಬ್ಗಂಜ್)
> ಕಾನ್ಸ್ಟೇಬಲ್ ರಾಜೇಶ್ ಒರಾನ್ – ಪಶ್ಚಿಮ ಬಂಗಾಳ (ಬಿರ್ಭುಮ್)
> ಸಿಪಾಯಿ ಸಿ.ಕೆ.ಪ್ರಧಾನ್ – ಒಡಿಶಾ (ಕಂಧಮಾಲ್)
> ನಾಯಬ್ ಸುಬೇದಾರ್ ನಂದುರಾಮ್ – ಒಡಿಶಾ (ಮಯೂರ್ಭಂಜ್)
3 ಪಂಜಾಬ್ ರೆಜಿಮೆಂಟ್:
> ಕಾನ್ಸ್ಟೇಬಲ್ ಗುರ್ತೇಜ್ ಸಿಂಗ್ – ಪಂಜಾಬ್ (ಮಾನ್ಸಾ)
> ಸಿಪಾಯಿ ಅಂಕುಷ್ – ಹಿಮಾಚಲ ಪ್ರದೇಶ (ಹಮೀರ್ಪುರ)
> ಕಾನ್ಸ್ಟೇಬಲ್ ಗುರ್ವಿಂದರ್ ಸಿಂಗ್ – ಪಂಜಾಬ್ (ಸಂಗ್ರೂರ್)
3 ಮಧ್ಯಮ ರೆಜಿಮೆಂಟ್:
> ನಾಯಬ್ ಸುಬೇದಾರ್ ಸತ್ನಮ್ ಸಿಂಗ್ – ಪಂಜಾಬ್ (ಗುರುದಾಸ್ಪುರ)
> ನಾಯಬ್ ಸುಬೇದಾರ್ ಮಂದೀಪ್ ಸಿಂಗ್ – ಪಂಜಾಬ್ (ಪಟಿಯಾಲ)
12 ಬಿಹಾರ ರೆಜಿಮೆಂಟ್:
> ಕಾನ್ಸ್ಟೇಬಲ್ ಜೈಕಿಶೋರ್ ಸಿಂಗ್ – ಬಿಹಾರ (ವೈಶಾಲಿ)
81 ಮೌಂಟ್ ಬ್ರಿಗೇಡ್ ಸಿಗ್ನಲ್ ಕಂಪನಿ:
> ಹವಾಲ್ದಾರ್ ಬಿಪುಲ್ ರಾಯ್ – ಉತ್ತರ ಪ್ರದೇಶ (ಮೀರತ್)
81 ಫೀಲ್ಡ್ ರೆಜಿಮೆಂಟ್:
> ಹವಾಲ್ದಾರ್ ಕೆ.ಪಳನಿ – ತಮಿಳುನಾಡು (ಮಧುರೈ)
ಕರ್ನಲ್ ಸಂತೋಷ್:
ತೆಲಂಗಾಣದ ಸೂರ್ಯಪೇಟೆಯ ಹುತಾತ್ಮ ಕರ್ನಲ್ ಸಂತೋಷ್ ಬಾಬು ಅವರನ್ನು ಭಾರತದ ಗಡಿಯ ರಕ್ಷಣೆಗಾಗಿ 18 ತಿಂಗಳು ಲಡಾಖ್ನಲ್ಲಿ ನಿಯೋಜಿಸಲಾಗಿತ್ತು. ಅವರು ಕಮಾಂಡಿಂಗ್ ಅಧಿಕಾರಿಯಾಗಿದ್ದರು. ಮಗನ ನಿಧನದ ಸುದ್ದಿ ಕೇಳುತ್ತಿದ್ದಂತೆ ಸಂತೋಷ್ ಬಾಬು ಅವರ ತಾಯಿ, “ಒಬ್ಬನೇ ಮಗ ಕಳೆದುಹೋದ ಎನ್ನುವ ದುಃಖವಿದೆ. ಆದರೆ ಅವನು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾನೆ ಎಂಬ ಹೆಮ್ಮೆ ಇದೆ” ಎಂದು ಮಂಗಳವಾರ ಹೇಳಿದ್ದರು.
ಕುಂದನ್ ಓಜಾ:
26 ವರ್ಷದ ಹುತಾತ್ಮ ಕುಂದನ್ ಓಜಾ ಅವರ ಪತ್ನಿ 17 ದಿನಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದರು. ಆದರೆ ಕುಂದನ್ ಓಜಾ ಅವರ ಮಗಳ ಮುಖವನ್ನು ಸಹ ನೋಡಲಾಗಲಿಲ್ಲ. ಅವರ ತಂದೆ ರವಿಶಂಕರ್ ಓಜಾ ಕೃಷಿಕಯಾಗಿದ್ದಾರೆ. ಕುಂದನ್ ಅವರನ್ನು 2011ರಲ್ಲಿ ಬಿಹಾರ ರೆಜಿಮೆಂಟ್ ಕತಿಹಾರ್ ಗೆ ನಿಯೋಜಿಸಲಾಗಿತ್ತು. ಅವರು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು.