ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿದ್ದು, ಊರಲ್ಲಿ ಕಾಲ ಕಳೆಯುತ್ತಿದ್ದಾರೆ. ತಮ್ಮ ಊರಿನಲ್ಲಿ ಸ್ನೇಹಿತರ ಮನೆಗೆ ಊಟಕ್ಕೆ ಹೋಗಿದ್ದು, ಈ ವೇಳೆ ಮಕ್ಕಳನ್ನು ಸಹ ಮಾತನಾಡಿಸಿದ್ದಾರೆ. ಆಗ ಇಂಗ್ಲಿಷ್ ಮೀಡಿಯಂನಲ್ಲಿ ಓದಿದರೆ ಬುದ್ಧಿವಂತ ಆಗುತ್ತಾರೆ ಎನ್ನುವುದು ಸುಳ್ಳು ಎಂದು ಹೇಳಿದ್ದಾರೆ.
Advertisement
ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಗೆ ಮತದಾನ ಮಾಡಲು ಸಿದ್ದರಾಮಯ್ಯ ತೆರಳಿದ್ದು, ಸ್ನೇಹಿತರ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಹೀಗೆ ಸ್ನೇಹಿತರೊಬ್ಬರ ಮನೆಗೆ ಊಟಕ್ಕೆ ತೆರಳಿದ್ದು, ಮಾಂಸಾಹಾರ ಭೋಜನ ಸವಿದಿದ್ದಾರೆ. ಇಂಗ್ಲಿಷ್ ಮೀಡಿಯಂನಲ್ಲಿ ಓದಿದವರೆಲ್ಲ ಬುದ್ಧಿವಂತರಾಗಲ್ಲ. ನಾನು ಕನ್ನಡ ಮೀಡಿಯಂನಲ್ಲಿ ಓದಿಲ್ವಾ, ಕನ್ನಡ ಮಾಧ್ಯಮದಲ್ಲಿ ಓದಿದವರು ಸಹ ದೊಡ್ಡ ವ್ಯಕ್ತಿಗಳಾಗುತ್ತಾರೆ ಎಂದು ಸ್ನೇಹಿತರೊಂದಿಗೆ ಹರಟೆ ಹೊಡೆದಿದ್ದಾರೆ.
Advertisement
Advertisement
ಇದೇ ವೇಳೆ ಹಳೆ ನೆನಪುಗಳನ್ನು ಮೆಲುಕು ಹಾಕಿರುವ ಅವರು, ನಾನು ಮೊದಲು ದಿನ ಮೂರು ಹೊತ್ತು ನಾನ್ವೆಜ್ ತಿನ್ನುತ್ತಿದ್ದೆ. ಈಗ ಆಂಜಿಯೋಗ್ರಾಮ್ ಆದಮೇಲೆ ಕಡಿಮೆಮಾಡಿದ್ದೇನೆ. ಭಾನುವಾರ, ಬುಧವಾರ, ಶುಕ್ರವಾರ ನಾನ್ವೆಜ್ ತಿನ್ನುತ್ತೇನೆ. ಸಿಕ್ಕಾಪಟ್ಟೆ ಸಿಗರೇಟ್ ಸೇದುತ್ತಿದ್ದೆ. ಸ್ನೇಹಿತ ಮಹೇಶ್ ಫಾರಿನ್ನಿಂದ ಎರಡು ಬಂಡಲ್ ಸಿಗರೇಟು ತಂದು ಕೊಟ್ಟಿದ್ದ. ಕೂತ್ಕೊಂಡು ಎಲ್ಲವನ್ನೂ ಸೇದ್ಬಿಟ್ಟೆ. ಒಂದು ದಿನ ಟ್ರಿಪ್ ಗೆ ಹೋದಾಗ ನಾನು ಇಷ್ಟೋಂದು ಸಿಗರೇಟ್ ಸೇದುತ್ತೀನಿ ಏನಾಗ್ಬೇಡ ಎಂದು ಕೂತ್ಕೊಂಡು ಯೋಚನೆ ಮಾಡಿದೆ. ಬಳಿಕ ಒಂದು ವಾರ ಟ್ರಿಪ್ಗೆ ಹೋಗಿ ಬರೋವಷ್ಟರಲ್ಲಿ ಸಂಪೂರ್ಣ ಸಿಗರೇಟ್ ಬಿಟ್ಟೆ ಎಂದು ಹೇಳಿದರು.